ಗೆಲ್ಲುತ್ತಾರಾ ಸಿಂಗಲ್ ಸಿಂಹಿಣಿ ಮೋಕ್ಷಿತಾ? ಪ್ಲಸ್ ಏನು? ಮೈನಸ್ ಏನು?
Bigg Boss Kannada Season 11: ಬಿಗ್ಬಾಸ್ ಕನ್ನಡ ಸೀಸನ್ 11ರ ಫಿನಾಲೆ ಬಹಳ ಹತ್ತಿರ ಬಂದಾಗಿದೆ. ಇದೇ ಭಾನುವಾರ ವಿಜೇತರ ಘೋಷಣೆ ಆಗಲಿದೆ. ಕಪ್ ಗೆಲ್ಲುವ ರೇಸ್ನಲ್ಲಿ ಆರು ಮಂದಿ ಇದ್ದಾರೆ. ಹನುಮಂತು, ಮೋಕ್ಷಿತಾ, ತ್ರಿವಿಕ್ರಮ್, ಭವ್ಯಾ, ಮಂಜು ಮತ್ತು ರಜತ್. ಇದರಲ್ಲಿ ಮೋಕ್ಷಿತಾ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರು. ಮೋಕ್ಷಿತಾ ಕಪ್ ಗೆಲ್ಲುತ್ತಾರಾ? ಅವರ ಪ್ಲಸ್ ಏನು? ಮೈನಸ್ ಏನು?
Mokshitha Dis
Follow us
ಮೋಕ್ಷಿತಾ ಸಮಯಕ್ಕೆ ತಕ್ಕಂತೆ ಆಟ ಬದಲಾಯಿಸಿಕೊಂಡು, ಉತ್ತಮ ಪಡಿಸಿಕೊಂಡು ಹೋಗುತ್ತಿದ್ದಾರೆ. ಗುಂಪಿನಲ್ಲಿದ್ದ ಮೋಕ್ಷಿತಾ ಬಳಿಕ ಕೇವಲ ಗೆಲ್ಲುವ ಉದ್ದೇಶದಿಂದಲೇ ಗುಂಪನ್ನು ಬಿಟ್ಟು ಒಂಟಿಯಾಗಿ ಆಡಲು ಪ್ರಾರಂಭಿಸಿದ್ದಾರೆ.
ಉಗ್ರಂ ಮಂಜು, ಗೌತಮಿ ಗ್ರೂಪ್ನಲ್ಲಿದ್ದ ಮೋಕ್ಷಿತಾ ಸುದೀಪ್ ಅವರ ಮಾತನ್ನು ಅರ್ಥ ಮಾಡಿಕೊಂಡು ಒಂಟಿಯಾಗಿ ಆಡಲು ಶುರು ಮಾಡಿದರು. ಆ ನಂತರ ಅವರು ಹೆಚ್ಚು ಚೆನ್ನಾಗಿ ಆಡಲು ಪ್ರಾರಂಭಿಸಿದರು. ತನ್ನ ತನದಿಂದ ಗುರುತು ಪಡೆಯಲು ಪ್ರಾರಂಭ ಮಾಡಿದರು.
ಕಳಪೆ ತೆಗೆದುಕೊಳ್ಳದ ಮೋಕ್ಷಿತಾ, ಈ ಸೀಸನ್ನಲ್ಲಿ ಈವರೆಗೆ ಒಮ್ಮೆಯೂ ಕ್ಯಾಪ್ಟನ್ ಸಹ ಆಗಿಲ್ಲ. ಕ್ಯಾಪ್ಟನ್ ಆಗಿಲ್ಲವೆಂದರೆ ಟಾಸ್ಕ್ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಿಸಿಲ್ಲವೆಂದೇ ಅರ್ಥ. ಇದರ ಜೊತೆಗೆ ಕಿಚ್ಚನ ಚಪ್ಪಾಳೆಯೂ ಸಹ ಮೋಕ್ಷಿತಾಗೆ ಸಿಕ್ಕಿಲ್ಲ.
ಹನುಮಂತನ ಕೃಪೆಯಿಂದ ಮೋಕ್ಷಿತಾ ಫಿನಾಲೆ ಪ್ರವೇಶಿಸಿದ್ದಾರೆ ಎಂಬ ಆರೋಪವೂ ಮೋಕ್ಷಿತಾ ಮೇಲೆ ಇದೆ. ಫಿನಾಲೆ ತಲುಪಿದ್ದ ಹನುಮಂತು ನೀಡಿದ ಅವಕಾಶದಿಂದ ಮೋಕ್ಷಿತಾ ಫಿನಾಲೆ ತಲುಪಿದ್ದಾರೆ.
ಮೋಕ್ಷಿತಾ ಚೆನ್ನಾಗಿಯೇ ಆಡಿದ್ದಾರಾದರೂ ಒಮ್ಮೊಮ್ಮೆ ಮನೆಯಲ್ಲಿ ಡಲ್ ಆಗುವುದು ಕೆಲವೊಮ್ಮೆ ಬಹಳ ಆಕ್ಟಿವ್ ಆಗುವುದು ಆಗಿದ್ದಿದೆ. ಇದು ಸಹ ಮೋಕ್ಷಿತಾಗೆ ನೆಗೆಟಿವ್ ಆಗಿ ಪರಿಣಮಿಸುವ ಸಾಧ್ಯತೆ ಇದೆ.
ಈ ವರೆಗೆ ಮೋಕ್ಷಿತಾ ಒಮ್ಮೆಯೂ ಕಳಪೆ ತೆಗೆದುಕೊಂಡಿಲ್ಲ. ಇದು ಅವರ ಆಟದ ಗುಣಮಟ್ಟ ತೋರಿಸುತ್ತದೆ. ಸಾಮಾನ್ಯವಾಗಿ ಕೆಟ್ಟದಾಗಿ ಆಡಿದವರಿಗೆ, ಕೆಟ್ಟ ವರ್ತನೆ ತೋರಿದವರಿಗೆ ಕಳಪೆ ಸಿಗುತ್ತದೆ. ಆದರೆ ಒಮ್ಮೆಯೂ ಮೋಕ್ಷಿತಾಗೆ ಕಳಪೆ ಸಿಕ್ಕಿಲ್ಲ.
ಮೋಕ್ಷಿತಾ ಗುಂಪು ಕಟ್ಟಿಕೊಂಡು ಆಡಿಲ್ಲ. ಆರಂಭದಿಂದಲೂ ಒಂಟಿಯಾಗಿಯೇ ಇದ್ದುಕೊಂಡು ತಮ್ಮ ಗುರಿಯನ್ನು ತಲುಪಲು ಆಡಿಕೊಂಡು ಬಂದಿದ್ದಾರೆ. ಟಾಸ್ಕ್ಗಳಲ್ಲಿಯೂ ಒಳ್ಳೆಯ ಪ್ರದರ್ಶನವನ್ನೇ ತೋರುತ್ತಾ ಬಂದಿದ್ದಾರೆ. ಇದು ಮೋಕ್ಷಿತಾರ ಪ್ಲಸ್.