ಡಾರ್ಕ್ ಸರ್ಕಲ್ನಿಂದ ಮುಖದ ಸೌಂದರ್ಯ ಹಾಳಾಗಿದೆಯೇ? ಇಲ್ಲಿವೆ ಮನೆಮದ್ದು
ಡಾರ್ಕ್ ಸರ್ಕಲ್ಗೆ ಒತ್ತಡ, ನಿದ್ರಾಹೀನತೆ, ಕೆಲವು ಆರೋಗ್ಯ ಸಮಸ್ಯೆಗಳು ಕೂಡ ಕಾರಣವಾಗುತ್ತವೆ. ಡಾರ್ಕ್ ಸರ್ಕಲ್ ಅನ್ನು ಕಡಿಮೆ ಮಾಡುವ ಕೆಲವು ಮನೆಮದ್ದುಗಳು ಇಲ್ಲಿವೆ.
Updated on: Jan 17, 2024 | 4:09 PM

ಕಣ್ಣಿನ ಕೆಳಗೆ ಮೂಡುವ ಕಪ್ಪು ವರ್ತುಲ ಅಥವಾ ಡಾರ್ಕ್ ಸರ್ಕಲ್ ನಮ್ಮ ಮುಖದ ಸೌಂದರ್ಯವನ್ನೇ ಹಾಳು ಮಾಡುತ್ತದೆ.

ಡಾರ್ಕ್ ಸರ್ಕಲ್ಗೆ ಒತ್ತಡ, ನಿದ್ರಾಹೀನತೆ, ಕೆಲವು ಆರೋಗ್ಯ ಸಮಸ್ಯೆಗಳು ಕೂಡ ಕಾರಣವಾಗುತ್ತವೆ.

ಡಾರ್ಕ್ ಸರ್ಕಲ್ ಅನ್ನು ಕಡಿಮೆ ಮಾಡುವ ಕೆಲವು ಮನೆಮದ್ದುಗಳು ಇಲ್ಲಿವೆ.

ಗ್ರೀನ್ ಟೀ, ಬ್ಲಾಕ್ ಟೀ ಮುಂತಾದ ಚಹಾವನ್ನು ತಯಾರಿಸಿದ ನಂತರ ಆ ಟೀ ಬ್ಯಾಗ್ ಎಸೆಯುವ ಬದಲು ಕಣ್ಣಿನ ಕೆಳಗೆ ಇಟ್ಟುಕೊಳ್ಳಿ.

1 ಚಮಚ ಬಾದಾಮಿ ಪುಡಿಯನ್ನು 1 ಚಮಚ ಬಾದಾಮಿ ಪುಡಿಯೊಂದಿಗೆ ಸೇರಿಸಿ. ಬಳಿಕ ಅದಕ್ಕೆ 1 ಚಮಚ ಜೇನುತುಪ್ಪವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ 1 ಚಮಚ ಹಾಲು ಸೇರಿಸಿ. ಇದೆಲ್ಲವನ್ನೂ ಸರಿಯಾಗಿ ಮಿಕ್ಸ್ ಮಾಡಿ.

ಅಲೋವೆರಾ ಜೆಲ್ ಅನ್ನು ಉರಿಯೂತ ಮತ್ತು ಕಪ್ಪು ವರ್ತುಲಗಳನ್ನು ಕಡಿಮೆ ಮಾಡಲು ಹಚ್ಚಿಕೊಳ್ಳಬಹುದು.

ಮುಚ್ಚಿದ ಕಣ್ಣುಗಳ ಮೇಲೆ ತಂಪಾದ ಸೌತೆಕಾಯಿ ಚೂರುಗಳನ್ನು ಇರಿಸಿಕೊಳ್ಳಿ.

ಕಾಟನ್ ಪ್ಯಾಡ್‌ಗಳನ್ನು ತಣ್ಣನೆಯ ಹಾಲಿನಲ್ಲಿ ನೆನೆಸಿ ಮತ್ತು ಅವುಗಳನ್ನು ಮುಚ್ಚಿದ ಕಣ್ಣುಗಳ ಮೇಲೆ ಇರಿಸಿಕೊಳ್ಳಿ.

ತೆಳುವಾದ ಆಲೂಗೆಡ್ಡೆ ತುಂಡುಗಳು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್‌ಗಳನ್ನು ಹೊಂದಿರುತ್ತವೆ. ಇದನ್ನು ಕಣ್ಣುಗಳ ಮೇಲೆ ಇರಿಸಿದಾಗ ಕಪ್ಪು ವರ್ತುಲಗಳನ್ನು ಕಡಿಮೆ ಮಾಡುತ್ತದೆ.

ಕಣ್ಣುಗಳನ್ನು ತಂಪಾಗಿಸಲು ಮತ್ತು ರಿಫ್ರೆಶ್ ಮಾಡಲು ಹತ್ತಿ ಉಂಡೆಯನ್ನು ರೋಸ್ ವಾಟರ್ನಲ್ಲಿ ಅದ್ದಿ ಕಣ್ಣಿನ ಮೇಲೆ ಇಟ್ಟುಕೊಳ್ಳಿ.

ಟೊಮ್ಯಾಟೊ ರಸವನ್ನು ಕೆಲವು ಹನಿ ನಿಂಬೆ ರಸದೊಂದಿಗೆ ಬೆರೆಸಿ ಡಾರ್ಕ್ ಸರ್ಕಲ್ ಇರುವ ಜಾಗಕ್ಕೆ ಹಚ್ಚಿ.

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.
Read More



