ಬೀದರ್​ನಲ್ಲಿ ರೋಮಾಂಚನಕಾರಿ ಏರ್ ಶೋ: ಲೋಹದ ಹಕ್ಕಿಗಳ ಹಾರಾಟಕ್ಕೆ ಜನರು ಫಿದಾ

ಇಂದಿನಿಂದ ಬೀದರ್ ಕೋಟೆ ಆವರಣದಲ್ಲಿ ಎರಡು ದಿನಗಳ ಕಾಲ ಬೀದರ್​ನ ಏರ್ ಬೇಸ್ ವತಿಯಿಂದ ಏರ್ ಶೋ ಆಯೋಜನೆ ಮಾಡಲಾಗಿದೆ. ಜಿಲ್ಲೆಯ ಜನರ ಆಸೆಯಂತೆ ವಾಯು ಸೇನೆಯ ಶಕ್ತಿಯನ್ನ ಜನರಿಗೆ ಮತ್ತು ಮಕ್ಕಳಿಗೆ ತೋರಿಸುವ ಉದ್ದೇಶದಿಂದ ಏರ್ ಶೋ ಆಯೋಜಿಸಲಾಗಿದ್ದು, ಮೊದಲ ದಿನ ಲೋಹದ ಹಕ್ಕಿಗಳ ಹಾರಾಟ ಕಂಡು ಖುಷಿಪಟ್ಟರು. ಅದರ ಒಂದು ಝಲಕ್​ ಇಲ್ಲಿದೆ.

| Updated By: ಗಂಗಾಧರ​ ಬ. ಸಾಬೋಜಿ

Updated on: Aug 30, 2024 | 9:05 PM

ವಾಯುಸೇನೆಯ ಸಾಹಸವನ್ನ ಆಕಾಶದಲ್ಲಿ ತೋರಿಸುವ ಉದ್ದೇಶದಿಂದ ಇಂದು ಬೀದರ್​ನ ಕೋಟೆ ಆವರಣದಲ್ಲಿ ಏರ್ ಶೋ ಆಯೋಜಿಸಲಾಗಿತ್ತು. ಸಾವಿರಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಏರ್ ಶೋ ನೋಡಿ ಖುಷಿ ಪಟ್ಟರು. ಸೂರ್ಯಕಿರಣ ಯುದ್ದ ವಿಮಾನಗಳ ಶಕ್ತಿ ಪ್ರದರ್ಶನ ಎಲ್ಲೆರ ಗಮನ ಸೆಳೆದವು.

1 / 6
ಬೀದರ್ ಜಿಲ್ಲೆಯ ಜನರ ಆಸೆಯಂತೆ ವಾಯು ಸೇನೆಯ ಶಕ್ತಿಯನ್ನ ಜನರಿಗೆ ಮಕ್ಕಳಿಗೆ ತೋರಿಸುವ ಉದ್ದೇಶದಿಂದ ಬೀದರ್ ಕೋಟೆ ಆವರಣದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಬೀದರ್​ನ ಏರ್ ಬೇಸ್ ವತಿಯಿಂದ ಏರ್ ಶೋ ಆಯೋಜನೆ ಮಾಡಲಾಗಿದೆ.

2 / 6
ಇಂದು ನಡೆದ ಏರ್ ಶೋನಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ನಾಳೆ ವಿವಿಧ ಶಾಲೆಯ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಏರ್ ಶೋ ನೋಡಲು ಆಗಮಿಸುವ ನಿರಿಕ್ಷೇ ಇದೆ. 10 ನಿಮಿಷದ ಸೂರ್ಯಕಿರಣ ಯುದ್ಧ ವಿಮಾನಗಳು ಆಕಾಶದಲ್ಲಿ ಹಾರಾಡುವ ಮೂಲಕ ಮಕ್ಕಳು ಹಾಗೂ ನೆರೆದಿದ್ದವರಲ್ಲಿ ರೋಮಾಚನ ಉಂಟು ಮಾಡಿದೆ.

3 / 6
ಇದು ಎರಡನೇ ಬಾರಿಗೆ ಶಾಲಾ ಮಕ್ಕಳು ಹಾಗೂ ಕೆಲವು ಆಯ್ದ ಸಾರ್ವಜನಿಕರಿಗೆ ಮತ್ತು ಸೈನಿಕರ ಕುಟುಂಬದ ಸದಶ್ಯರಿಗೆ ಏರ್ ಶೋ ಕಾರ್ಯಕ್ರಮದ ನೋಡಲು ಅವಕಾಶ ಕಲ್ಪಿಸಲಾಗಿತ್ತು.

4 / 6
ಸೂರ್ಯ ಕಿರಣ ಯುದ್ದ ವಿಮಾನಗಳು ಆಕಾಶದಲ್ಲಿ ಹೃದಯ ನಡುಗಿಸುವಂತಹ ಶಬ್ಧ ಮಾಡುತ್ತಾ ತ್ರಿವರ್ಣ ಧ್ವಜದ ಬಣ್ಣವನ್ನ ಉಗುಳುತ್ತಾ ಮೇಲಕ್ಕೇರಿದ ವಿಮಾನಗಳು ಓರೆಯಾದ ತಿರುವಿನೊಂದಿಗೆ ಮುಂದೆ ಸಾಗಿ ನೋಡುಗರನ್ನು ಅಚ್ಚರಿ ಮಾಡಿದವು.

5 / 6
ಮತ್ತೆ ಕೆಲ ವಿಮಾನಗಳು ಮೇಲಕ್ಕೆ ಹೋಗಿ ತಲೆ ಕೆಳಗಾಗಿ, ಪಲ್ಟಿ ಹೊಡೆಯುತ್ತಲೇ ಜನರನ್ನು ಕಕ್ಕಾಬಿಕ್ಕಿಯಾಗಿಸಿದವು. ಹತ್ತಿರದಿಂದ ಲೋಹದ ಹಕ್ಕಿಯನ್ನ ನೋಡಿ ಆಕಾಶದಲ್ಲಿ ಹಾರಾಡುವುದು ಹಾಗೂ ಅದನ್ನ ಚಾಲನೆ ಮಾಡಿದ ಪೈಲಟ್​ಗಳನ್ನ ಕಣ್ಣಾರೆ ಕಂಡು ಶಾಲಾ ಮಕ್ಕಳು ಖುಷಿಪಟ್ಟಿದ್ದು, ನಾವು ಪೈಲೆಟ್  ಆಗಬೇಕೆಂಬ ಆಸೆಯನ್ನ ಮಕ್ಕಳು ವ್ಯಕ್ತಪಡಿಸಿದ್ದಾರೆ.

6 / 6
Follow us