- Kannada News Photo gallery Are you a vegetarian? Here are some protein rich food sources that are similar to meat in kannada
Protein Foods: ನೀವು ಸಸ್ಯಾಹಾರಿಗಳೇ? ಮಾಂಸಕ್ಕೆ ಸಮಾನವಾದ ಪ್ರೋಟೀನ್ ಭರಿತ ಆಹಾರ ಮೂಲಗಳು ಇಲ್ಲಿವೆ
ಮಾಂಸಾಹಾರಿಗಳು ಮಾಂಸದ ರೂಪದಲ್ಲಿ ಪ್ರೋಟೀನ್ಗಳ ಆಹಾರ ಮೂಲಗಳನ್ನು ಕಂಡು ಕೊಂಡರೆ, ಸಸ್ಯಾಹಾರಿಗಳು ಮಾಂಸಕ್ಕೆ ಸಮಾನವಾದ ಸಾಕಷ್ಟು ಪ್ರೋಟೀನ್-ಭರಿತ ಆಹಾರವನ್ನು ಹುಡುಕುವಲ್ಲಿ ಸ್ವಲ್ಪ ಸಮಸ್ಯೆಯನ್ನು ಹೊಂದಿರಬಹುದು.
Updated on:Jan 22, 2023 | 4:32 PM

ಮಾಂಸಾಹಾರಿಗಳು ಮಾಂಸದ ರೂಪದಲ್ಲಿ ಪ್ರೋಟೀನ್ಗಳ ಆಹಾರ ಮೂಲಗಳನ್ನು ಕಂಡು ಕೊಂಡರೆ, ಸಸ್ಯಾಹಾರಿಗಳು ಮಾಂಸಕ್ಕೆ ಸಮಾನವಾದ ಸಾಕಷ್ಟು ಪ್ರೋಟೀನ್-ಭರಿತ ಆಹಾರವನ್ನು ಹುಡುಕುವಲ್ಲಿ ಸ್ವಲ್ಪ ಸಮಸ್ಯೆಯನ್ನು ಹೊಂದಿರಬಹುದು.

ಪೀನಟ್ ಬಟರ್: ನೀವು ಒಂದು ದಿನದಲ್ಲಿ 2 ಚಮಚ (8 g) ಕಡಲೆಕಾಯಿ ಬೆಣ್ಣೆಯನ್ನು ಸೇವಿಸಬಹುದು. ಇದು ದೇಹಕ್ಕೆ ಪ್ರೋಟೀನ್ ನೀಡುವ ಸಮೃದ್ದ ಮೂಲವಾಗಿದೆ.

ಕಡಲೆ ಬೀಜ : ಇದು ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ. ಪ್ರತಿ ದಿನವೂ ಕನಿಷ್ಠ 2 ಚಮಚ (2 ಗ್ರಾಂ) ಕಡಲೆಯನ್ನು ತಿನ್ನಿ.

ಮೊಟ್ಟೆ: ಎಲ್ಲಾ ಸಸ್ಯಾಹಾರಿಗಳು ತಮ್ಮ ದೈನಂದಿನ ಪ್ರೋಟೀನ್ ಪಡೆಯಲು ಮೊಟ್ಟೆ ಸೇವನೆ ಉತ್ತಮ ಆಯ್ಕೆಯಾಗಿದೆ. ಆದ್ದರಿಂದ ಪ್ರತಿದಿನ ಒಂದು ಮೊಟ್ಟೆ ಸೇವಿಸಿ ಎಂದು ತಜ್ಞರು ಸಲಹೆ ನೀಡುತ್ತಾರೆ.

ಹಾಲು: ಹಾಲು ಕ್ಯಾಲ್ಸಿಯಂ ಮಾತ್ರವಲ್ಲ, ಹಾಲು ಪ್ರೋಟೀನ್ನ ಅತ್ಯುತ್ತಮ ಮೂಲವಾಗಿದೆ. ನೀವು ಸಾಮಾನ್ಯವಾಗಿ ಹಾಲು ಕುಡಿಯಲು ಇಷ್ಟ ಪಡದಿದ್ದರೆ, ಸ್ಮೂಥಿ, ಮಿಲ್ಶೇಕ್ ಮಾಡಿಕೊಂಡು ಕುಡಿಯಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಧಾನ್ಯಗಳು: ಧಾನ್ಯಗಳಲ್ಲಿ ಪ್ರೋಟೀನ್ಗಳು, ಆರೋಗ್ಯಕರ ಕೊಬ್ಬುಗಳು, ಜೀವಸತ್ವಗಳು ಹಾಗೂ ಖನಿಜಗಳು ಸಮೃದ್ದವಾಗಿದ್ದು, ಸಾಕಷ್ಟು ಪೋಷಣೆಯನ್ನು ನಿಮ್ಮ ದೇಹಕ್ಕೆ ನೀಡುತ್ತದೆ. ಪ್ರತಿದಿನ ಬೆರಳೆಣಿಕೆಯಷ್ಟು (2 ಚಮಚ ಅಥವಾ 1 ಗ್ರಾಂ) ಧಾನ್ಯಗಳನ್ನು ಸೇವಿಸಿ.
Published On - 4:31 pm, Sun, 22 January 23

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.
Read More
