‘ಏಳು ವರ್ಷದ ಗೆಳೆಯನ ಜೊತೆ ಸಪ್ತಪದಿ’; ಖುಷಿಯ ಕ್ಷಣ ವಿವರಿಸಿದ ‘ಅಮೃತವರ್ಷಿಣಿ’ ರಜಿನಿ
‘ಅಮೃತವರ್ಷಿಣಿ’ ಧಾರಾವಾಹಿ ಖ್ಯಾತಿಯ ರಜನಿ ಅವರು ಇತ್ತೀಚೆಗೆ ವಿವಾಹ ಆಗಿದ್ದಾರೆ. ಜಿಮ್ ಟ್ರೇನರ್ ಅಗಿರುವ ಅರುಣ್ ಜೊತೆ ಅವರು ಸಪ್ತಪದಿ ತುಳಿದರು. ಈ ಸಂದರ್ಭದ ಫೋಟೋನ ಸೋಶಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಂಡು ಗಮನ ಸೆಳೆದಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ.
Updated on: Nov 13, 2025 | 8:34 AM

‘ಅಮೃತವರ್ಷಿಣಿ’ ಧಾರಾವಾಹಿಯಲ್ಲಿ ಅಮೃತಾ ಪಾತ್ರ ಮಾಡಿ ಗಮನ ಸೆಳೆದವರು ರಜಿನಿ. ಈಗ ಅವರು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಅರುಣ್ ಜೊತೆ ಅವರು ಸಪ್ತಪದಿ ತುಳಿದಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮದುವೆಗೂ ಮೊದಲು ತೆಗೆದ ಫೋಟೋ, ವಿವಾಹದ ಕ್ಷಣ, ವಿವಾಹಕ್ಕೂ ಮೊದಲು ಪ್ರೀತಿಯಿಂದ ಮುತ್ತಿಟ್ಟಿದ್ದು, ತಾಳಿ ಕಟ್ಟುವಾಗಿನ ಖುಷಿ ಹೀಗೆ ಎಲ್ಲವನ್ನೂ ಸೆರೆ ಹಿಡಿದು ರಜಿನಿ ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋಗಳು ಗಮನ ಸೆಳೆದಿವೆ.

‘ಏಳು ವರುಷದ ಗೆಳೆಯನ ‘ಸಪ್ತಪದಿ’ ತುಳಿದು ಈಗ ಒಂದಾದ ಕ್ಷಣ. ಜೀವನದ ಅತ್ಯಮೂಲ್ಯದ ದಿನಕ್ಕೆ ತುಂಬಾ ಪ್ರೀತಿ ತೋರಿದ ಎಲ್ಲರಿಗು ಚಿರಋಣಿ’ ಎಂದು ರಜಿನಿ ಬರೆದುಕೊಂಡಿದ್ದಾರೆ. ರಜಿನಿ ಫೋಟೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ರಜಿನಿ ಅವರು ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಗಮನ ಸೆಳೆದವರು. ಅವರು ಕೆಲವು ಶೋಗೆ ಆ್ಯಂಕರಿಂಗ್ ಕೂಡ ಮಾಡಿದ್ದಾರೆ. ಈಗಲೂ ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿರೋ ಅವರಿಗೆ ಹೊಸ ಹೊಸ ಆಫರ್ಗಳು ಬರುತ್ತಿವೆ. ಈ ಮಧ್ಯೆ ಹೊಸ ಬಾಳು ಆರಂಭಿಸಿದ್ದಾರೆ.

ರಜಿನಿ ಹಾಗೂ ಅರುಣ್ ಅವರು ಜಿಮ್ನಲ್ಲಿ ಭೇಟಿ ಆಗಿದ್ದು. ಈ ಭೇಟಿ ನಡೆದಿದ್ದು 7 ವರ್ಷಗಳ ಹಿಂದೆ. ಆ ಬಳಿಕ ಇವರ ಮಧ್ಯೆ ಪ್ರೀತಿ ಮೂಡಿತು ಎನ್ನಲಾಗಿದೆ. ಈಗ ಈ ಪ್ರೀತಿಗೆ ಹೊಸ ಅರ್ಥವನ್ನು ಅವರು ನೀಡಿದ್ದಾರೆ.




