ವಿರೋಶ್ ರಿಸೆಪ್ಶನ್: ಮಹೇಶ್ ಬಾಬು ಮಗಳ ಕಂಡಾಗ ರಶ್ಮಿಕಾಗೆ ಬಂತು ಹಳೆಯ ನೆನಪು
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ರಿಸೆಪ್ಶನ್ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ. ರಶ್ಮಿಕಾ ಮಂದಣ್ಣ ಅವರು ರಿಸೆಪ್ಶನ್ ಅಲ್ಲಿ ಸೀರೆ ಉಂಟು ಮಿಂಚಿದ್ದಾರೆ. ಅವರ ವಿವಾಹ ಸಮಾರಂಭದ ಕೊನೆಯ ಕಾರ್ಯಕ್ರಮ ಈ ರಿಸೆಪ್ಶನ್. ಅವುಗಳ ಸುಂದರ ಫೋಟೋಗಳು ಇಲ್ಲಿವೆ.
Updated on: Mar 05, 2026 | 8:55 AM

ಅಲ್ಲು ಅರ್ಜುನ್ ಕೂಡ ರಿಸೆಪ್ಶನ್ಗೆ ಆಗಮಿಸಿ ವಿಜಯ್ ಹಾಗೂ ರಶ್ಮಿಕಾಗೆ ಶುಭ ಕೋರಿದರು. ದಂಪತಿ ಸುಖವಾಗಿ ಜೀವನ ನಡೆಸಲಿ ಎಂದು ಹಾರೈಸಿದರು.

ಪುಷ್ಪ ಚಿತ್ರದ ನಿರ್ದೇಶಕ ಸುಕುಮಾರ್ ಅವರು ರಶ್ಮಿಕಾ ಆರತಕ್ಷತೆಗೆ ಆಗಮಿಸಿದರು. ಈ ಫೋಟೋಗಳು ಗಮನ ಸೆಳೆದಿವೆ. ಸುಕುಮಾರ್ ಹಾಗೂ ರಶ್ಮಿಕಾ ಮಧ್ಯೆ ಒಳ್ಳೆಯ ಗೆಳೆತನ ಇದೆ.

ರಶ್ಮಿಕಾ ಆರತಕ್ಷತೆಗೆ ಮಹೇಶ್ ಬಾಬು ಮಗಳು ಸಿತಾರಾ ಆಗಮಿಸಿದ್ದರು. ಕೆಲ ವರ್ಷಗಳ ಹಿಂದೆ ರಶ್ಮಿಕಾ ಅವರನ್ನು ಸಿತಾರಾ ಸಂದರ್ಶಿಸಿದ್ದರು. ಈ ಭೇಟಿ ವೇಳೆ ಆ ನೆನಪು ಇಬ್ಬರಿಗೂ ಬಂದಿದೆ.

ರಶ್ಮಿಕಾ ಅವರ ವಿವಾಹಕ್ಕೆ ಆಗಮಿಸಿದ ನಾಗ ಚೈತನ್ಯ ವಿಶ್ ಮಾಡಿದರು. ವಿಜಯ್ ಹಾಗೂ ನಾಗ ಚೈತನ್ಯ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ರಿಸೆಪ್ಶನ್ ಅಲ್ಲಿ ಸೆಲೆಬ್ರಿಟಿಗಳ ದಂಡೇ ನೆರೆದಿತ್ತು. ತಮಿಳು ನಟ ಕಾರ್ತಿ ಬಂದು ರಶ್ಮಿಕಾಗೆ ವಿಶ್ ಮಾಡಿದರು. ಈ ಮೊದಲು ಇಬ್ಬರೂ ಒಟ್ಟಾಗಿ ನಟಿಸಿದ್ದರು.

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.
Read More




