AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರದ ದಿನದಲ್ಲಿ ಹಾರಾಟ, ವೀಕೆಂಡ್​ನಲ್ಲಿ ಗಪ್​ಚುಪ್; ಇದು ಭವ್ಯಾ ಸ್ಪೆಷಾಲಿಟಿ

ಭವ್ಯಾ ಗೌಡರು ಬಿಗ್ ಬಾಸ್ ಕನ್ನಡದಲ್ಲಿ ತಮ್ಮ ಆಕ್ರಮಣಕಾರಿ ಆಟಕ್ಕೆ ಹೆಸರಾಗಿದ್ದಾರೆ. ವಾರದ ದಿನಗಳಲ್ಲಿ ಅವರು ತೀವ್ರವಾಗಿ ಸ್ಪರ್ಧಿಸುತ್ತಾರೆ, ಆದರೆ ವಾರಾಂತ್ಯದಲ್ಲಿ ಕಣ್ಣೀರಿನ ಮೂಲಕ ಪ್ರತಿಕ್ರಿಯಿಸುತ್ತಾರೆ. ಕೆಲವರು ಅವರದ್ದು ಕೇವಲ ನಾಟಕ ಎಂದು ಹೇಳಿದ್ದು ಇದೆ. ಅವರ ವರ್ತನೆಯಲ್ಲಿನ ಈ ವ್ಯತ್ಯಾಸವೇ ಚರ್ಚೆಯ ವಿಷಯವಾಗಿದೆ.

ರಾಜೇಶ್ ದುಗ್ಗುಮನೆ
|

Updated on: Jan 21, 2025 | 7:28 AM

Share
ಭವ್ಯಾ ಗೌಡ ಅವರು ದೊಡ್ಮನೆಯಲ್ಲಿ ತಮ್ಮ ಆಟದ ಮೂಲಕ ಗುರುತಿಸಿಕೊಂಡಿದ್ದಾರೆ. ಬಿಗ್ ಬಾಸ್​ನಲ್ಲಿ ಮೂರು ಬಾರಿ ಕ್ಯಾಪ್ಟನ್ ಆಗುವ ಮೂಲಕ ಈ ಸೀಸನ್​ನಲ್ಲಿ ಅತಿ ಹೆಚ್ಚು ಕ್ಯಾಪ್ಟನ್ ಆದ ಸ್ಪರ್ಧಿ ಎನ್ನುವ ಖ್ಯಾತಿಯನ್ನು ಗಳಿಸಿಕೊಂಡಿದ್ದಾರೆ. ಈ ಮಧ್ಯೆ ಅವರ ಸ್ಪೆಷಾಲಿಟಿ ಬಗ್ಗೆ ಚರ್ಚೆ ನಡೆಯುತ್ತಿದೆ.

1 / 5
ಭವ್ಯಾ ಗೌಡ ಅವರು ವಾರದ ದಿನಗಳಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಯಾವುದೇ ಸ್ಪರ್ಧಿ ಮಾತನಾಡಲು ಬಂದರೆ ಅವರಿಗೆ ತಿರುಗೇಟು ನೀಡುತ್ತಾರೆ. ಯಾರಾದರೂ ಅವರ ವಿರುದ್ಧ ಮಾತನಾಡುವ ಪ್ರಯತ್ನ ಮಾಡಿದರೆ ಅವರನ್ನು ಕಿಂಡಲ್ ಮಾಡುತ್ತಾರೆ.

2 / 5
ವಾರದ ದಿನಗಳಲ್ಲಿ ಭವ್ಯಾಗೆ ಯಾರು ಏನೇ ಹೇಳಿದರೂ ಅದನ್ನು ಸಹಿಸಿಕೊಳ್ಳುವುದಿಲ್ಲ. ತಮ್ಮ ತಪ್ಪಿದ್ದರೂ ಅದನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ವಾರದ ದಿನಗಳಲ್ಲಿ ಹೀಗಿರುವ ಭವ್ಯಾ, ವೀಕೆಂಡ್​ ಬಂತೆಂದರೆ ಸಂಪೂರ್ಣ ಬದಲಾಗುತ್ತಾರೆ.

3 / 5
ಕಿಚ್ಚ ಸುದೀಪ್ ಅವರು ಎದುರು ನಿಂತು ಪ್ರಶ್ನೆ ಕೇಳಿದಾಗ ಎಲ್ಲರೂ ಉತ್ತರಿಸುವ ಪ್ರಯತ್ನ ಮಾಡುತ್ತಾರೆ. ಆದರೆ, ಭವ್ಯಾ ಗೌಡ ಅವರ ಉತ್ತರ ಕೇವಲ ‘ಕಣ್ಣೀರು’. ‘ನೀವು ಹೀಗೆ ಅತ್ತರೆ ನಾನು ಕರ್ಚಿಫ್ ಕೊಡಬಹುದು ಅಷ್ಟೇ’ ಎಂದು ಸುದೀಪ್ ಅವರೇ ಒಮ್ಮೆ ನೇರವಾಗಿ ಹೇಳಿದ್ದರು. ಆದರೂ ಅವರು ಕಣ್ಣೀರೂ ಹಾಕುವುದನ್ನು ನಿಲ್ಲಿಸಿಲ್ಲ.  

4 / 5
ವಾರದ ದಿನಗಳಲ್ಲಿ ತೋರಿಸುವ ಹಾರಾಟ, ಮಾತುಗಳನ್ನು ಭವ್ಯಾ ವೀಕೆಂಡ್​ನಲ್ಲೂ ತೋರಿಸಲಿ ಎಂದು ಅನೇಕರು ಆಗ್ರಹಿಸಿದ್ದಾರೆ. ಅನೇಕರು ಭವ್ಯಾ ಅವರ ಆಟವನ್ನು ಟೀಕಿಸಿದ್ದು ಇದೆ. ‘ಭವ್ಯಾ ಕೇವಲ ಡ್ರಾಮಾ ಮಾಡ್ತಾರೆ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಅಪಸ್ವರ ತೆಗೆದಿದ್ದು ಇದೆ.

5 / 5