- Kannada News Photo gallery Alia Bhatt net worth cars and houses here is 29 year old RRR actress Alia net worth details
Alia Bhatt: 29 ವರ್ಷದ ಆಲಿಯಾ ಬಹುಕೋಟಿಗಳ ಒಡತಿ! ನಟಿಯ ಒಟ್ಟು ಆಸ್ತಿ ಎಷ್ಟು?
Alia Bhatt Net Worth | RRR: ಆಲಿಯಾ ಭಟ್ ಈಗ ಬಹುಭಾಷಾ ತಾರೆ. ದಕ್ಷಿಣದಲ್ಲೂ ಅವರು ಛಾಪು ಮೂಡಿಸುತ್ತಿದ್ದಾರೆ. 29 ವರ್ಷದ ನಟಿಯ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ 165 ಕೋಟಿ ರೂ ಎನ್ನುತ್ತವೆ ವರದಿಗಳು. ಅಲ್ಲದೇ ನಟಿಯ ಹೆಸರಿನಲ್ಲಿ ಲಂಡನ್ನಲ್ಲಿ ಸೇರಿದಂತೆ ಮೂರು ಮನೆಗಳಿವೆ ಎಂದೂ ಹೇಳಲಾಗಿದೆ. ಆಲಿಯಾ ಬಳಿ ದುಬಾರಿ ಬೆಲೆಯ ಕಾರುಗಳೂ ಇವೆ!
Updated on: Mar 19, 2022 | 9:59 AM

ಆಲಿಯಾ ಭಟ್ ಈಗ ಬಹುಭಾಷಾ ತಾರೆ. ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದಲ್ಲಿ ಹೆಸರು ಮಾಡಿದ ಅವರ ಬತ್ತಳಿಕೆಯಲ್ಲಿ ಈಗ ‘ಆರ್ಆರ್ಆರ್’ ಹಾಗೂ ‘ಬ್ರಹ್ಮಾಸ್ತ್ರ’ ಚಿತ್ರಗಳಿವೆ. ಎರಡೂ ಕೂಡ ಪ್ಯಾನ್ ಇಂಡಿಯಾ ಚಿತ್ರಗಳೆನ್ನುವುದು ವಿಶೇಷ.

ಸಣ್ಣ ವಯಸ್ಸಿನಿಂದಲೇ ಬಾಲಿವುಡ್ನಲ್ಲಿ ಸಕ್ರಿಯರಾಗಿರುವ ಆಲಿಯಾಗೆ ಈಗ 29ರ ಹರೆಯ. ಅವರು ಎಷ್ಟು ಕೋಟಿಗಳ ಆಸ್ತಿ ಹೊಂದಿದ್ದಾರೆ ಎಂಬುದನ್ನು ತಿಳಿದರೆ ನಿಮಗೆ ಅಚ್ಚರಿಯಾಗದಿರದು.

ಕೆಲವು ವರದಿಗಳ ಪ್ರಕಾರ ಆಲಿಯಾ ಭಟ್ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ 165 ಕೋಟಿ ರೂಗಳು. ಜತೆಗೆ ಅವರು ಮುಂಬೈನ ಬಾಂದ್ರಾದಲ್ಲಿಐಷಾರಾಮಿ ಮನೆಯನ್ನು ಹೊಂದಿದ್ದು, ಅದರ ಮೌಲ್ಯ 32 ಕೋಟಿ ರೂಗೂ ಹೆಚ್ಚು.

ಆಲಿಯಾ ಲಂಡನ್ನಲ್ಲೂ ನಿವಾಸವನ್ನು ಹೊಂದಿದ್ದಾರೆ ಎನ್ನುತ್ತವೆ ವರದಿಗಳು. ಇತ್ತೀಚೆಗಷ್ಟೇ ಆಲಿಯಾ ಜುಹುವಿನಲ್ಲಿ ಆಸ್ತಿ ಖರೀದಿಸಿದ್ದು ಸುದ್ದಿಯಾಗಿತ್ತು.

ಆಲಿಯಾಗೆ ಐಷಾರಾಮಿ ವಾಹನಗಳೆಂದರೆ ಪ್ರಿಯ. ಅವರ ಬಳಿ ರೇಂಜ್ ರೋವರ್, ಆಡಿ ಎ6, ಬಿಎಂಡಬ್ಲ್ಯು 7 ಸಿರೀಸ್ ಮೊದಲಾದ ದುಬಾರಿ ಬೆಲೆಯ ಕಾರುಗಳಿವೆ. ಇಷ್ಟು ಸಣ್ಣ ವಯಸ್ಸಿಗೆ ಆಲಿಯಾ ಎಷ್ಟೆಲ್ಲಾ ಕೋಟಿಗಳ ಒಡತಿ ಎಂದು ತಿಳಿದು ಅಭಿಮಾನಿಗಳು ಹುಬ್ಬೇರಿಸಿದ್ದಾರೆ.



