Updated on:Nov 20, 2022 | 3:38 PM
ನಟಿ ಅಮೂಲ್ಯ ತಾಯ್ತನದ ಅನುಭವವನ್ನು ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗೆ ತಮ್ಮ ಅವಳಿ ಮಕ್ಕಳ ನಾಮಕರಣ ಮಾಡಿದ್ದರು. ಸದ್ಯ ತಿರುಪತಿ ತಿಮ್ಮಪ್ಪನ ದರುಶನ ಪಡೆದಿದ್ದು, ಮಕ್ಕಳ ಮುಡಿ ದೇವರಿಗೆ ಅರ್ಪಿಸಿದ್ದಾರೆ.
ಮಕ್ಕಳ ಮುಡಿ ನೀಡುವ ಶಾಸ್ತ್ರಕ್ಕೆ ಇಡೀ ಕುಟುಂಬ ಸಮೇತ ತಿರುಪತಿಗೆ ನಟಿ ಅಮೂಲ್ಯ ಹೋಗಿದ್ದು, ತಿಮ್ಮಪ್ಪನ ದರುಶನ ಪಡೆದುಕೊಂಡರು.
ನಾಮಕರಣ ಮಾಡಿ ಕೆಲವೇ ದಿನಗಳ ನಂತರ ಅಮೂಲ್ಯ ಮತ್ತು ಜಗದೀಶ್ ದಂಪತಿ ಮಕ್ಕಳ ಮುಡಿ ಕೊಟ್ಟಿದ್ದಾರೆ.
ಅಮೂಲ್ಯ ತಮ್ಮ ಅವಳಿ ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂದು ಹೆಸರಿಟ್ಟಿದ್ದಾರೆ.
ಮಕ್ಕಳ ಮುಡಿ ತೆಗೆಸಿದ ಫೋಟೋಗಳನ್ನು ಅಮೂಲ್ಯ ಪತಿ ಜಗದೀಶ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮಕ್ಕಳಿಗೆ ಶುಭವಾಗಲಿ ಎಂದು ಫ್ಯಾನ್ಸ್ ವಿಶ್ ಮಾಡಿದ್ದಾರೆ.
Published On - 3:36 pm, Sun, 20 November 22