AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

4 ಕಿ.ಮೀಗೆ 1 ರೂ ವೆಚ್ಚ, 10 ನಿಮಿಷಗಳಲ್ಲಿ ಡೆಲಿವರಿ: ರೋಗಿಗಳ ಜೀವ ಉಳಿಸುತ್ತಿವೆ ಈ ಡ್ರೋನ್​​ ಸೇವೆ

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಡ್ರೋನ್ ಯೋಜನೆ ಪರಿಹಾರ ಒದಗಿಸಿದೆ. ಚಂದ್ರಾಪುರದಿಂದ ಬೊಮ್ಮಸಂದ್ರಕ್ಕೆ 10 ನಿಮಿಷದಲ್ಲಿ ವೈದ್ಯಕೀಯ ಮಾದರಿಗಳನ್ನು ತಲುಪಿಸಿ ಜೀವ ಉಳಿಸುವ ಕಾರ್ಯ ನಡೆಯುತ್ತಿದೆ. ಪ್ರತಿ ವಿತರಣೆಗೆ 1 ರೂಪಾಯಿ ವೆಚ್ಚ ತಗಲುತ್ತಿದ್ದು, DGCA ಅನುಮೋದನೆಯೊ ಇದಕ್ಕೆ ದೊರೆತಿದೆ ಎನ್ನಲಾಗಿದೆ. ಭಾರತದೆಲ್ಲೆಡೆಯೂ ಯೋಜನೆ ವಿಸ್ತರಣೆ ಹೊಂದಿ 10 ನಿಮಿಷಗಳಲ್ಲಿ ವೈದ್ಯಕೀಯ ವಿತರಣೆ ಸಾಮಾನ್ಯವಾಗಬಹುದೆಂದ ಹೊಸ ನಿರೀಕ್ಷೆಯೂ ಇದರಿಂದಾಗಿ ಹುಟ್ಟಿಕೊಂಡಿದೆ.

ಪ್ರಸನ್ನ ಹೆಗಡೆ
|

Updated on:Mar 19, 2026 | 12:33 PM

Share
ಬೆಂಗಳೂರಿನ ಟ್ರಾಫಿಕ್​​ ಸಮಸ್ಯೆಯಿಂದಾಗಿ ತುರ್ತು ಚಿಕಿತ್ಸೆ ಅಗತ್ಯವಿರುವ ಅದೆಷ್ಟೋ ಮಂದಿ ಪ್ರಾಣ ತೆತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಔಷಧ, ಚಿಕಿತ್ಸೆಗೆ ಅಗತ್ಯ ವಸ್ತುಗಳ ಸಾಗಾಟಕ್ಕೂ ವಾಹನಗಳ ದಟ್ಟಣೆ ಅಡ್ಡಗಾಲಾಗಿ ಪರಿಣಮಿಸಿದೆ. ಇದಕ್ಕೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ನಾರಾಯಣ ಹೆಲ್ತ್​​ ಮತ್ತು  ಡ್ರೋನ್ ಸ್ಟಾರ್ಟ್‌ಅಪ್ Airbound ಒಟ್ಟಾಗಿ ಆರಂಭಿಸಿರುವ ಪೈಲಟ್ ಯೋಜನೆ,  ಟ್ರಾಫಿಕ್ ಸಮಸ್ಯೆ ಮೀರಿ ಅಗತ್ಯ ವೈದ್ಯಕೀಯ ಸಾಮಗ್ರಿಗಳು ಮತ್ತು ಪರೀಕ್ಷಾ ಮಾದರಿಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸುವ ಮೂಲಕ ಜೀವಗಳನ್ನು ಉಳಿಸುವ ಹೊಸ ಮಾರ್ಗವನ್ನು ತೋರಿಸಿದೆ.

1 / 5
ಈ ಪೈಲಟ್ ಯೋಜನೆ ಚಂದ್ರಾಪುರದ ಕ್ಲಿನಿಕ್‌ನಿಂದ ಬೊಮ್ಮಸಂದ್ರದಲ್ಲಿರುವ ನಾರಾಯಣ ಹೆಲ್ತ್ ಸಿಟಿ ಪ್ರಯೋಗಾಲಯದವರೆಗೆ ಸಂಪರ್ಕ ಕಲ್ಪಿಸುತ್ತದೆ. ಸಾಮಾನ್ಯವಾಗಿ 4 ಕಿಮೀ ಪ್ರಯಾಣಕ್ಕೆ ಟ್ರಾಫಿಕ್ ಸಮಯದಲ್ಲಿ ಸುಮಾರು ಒಂದು ಗಂಟೆ ಸಮಯ ಬೇಕು. ಆದರೆ ಡ್ರೋನ್ ಮೂಲಕ ಇದು ಕೇವಲ 10 ನಿಮಿಷಗಳಲ್ಲಿ ಸಾಧ್ಯವಾಗುತ್ತಿದೆ. ಇದರಿಂದ ರೋಗಿಗಳಿಗೆ ಪರೀಕ್ಷಾ ಫಲಿತಾಂಶಗಳು ಹಾಗೂ ಚಿಕಿತ್ಸೆ ಬಹಳ ವೇಗವಾಗಿ ಲಭ್ಯವಾಗಲಿವೆ.

2 / 5
2026ರ ಆರಂಭದಿಂದಲೇ ಈ ಸೇವೆ ಪ್ರಾರಂಭವಾಗಿದ್ದು, 54 ದಿನಗಳ ಪ್ರಯೋಗಾವಧಿಯಲ್ಲಿ 700ಕ್ಕೂ ಹೆಚ್ಚು ಬಾರಿ  ಡ್ರೋನ್​​ ಹಾರಾಟ ಯಶಸ್ವಿಯಾಗಿ ನಡೆದಿದೆ. ಪ್ರತಿ ಹಾರಾಟದಲ್ಲಿ ಸುಮಾರು 40 ಪರೀಕ್ಷಾ ಮಾದರಿಗಳನ್ನು  ಸಾಗಿಸಲು ಸಾಧ್ಯವಾಗುತ್ತದೆ. ಈ ತಂತ್ರಜ್ಞಾನದಲ್ಲಿ ಮತ್ತೊಂದು ವಿಶೇಷವೆಂದರೆ ಅದರ ಕಡಿಮೆ ವೆಚ್ಚ. ಪ್ರತಿ ಡ್ರೋನ್ ಡೆಲಿವರಿಗೆ ಕೇವಲ 1 ರೂಪಾಯಿ ಮಾತ್ರ ಖರ್ಚಾಗುತ್ತದೆ. ಇದು ವಾಹನಗಳ ಮೂಲಕ ಸಾಗಾಟಕ್ಕಿಂತ ಬಹಳ ಕಡಿಮೆ ವೆಚ್ಚವಾಗಿದೆ.

3 / 5
ಈ ಯೋಜನೆಯ ಯಶಸ್ಸಿಗೆ ಡ್ರೋನ್​​ ಮಾದರಿಯೂ ಪ್ರಮುಖ ಪಾತ್ರ ವಹಿಸಿದೆ. ಇದು ವರ್ಟಿಕಲ್ ಟೆಕ್‌ಆಫ್ ಸಾಮರ್ಥ್ಯ ಮತ್ತು ಫಿಕ್ಸ್ಡ್-ವಿಂಗ್ ಹಾರಾಟದ ದಕ್ಷತೆಯನ್ನು ಒಟ್ಟಿಗೆ ಹೊಂದಿದ್ದು, ನಗರ ಪ್ರದೇಶಗಳಲ್ಲಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಬಾರಿ ಹಾರಾಟ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿದೆ.

4 / 5
ಈ ಯೋಜನೆಗೆ Directorate General of Civil Aviation (DGCA) ಅನುಮೋದನೆಯೂ ದೊರೆತಿದೆ ಎನ್ನಲಾಗಿದ್ದು, ಈಗ ಇದನ್ನು ನಗರಾದ್ಯಂತ ವಿಸ್ತರಿಸಲು ಅನುಮತಿ ಪಡೆಯುವ ಪ್ರಯತ್ನಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿ ಈ ಪ್ರಯೋಗ ಯಶಸ್ವಿಯಾಗಿರುವುದರಿಂದ, ಭಾರತದೆಲ್ಲೆಡೆಯೂ ಯೋಜನೆ ವಿಸ್ತರಣೆ ಹೊಂದಿ 10 ನಿಮಿಷಗಳಲ್ಲಿ ವೈದ್ಯಕೀಯ ವಿತರಣೆ ಸಾಮಾನ್ಯವಾಗಬಹುದೆಂದ ಹೊಸ ನಿರೀಕ್ಷೆ ಹುಟ್ಟಿಕೊಂಡಿದೆ.

5 / 5

Published On - 12:32 pm, Thu, 19 March 26

Follow Us
ರಸ್ತೆ ಮಧ್ಯೆ ದೊಡ್ಡ ಕಂದಕ; ಇದು 'ನರಕದ ಹಾದಿ' ಎಂದು ನೆಟ್ಟಿಗರ ಆಕ್ರೋಶ

ದುಬಾರೆ ದುರಂತಕ್ಕೆ 2.5 ತಿಂಗಳು: ಇಂದಿಗೂ ಜಾರಿಯಾಗದ ಎಸ್‌ಒಪಿ

ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ಖಾತೆ ಕ್ಯಾತೆ, ದಿಲ್ಲಿಯತ್ತ ಡಿಕೆಶಿ

ಕಾರ್ಕಳದಲ್ಲಿ ವಯನಾಡು ಮಾದರಿ ದುರಂತದ ಭೀತಿ: ಗುಡ್ಡಕುಸಿತದ ಆತಂಕದಲ್ಲಿ ಜನರು

ಬಸವರಾಜ ಹೊರಟ್ಟಿ ರಾಜೀನಾಮೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?

ಪರಿಷತ್ ಸದಸ್ಯೆಯಾಗಿ ಗಾಯತ್ರಿ ಶಾಂತೇಗೌಡ ಪ್ರಮಾಣವಚನ ಸ್ವೀಕಾರ

ಹೈಕಮಾಂಡ್​​ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ಪ್ರಿಯಾಂಕ್​​ ಖರ್ಗೆ

ಕೆಆರ್ ಮಾರುಕಟ್ಟೆ ಫ್ಲೈಓವರ್ ಮೂಲಕ ಚಾಮರಾಜಪೇಟೆಗೆ ಹೋಗುವ ಲೂಪ್ ರಸ್ತೆ ಬಂದ್

ಕೊನೆಯ ಆಷಾಢ ಶುಕ್ರವಾರ; ಚಾಮುಂಡಿ ದರ್ಶನ ಪಡೆದ ತೆಲುಗು ನಟ ಸುನಿಲ್

ಸುರಂಗ ರಸ್ತೆ ಯೋಜನೆ ಪ್ರಶ್ನಿಸಿ ಪಿಐಎಲ್: ಹೈಕೋರ್ಟ್​​ನಿಂದ ನೋಟಿಸ್​​