ಮದುವೆ ಸಂಭ್ರಮದಲ್ಲಿ ಅಪ್ಪುವನ್ನು ಮರೆತಿಲ್ಲ ಅನುಶ್ರೀ: ಚಿತ್ರಗಳ ನೋಡಿ
Anchor Anushree marriage: ನಟಿ, ಖ್ಯಾತ ನಿರೂಪಕಿ ಅನುಶ್ರೀ ಅವರು ಇಂದು ವಿವಾಹವಾಗಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ಅನುಶ್ರೀ, ಪುನೀತ್ ರಾಜ್ಕುಮಾರ್ ಅವರ ಬಲುದೊಡ್ಡ ಅಭಿಮಾನಿ. ಇದೀಗ ಮದುವೆಯ ದಿನ ಮದುವೆಯ ಹಾಲ್ನಲ್ಲಿ ಪುನೀತ್ ರಾಜ್ಕುಮಾರ್ ಅವರ ದೊಡ್ಡ ಚಿತ್ರವೊಂದನ್ನು ಇರಿಸಿ ಚಿತ್ರವನ್ನು ಹೂವುಗಳಿಂದ ಅಲಂಕರಿಸಿದ್ದಾರೆ. ಇಲ್ಲಿದೆ ನೋಡಿ ಚಿತ್ರಗಳು...
Updated on: Aug 28, 2025 | 12:45 PM
Share

ನಟಿ ಮತ್ತು ಕನ್ನಡದ ಬಲು ಜನಪ್ರಿಯ ಕಾರ್ಯಕ್ರಮ ನಿರೂಪಕಿ ಅನುಶ್ರೀ ಇಂದು (ಆಗಸ್ಟ್ 28) ವಿವಾಹವಾಗಿದ್ದಾರೆ.

ಅನುಶ್ರೀ ಅವರು ತಮ್ಮ ಬಹು ವರ್ಷದ ಗೆಳೆಯ ರೋಷನ್ ಅವರೊಟ್ಟಿಗೆ ಮದುವೆ ಆಗಿದ್ದಾರೆ. ವಿವಾಹ ಸಮಾರಂಭ ಬೆಂಗಳೂರಿನ ಹೊರವಲಯದಲ್ಲಿ ನಡೆದಿದೆ.

ಎಲ್ಲರಿಗೂ ಗೊತ್ತಿರುವಂತೆ ಅನುಶ್ರೀ, ನಟ ಪುನೀತ್ ರಾಜ್ಕುಮಾರ್ ಅವರ ಬಲು ದೊಡ್ಡ ಅಭಿಮಾನಿ. ಅವರು ಏನೇ ಶುಭ ಕಾರ್ಯ ಮಾಡಿದರೂ ಅಪ್ಪು ಅನ್ನು ನೆನೆಯುತ್ತಿದ್ದರು.

ಇದೀಗ ಮದುವೆ ಸಮಾರಂಭದಲ್ಲೂ ಸಹ ಪುನೀತ್ ರಾಜ್ಕುಮಾರ್ ಅವರನ್ನು ಮರೆಯದೇ ನೆನಪು ಮಾಡಿಕೊಂಡಿದ್ದಾರೆ ನಟಿ ಅನುಶ್ರೀ.

ಅನುಶ್ರೀ ಹಾಗೂ ರೋಷನ್ ವಿವಾಹವಾಗುತ್ತಿರುವ ಹಾಲ್ನಲ್ಲಿ ಪುನೀತ್ ರಾಜ್ಕುಮಾರ್ ಅವರ ಚಿತ್ರವನ್ನು ಇರಿಸಿ ಆ ಚಿತ್ರವನ್ನು ಹೂವುಗಳಿಂದ ಸುಂದರವಾಗಿ ಅಲಂಕಾರ ಮಾಡಲಾಗಿದೆ.

ಅನುಶ್ರೀ ಹಾಗೂ ರೋಷನ್ ವಿವಾಹದ ಬಳಿಕ ಅಪ್ಪು ಅವರ ಚಿತ್ರದ ಮುಂದೆ ನಿಂತು ಕೈ ಮುಗಿದು ಆಶೀರ್ವಾದವನ್ನೂ ಸಹ ಪಡೆದಿದ್ದಾರೆ ಎನ್ನಲಾಗಿದೆ.
Related Photo Gallery
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
Video: ಕೇರಳದ ಚೆಂಡೆ ಬಾರಿಸಿದ ಪ್ರಧಾನಿ ಮೋದಿ
ನಿಧಿ ಸಿಕ್ಕ ಜಾಗದಲ್ಲಿ ಮತ್ತೆ ಉತ್ಖನನ? ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ!
ಚಿನ್ನದ ನಿಧಿಯನ್ನು ಸರ್ಕಾರಕ್ಕೆ ನೀಡಿದ್ದೇ ತಪ್ಪಾಯ್ತಾ?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ಯಾವ ಕಾಲದ್ದು ಗೊತ್ತಾ?
2 ಮದುವೆ ವಿಚಾರ ಗೊದ್ದಿದ್ದೇ ವಿವಾಹ: ಪತಿ ಆರೋಪಕ್ಕೆ ಮೇಘಶ್ರೀ ಕೌಂಟರ್
ನಿವೃತ್ತಿ ಬೆನ್ನಲ್ಲೇ ಅಬ್ಬರಿಸಿದ ಉಸ್ಮಾನ್ ಖ್ವಾಜಾ
ಸ್ಯಾಂಡಲ್ವುಡ್ ನಟಿ, ಉದ್ಯಮಿ ನಂಟಿನ ಕೇಸ್ಗೆ ಬಿಗ್ ಟ್ವಿಸ್ಟ್
ಆಭರಣದಂಗಡಿ ಮಾಲೀಕನಿಂದ 425 ಗ್ರಾಂ ಚಿನ್ನ ದೋಚಿದ ಕಳ್ಳರು




