ನಿರೂಪಕಿ ಅನುಶ್ರೀ ಮದುವೆ: ಇಲ್ಲಿದೆ ಹಳದಿ ಶಾಸ್ತ್ರದ ಫೋಟೋಗಳು
ಆ್ಯಂಕರ್ ಅನುಶ್ರೀ ಅವರಿಗೆ ಇರುವ ಜನಪ್ರಿಯತೆ ಅಪಾರ. ಕಿರಿತೆರೆ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಅವರಿಗೆ ತುಂಬ ಸ್ನೇಹಿತರಿದ್ದಾರೆ. ಆಪ್ತರು ಅನುಶ್ರೀ ಮದುವೆಗೆ ಹಾಜರಿ ಹಾಕಲಿದ್ದಾರೆ. ಈಗ ಮದುವೆ ಶಾಸ್ತ್ರಗಳು ಶುರುವಾಗಿದ್ದು, ಹಳದಿ ಶಾಸ್ತ್ರದಲ್ಲಿ ಅನುಶ್ರೀ ಮತ್ತು ರೋಷನ್ ಅವರು ಭಾಗಿಯಾಗಿದ್ದಾರೆ. ಫೋಟೋಗಳು ಇಲ್ಲಿವೆ.
Updated on: Aug 27, 2025 | 11:17 PM
Share

ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ ಅವರು ಹಸೆಮಣೆ ಏರುತ್ತಿದ್ದಾರೆ. ರೋಷನ್ ಜೊತೆ ಅವರ ವಿವಾಹ ನಡೆಯುತ್ತಿದೆ. ಈಗಾಗಲೇ ಮದುವೆ ಶಾಸ್ತ್ರಗಳು ಆರಂಭ ಆಗಿವೆ.

ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಆ್ಯಂಕರ್ ಅನುಶ್ರೀ ಮತ್ತು ರೋಷನ್ ಅವರ ಹಳದಿ ಶಾಸ್ತ್ರ ಬಹಳ ಅದ್ದೂರಿಯಾಗಿ ನಡೆದಿದೆ. ಹಳದಿ ಶಾಸ್ತ್ರದ ಫೋಟೋಗಳು ಕೂಡ ಲಭ್ಯವಾಗಿವೆ.

ಆಗಸ್ಟ್ 28ರ ಗುರುವಾರ ನಿರೂಪಕಿ ಅನುಶ್ರೀ ಅವರ ಮದುವೆ ಬೆಂಗಳೂರಿನ ಹೊರವಲಯದಲ್ಲಿ ಇರುವ ರೆಸಾರ್ಟ್ನಲ್ಲಿ ನಡೆಯಲಿದೆ. ಈ ವಿವಾಹಕ್ಕೆ ಅನೇಕ ಗಣ್ಯರು ಸಾಕ್ಷಿ ಆಗಲಿದ್ದಾರೆ.

ಅನುಶ್ರೀ ಮದುವೆ ಯಾವಾಗ ಎಂಬ ಪ್ರಶ್ನೆ ಇತ್ತೀಚಿನ ವರ್ಷಗಳಲ್ಲಿ ಆಗಾಗ ಕೇಳಿಬರುತ್ತಲೇ ಇತ್ತು. ಅಂತೂ ಇಂತೂ ಅವರು ಈಗ ರೋಷನ್ ಜೊತೆ ವೈವಾಹಿಕ ಜೀವನ ಆರಂಭಿಸುತ್ತಿದ್ದಾರೆ.

ನಿರೂಪಣೆ ಮಾತ್ರವಲ್ಲದೇ ನಟಿಯಾಗಿಯೂ ಅನುಶ್ರೀ ಕೆಲಸ ಮಾಡಿದ್ದಾರೆ. ಕಿರುತೆರೆಯಲ್ಲಿ ಅವರಿಗೆ ಬಹಳ ಬೇಡಿಕೆ ಇದೆ. ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.
Related Photo Gallery
ಬಿಜೆಪಿ ನಾಯಕರು ಹೇಡಿಗಳು; ಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಆಕ್ರೋಶ
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೃಷ್ಣಾ ನದಿಗೆ ಹರಿದುಬಂತು 60,000 ಕ್ಯೂಸೆಕ್ ನೀರು
ಪ್ರಧಾನಿ ಮನೆ ಮುಂದೆ ಕರ್ನಾಟಕದ ಸಿಎಂ ಡಿ.ಕೆ. ಶಿವಕುಮಾರ್ ಕೂಡ ಧರಣಿ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
ಕಬ್ಬಿಣದ ಬಾಗಿಲು ಮುರಿದು ಬಲ್ಡೋಟಾ ಕಾರ್ಖಾನೆ ನುಗ್ಗಿದ ರೈತರು
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಡಿಕೆಶಿಗೆ ದೇವೇಗೌಡ್ರ ಪುತ್ರ ಕೃತಜ್ಞತೆ ಪತ್ರ
ನಟಿ ನಿವೇದಿತಾ ಗೌಡ ಗ್ಲಾಮರಸ್ ಡ್ಯಾನ್ಸ್ ವಿಡಿಯೋ
ಮೂಗಿನಲ್ಲಿ ರಕ್ತ, ರಸ್ತೆ ಮೇಲೆ ಮಲಗಿ ಪ್ರತಿಭಟನೆ; ರಾಹುಲ್ ಗಾಂಧಿಯನ್ನು ಎಳೆದುಕೊಂಡು ಹೋದ ಪೊಲೀಸ್
ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್
ಕೃಷ್ಣಾ ನದಿ ಪ್ರವಾಹಕ್ಕೆ ಸೇತುವೆ ಜಲಾವೃತ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರಾಜಾರೋಷವಾಗಿ ಕಳ್ಳತನ




