ನಿಮ್ಮ ಮಗುವಿಗೆ ಪದೇ ಪದೇ ಆರೋಗ್ಯ ಸಮಸ್ಯೆ ಕಾಡುತ್ತಿದ್ದರೆ ಈ ತಪ್ಪುಗಳನ್ನು ಮಾಡಬೇಡಿ
ನಿಮ್ಮ ಮಕ್ಕಳಿಗೆ ಪದೇ ಪದೇ ಆರೋಗ್ಯ ಸಮಸ್ಯೆ ಕಾಡುತ್ತಿದ್ದರೆ ಅವರ ಆಹಾರದಲ್ಲಿ ಏರುಪೇರಾಗಿದೆ ಎಂಬುದನ್ನು ತಿಳಿದುಕೊಳ್ಳಿ. ಹಾಗಾಗಿ ಅದನ್ನು ಸರಿಮಾಡುವುದರ ಜೊತೆಗೆ ಕೆಲವು ಆಹಾರಗಳನ್ನು ಮಕ್ಕಳಿಂದ ದೂರವಿರಿಸಿ. ಇದರಿಂದ ಮಕ್ಕಳ ಆರೋಗ್ಯ ಚೆನ್ನಾಗಿರುತ್ತದೆ. ಜೊತೆಗೆ ಮಗುವಿನ ಆರೋಗ್ಯವನ್ನು ಕಾಪಾಡಲು ಡಾ. ಪ್ರೀತಿ ಶಾನಭಾಗ್ ತಿಳಿಸಿರುವ ಈ ಸಲಹೆಗಳನ್ನು ಅನುಸರಿಸಿ ನೋಡಿ.
Updated on: Aug 29, 2024 | 2:11 PM

ನಿಮ್ಮ ಮಗುವಿಗೆ ಪದೇ ಪದೇ ಆರೋಗ್ಯ ಸಮಸ್ಯೆ ಕಾಡುತ್ತಿದ್ದರೆ ಅವರ ಆಹಾರದಲ್ಲಿ ಏರುಪೇರಾಗಿದೆ ಎಂಬುದನ್ನು ತಿಳಿದುಕೊಳ್ಳಿ. ಹಾಗಾಗಿ ಅದನ್ನು ಸರಿಮಾಡುವುದರ ಜೊತೆಗೆ ಕೆಲವು ಆಹಾರಗಳನ್ನು ಮಕ್ಕಳಿಂದ ದೂರವಿರಿಸಿ. ಇದರಿಂದ ಮಕ್ಕಳ ಆರೋಗ್ಯ ಚೆನ್ನಾಗಿರುತ್ತದೆ. ಜೊತೆಗೆ ಮಗುವಿನ ಆರೋಗ್ಯವನ್ನು ಸರಿಯಾಗಿ ಕಾಪಾಡಲು ಡಾ. ಪ್ರೀತಿ ಶಾನಭಾಗ್ ತಿಳಿಸಿರುವ ಈ ಸಲಹೆಗಳನ್ನು ಅನುಸರಿಸಿ ನೋಡಿ.

ಮಕ್ಕಳಿಗೆ ಮಯೋನಿಸ್ ಕೊಡಬೇಡಿ. ಏಕೆಂದರೆ ಇದರಲ್ಲಿ ಹೈಡ್ರೋಜೆನೇಟೆಡ್ ಎಣ್ಣೆ ಇದ್ದು, ಇದು ವಾಂತಿ, ಭೇದಿ, ಹೊಟ್ಟೆ ನೋವನ್ನು ಹೆಚ್ಚಿಸುತ್ತದೆ. ಜೊತೆಗೆ ಜಾಮ್ ಮತ್ತು ಜೆಲ್ಲಿಗಳನ್ನು ಕೊಡಬೇಡಿ. ಏಕೆಂದರೆ ಇದರಲ್ಲಿ ರಾಸಾಯನಿಕ ಬಣ್ಣ, ಅತಿಯಾದ ಸಕ್ಕರೆ ಅಂಶವಿದ್ದು, ಮಕ್ಕಳಲ್ಲಿ ಬೊಜ್ಜು, ಕಿರಿಕಿರಿ, ಸಿಟ್ಟು, ಮಧುಮೇಹಕ್ಕೆ ಕಾರಣವಾಗುತ್ತದೆ.

ಮಕ್ಕಳಿಗೆ ಕೆಚಪ್ ಅಥವಾ ಸಾಸ್ ಕೊಡುವುದನ್ನು ಕಡಿಮೆ ಮಾಡಿ. ಮಕ್ಕಳಿಗೆ ಇಷ್ಟವಾದರೂ ಸಹ ಅದನ್ನು ನೀಡಬೇಡಿ. ಏಕೆಂದರೆ ಇದರಲ್ಲಿ ಇರುವ ಸಕ್ಕರೆ ಮತ್ತು ಉಪ್ಪು, ರಾಸಾಯನಿಕ ಸಂರಕ್ಷಕಗಳಾಗಿದ್ದು ಇದು ಹೃದಯ ಬಡಿತವನ್ನು ಮತ್ತು ಮಧುಮೇಹವನ್ನು ಹೆಚ್ಚಿಸುತ್ತದೆ ಅದಲ್ಲದೆ ಇದು ಮಕ್ಕಳಲ್ಲಿ ಮೂತ್ರ ಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು.

ಮಕ್ಕಳಿಗೆ ಪ್ರತಿದಿನ ಚಾಕಲೇಟ್ ನೀಡುವುದನ್ನು ತಪ್ಪಿಸಿ. ಇದರಲ್ಲಿ ಇರುವ ಅಧಿಕ ಸಕ್ಕರೆ ಅಂಶವು ಮಕ್ಕಳ ಬೆಳವಣಿಗೆಗೆ, ಮೂಳೆಗಳಿಗೆ, ಹಾನಿಯುಂಟು ಮಾಡುತ್ತದೆ. ಜೊತೆಗೆ ಹೃದಯ ಬಡಿತ, ದೇಹದ ಕೊಬ್ಬು ಮತ್ತು ಹೊಟ್ಟೆಯ ಸೋಂಕುಗಳನ್ನು ಹೆಚ್ಚಿಸುತ್ತದೆ.

ಮಕ್ಕಳಿಗೆ ನೆಗಡಿ ಕೆಮ್ಮು ಬಂದಾಗ ಆಂಟಿಬಯೋಟಿಕ್ ಔಷಧಿಗಳ ಬದಲು ಹೋಮಿಯೋಪಥಿ ಅಥವಾ ಆಯುರ್ವೇದ ಔಷಧಿ ನೀಡಿ. ಆಂಟಿಬಯೋಟಿಕ್ ಜೀರ್ಣಾಂಗದ ಜೀವಾಣುಗಳನ್ನು ನಾಶಪಡಿಸಿ ಹೊಟ್ಟೆಯ ಆರೋಗ್ಯವನ್ನು ಕೆಡಿಸುತ್ತದೆ. ಜೊತೆಗೆ ಇದು ಮಕ್ಕಳ ರೋಗ- ಪ್ರತಿರೋಧಕ ಶಕ್ತಿಯನ್ನು ಕುಗ್ಗಿಸಿ ಪದೇ ಪದೇ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.




