- Kannada News Photo gallery Andhra Pradesh DCM Pawan Kalyan took Varahi Deeksha at Janasena party office Tollywood news in Kannada
ವಾರಾಹಿ ದೀಕ್ಷೆ ಪಡೆದ ಪವನ್ ಕಲ್ಯಾಣ್, ಪಾಲಿಸಲಿದ್ದಾರೆ ಕಟ್ಟುನಿಟ್ಟಿನ ನಿಯಮ
ಚುನಾವಣೆ ಪ್ರಚಾರಕ್ಕೆ ವಾರಾಹಿ ಹೆಸರಿನ ವಿಶೇಷ ವಾಹನ ಬಳಿಸಿದ್ದ ನಟ ಪವನ್ ಕಲ್ಯಾಣ್, ಚುನಾವಣೆ ಗೆದ್ದು ಉಪ ಮುಖ್ಯಮಂತ್ರಿಯಾದ ಬಳಿಕ ಇದೀಗ ವಾರಾಹಿ ದೀಕ್ಷೆ ಸ್ವೀಕಾರ ಮಾಡಿದ್ದಾರೆ. ಪಕ್ಷದ ಕಚೇರಿಯಲ್ಲಿ ದೀಕ್ಷೆ ಸ್ವೀಕರಿಸಿರುವ ಪವನ್ ಕಲ್ಯಾಣ್ ಮುಂದಿನ 11 ದಿನಗಳ ಕಾಲ ಕಠಿಣ ನಿಯಮಗಳನ್ನು ಪಾಲಿಸಲಿದ್ದಾರೆ.
Updated on: Jun 26, 2024 | 1:14 PM

ಸ್ಟಾರ್ ನಟ ಪವನ್ ಕಲ್ಯಾಣ್, ಇತ್ತೀಚೆಗೆ ನಡೆದ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ 20 ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ತಾವೂ ಗೆದ್ದು ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ.

ಪವನ್ ಕಲ್ಯಾಣ್ ಮೊಲದ ಚುನಾವಣೆ ಗೆದ್ದು ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಆಗಿದ್ದಾರೆ. ಜೊತೆಗೆ ಕೆಲವು ಮಹ್ವದ ಖಾತೆಗಳನ್ನು ಸಹ ನಿಭಾಯಿಸುತ್ತಿದ್ದಾರೆ.

ಚುನಾವಣೆ ಗೆದ್ದು ಅಧಿಕಾರ ವಹಿಸಿಕೊಂಡ ಬೆನ್ನಲ್ಲೆ ಪವನ್ ಕಲ್ಯಾಣ್ ದೀಕ್ಷೆಯೊಂದನ್ನು ತೆಗೆದುಕೊಂಡಿದ್ದಾರೆ. ಬಹಳ ಕಟ್ಟುನಿಟ್ಟಿನ ನಿಯಮಗಳನ್ನು ಪವನ್ ಕಲ್ಯಾಣ್ ಮುಂದಿನ ಕೆಲ ದಿನ ಪಾಲಿಸಲಿದ್ದಾರೆ.

ಜನಸೇನಾ ಪಕ್ಷದ ಅಧ್ಯಕ್ಷರೂ ಆಗಿರುವ ಪವನ್ ಕಲ್ಯಾಣ್, ಮಂಗಳಗಿರಿಯ ಜನಸೇನಾ ಪಕ್ಷದ ಕಚೇರಿಯಲ್ಲಿ ಮಂಗಳವಾರ ಬೆಳಿಗ್ಗೆ ವಾರಾಹಿ ದೀಕ್ಷೆಯನ್ನು ಪಡೆದುಕೊಂಡರು. ಮುಂದಿನ 11 ದಿನಗಳ ಕಾಲ ಅವರು ಕಟ್ಟುನಿಟ್ಟಿನ ನಿಯಮ ಪಾಲಿಸಲಿದ್ದಾರೆ.

ಪವನ್ ಕಲ್ಯಾಣ್ ಅವರು ಮುಂದಿನ 11 ದಿನಗಳ ವರೆಗೆ ಕೇವಲ ದ್ರವಾಹಾರ ಹಾಗೂ ಹಣ್ಣು ಹಂಪಲುಗಳನ್ನು ಮಾತ್ರವೇ ಸೇವನೆ ಮಾಡಲಿದ್ದಾರೆ. ಚಪ್ಪಲಿ ಬಳಸುವಂತಿಲ್ಲ ಹಾಗೂ ಚಾಪೆಯ ಮೇಲೆಯೇ ಮಲಗಲಿದ್ದಾರೆ.

ಪವನ್ ಕಲ್ಯಾಣ್ ಚುನಾವಣೆ ಪ್ರಚಾರ ಮಾಡಿದ ವಿಶೇಷ ವಾಹನಕ್ಕೆ ವಾರಾಹಿ ಎಂದೇ ಹೆಸರಿಟ್ಟಿದ್ದರು, ವಾಹನದ ಮೇಲೆ ವಾರಾಹಿ ದೇವರ ಚಿತ್ರವನ್ನು ಸಹ ಪವನ್ ಬರೆಸಿದ್ದರು.




