Updated on: Mar 09, 2023 | 10:22 AM
ಜಾನ್ವಿ ಕಪೂರ್ ಅವರು ಬಾಲಿವುಡ್ನಲ್ಲಿ ನೆಲೆ ಊರಲು ಪ್ರಯತ್ನಿಸುತ್ತಿದ್ದಾರೆ. ಸ್ಟಾರ್ ಕಿಡ್ ಆಗಿರುವುದಕ್ಕೆ ಅವರಿಗೆ ಆಫರ್ಗಳಿಗೇನು ಬರ ಇಲ್ಲ. ಆದರೆ, ಒಂದು ಗೆಲುವು ಅವರಿಗೆ ಬೇಕಿದೆ.
ಜಾನ್ವಿ ಕಪೂರ್ ಅವರು ಈಗ ವಿಂಟೇಜ್ ಲುಕ್ನ ಫೋಟೋ ಹಂಚಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಈ ಫೋಟೋಗಳನ್ನು ಜಾನ್ವಿ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಜಾನ್ವಿ ಕಪೂರ್ನ ವಿಂಟೇಜ್ ಲುಕ್ನಲ್ಲಿ ನೋಡಿದ ಅನೇಕರಿಗೆ ಅವರ ತಾಯಿ ಶ್ರೀದೇವಿ ಅವರು ನೆನಪಾಗಿದ್ದಾರೆ. ಈ ಬಗ್ಗೆ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.
ಜಾನ್ವಿ ಕಪೂರ್ ಅವರು ಜೂ.ಎನ್ಟಿಆರ್ 30ನೇ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಇತ್ತೀಚೆಗೆ ಅವರ ಫಸ್ಟ್ ಲುಕ್ ರಿವೀಲ್ ಆಗಿತ್ತು. ಜಾನ್ವಿ ಕಪೂರ್ ಅವರ ಮೊದಲು ತೆಲುಗು ಸಿನಿಮಾ ಇದಾಗಿದೆ.
ಇತ್ತೀಚೆಗೆ ಮಾತನಾಡಿದ್ದ ಜಾನ್ವಿ ಕಪೂರ್ ಅವರು ‘ಅವಕಾಶ ಸಿಗುತ್ತಿದೆ. ಆದರೆ, ಗೌರವ ಸಿಗುತ್ತಿಲ್ಲ. ಅದನ್ನು ನಾನು ಸಂಪಾದಿಸಬೇಕಿದೆ’ ಎಂದು ಹೇಳಿದ್ದರು.