- Kannada News Photo gallery Amruthadhaare Serial Here is What Happend In first day episode of Rajesh Nataranga And Chaya Singh Serial
‘ಅಮೃತಧಾರೆ’ ಧಾರಾವಾಹಿ: ಇಲ್ಲಿ ನಾಯಕ-ನಾಯಕಿ ಪಡುತ್ತಿರುವ ಕಷ್ಟಗಳು ಒಂದೇ
Amruthadhaare Serial: ಗೌತಮ್ ದೊಡ್ಡ ಉದ್ಯಮಿ. ಭೂಮಿಕಾ ಟ್ಯೂಷನ್ನಲ್ಲಿ ಪಾಠ ಹೇಳಿಕೊಡುವವಳು. ಇಬ್ಬರ ಮಧ್ಯೆ ಅನೇಕ ಸಾಮ್ಯತೆ ಇದೆ.
Updated on: May 30, 2023 | 11:02 AM

‘ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆರಂಭಿಸಿದೆ. ಗೌತಮ್ ದಿವಾನ್ ಪಾತ್ರದಲ್ಲಿ ರಾಜೇಶ್ ನಟರಂಗ್ ಹಾಗೂ ಭೂಮಿಕಾ ಸದಾಶಿವ್ ಪಾತ್ರದಲ್ಲಿ ಛಾಯಾ ಸಿಂಗ್ ಕಾಣಿಸಿಕೊಳ್ಳುತ್ತಿದ್ದಾರೆ.

ಗೌತಮ್ ಹಾಗೂ ಭೂಮಿಕಾ ಬದುಕು ಬೇರೆಬೇರೆ. ಗೌತಮ್ನದ್ದು ಐಷಾರಾಮಿ ಜೀವನ. ಭೂಮಿಕಾ ಮಧ್ಯಮ ವರ್ಗದ ಹುಡುಗಿ.

ಗೌತಮ್ ದೊಡ್ಡ ಉದ್ಯಮಿ. ಭೂಮಿಕಾ ಟ್ಯೂಷನ್ನಲ್ಲಿ ಪಾಠ ಹೇಳಿಕೊಡುವವಳು. ಇಬ್ಬರ ಮಧ್ಯೆ ಅನೇಕ ಸಾಮ್ಯತೆ ಇದೆ. ಇವರು ಕುಟುಂಬದಲ್ಲಿ ಹಿರಿ ಮಕ್ಕಳು.

ಗೌತಮ್ಗೆ 45 ವರ್ಷ, ಭೂಮಿಕಾಗೆ 35 ವರ್ಷ. ಇಬ್ಬರಿಗೂ ಮದುವೆ ಆಗಿಲ್ಲ. ಎಲ್ಲಕಿಂತ ಮುಖ್ಯವಾಗಿ ಇವರು ಕುಟುಂಬಕ್ಕೆ ಎಷ್ಟೇ ಪ್ರೀತಿ ತೋರಿಸಿದರೂ ಕುಟುಂಬ ಇವರಿಗೆ ಪ್ರೀತಿ ತೋರಿಸುತ್ತಿಲ್ಲ.

‘ಗೌತಮ್- ಭೂಮಿಕಾ ಬದುಕು ಬೇರೆ ಆದ್ರೂ.. ಭಾವ ಒಂದೇ’ ಎನ್ನುವ ಕ್ಯಾಪ್ಶನ್ನೊಂದಿಗೆ ಮೊದಲ ಎಪಿಸೋಡ್ ಪ್ರೋಮೋ ಹಂಚಿಕೊಳ್ಳಲಾಗಿದೆ.

ಮೊದಲ ದಿನದ ‘ಅಮೃತಧಾರೆ’ ಎಪಿಸೋಡ್ನ ಎಲ್ಲರೂ ಇಷ್ಟಪಟ್ಟಿದ್ದಾರೆ. ಧಾರಾವಾಹಿ ನೋಡಿದ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.









