ವೆಡ್ಡಿಂಗ್ ವೈಬ್ಸ್ನಲ್ಲಿ ಆಶಿಕಾ ರಂಗನಾಥ್; ಕ್ಯೂಟ್ ಫೋಟೋ ವೈರಲ್
ಸದ್ಯ ಚಿತ್ರರಂಗದಲ್ಲಿ ಮದುವೆಗಳ ಅಬ್ಬರ ಜೋರಾಗಿದೆ. ಅನೇಕ ಕಲಾವಿದರು ಹಾಗೂ ಅವರ ಕುಟುಂಬದವರ ವಿವಾಹ ನೆರವೇರುತ್ತಿದೆ. ಈಗ ಆಶಿಕಾ ರಂಗನಾಥ್ ಅವರಿಗೂ ಮದುವೆ ಸಂಭ್ರಮ. ಗೆಳತಿಯ ಮದುವೆಯಲ್ಲಿ ಅವರು ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ಆಶಿಕಾ ರಂಗನಾಥ್ ಅವರು ಹಂಚಿಕೊಂಡಿದ್ದಾರೆ.
Updated on: Apr 25, 2025 | 8:46 AM

ನಟಿ ಆಶಿಕಾ ರಂಗನಾಥ್ ಅವರು ಮದುವೆ ಸಂಭ್ರಮದಲ್ಲಿದ್ದಾರೆ. ಹಾಗಂತ ಅವರದ್ದೇ ವಿವಾಹ ನೆರವೇರಿಲ್ಲ. ಅವರು ಗೆಳೆತಿಯ ಮದುವೆಯಲ್ಲಿ ಮಿಂಚಿ ಗಮನ ಸೆಳೆದಿದ್ದಾರೆ. ಈ ಸಂದರ್ಭದ ಫೋಟೋ ಹಾಗೂ ವಿಡಿಯೋಗಳನ್ನು ಅವರು ಹಂಚಿಕೊಂಡಿದ್ದಾರೆ ಅನ್ನೋದು ವಿಶೇಷ.

ಆಶಿಕಾ ಅವರ ಗೆಳತಿ ಅರ್ಚನಾ ಕೊಟ್ಟಿಗೆ ವಿವಾಹ ಇತ್ತೀಚೆಗೆ ನೆರವೇರಿದೆ. ಕ್ರಿಕೆಟರ್ ಜೊತೆ ಅರ್ಚನಾ ಮದುವೆ ಆಗಿದ್ದಾರೆ. ಈ ಮದುವೆಯಲ್ಲಿ ಆಶಿಕಾ ರಂಗನಾಥ್ ಅವರು ಭಾಗಿ ಆಗಿದ್ದರು. ಆ ಸಂದರ್ಭದಲ್ಲಿ ತೆಗೆದ ಫೋಟೋ ಇದು ಎಂದು ಊಹಿಸಲಾಗಿದೆ.

ಹುಡುಗಿಯರಿಗೆ ಮಿರರ್ ಸೆಲ್ಫಿ ಎಂದರೆ ಹೆಚ್ಚು ಇಷ್ಟ. ಅದರಲ್ಲೂ ಹೀರೋಯಿನ್ಗಳು ಮಿರರ್ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಒಂದು ಹೆಜ್ಜೆ ಮುಂದೆ ಇರುತ್ತಾರೆ. ಆಶಿಕಾ ರಂಗನಾಥ್ ಕೂಡ ಮಿರರ್ ಸೆಲ್ಫಿ ತೆಗೆದುಕೊಂಡು ಮಿಂಚಿದ್ದಾರೆ. ಅವರ ಫೋಟೋಗಳು ಗಮನ ಸೆಳೆದಿವೆ.

‘ಆಶಿಕಾ ರಂಗನಾಥ್ ಅವರು ಸಖತ್ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ’ ಎಂದು ಕೆಲವರು ಕಮೆಂಟ್ ಹಾಕಿದ್ದಾರೆ. ಇನ್ನೂ ಕೆಲವರು ಆಶಿಕಾ ರಂಗನಾಥ್ ಅವರ ಬಳಿ ‘ನಿಮ್ಮ ಮದುವೆ ಯಾವಾಗ’ ಎನ್ನುವ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಆಶಿಕಾ ಉತ್ತರಿಸಿಲ್ಲ.

ಆಶಿಕಾ ರಂಗನಾಥ್ ಅವರು ಕನ್ನಡದ ನಟಿ. ಅವರ ಬೇಡಿಕೆ ದಿನಕಳೆದಂತೆ ಹೆಚ್ಚುತ್ತಿದೆ. ಅವರು ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವೇಟ್ ಆಗಿದ್ದಾರೆ. ಅಭಿಮಾನಿಗಳಿಗಾಗಿ ಫ್ಯಾನ್ಸ್ ಫೋಟೋ ಹಂಚಿಕೊಳ್ಳುತ್ತಾ ಇರುತ್ತಾರೆ.

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.
Read More



