- Kannada News Photo gallery Chikkaballapur District Faces Snakebite Epidemic: 4 Deaths in a Year, taja suddi
ಬಿಸಿಲ ಬೇಗೆಗೆ ಬಿಲದಿಂದ ಹೊರಬರುತ್ತಿರುವ ಹಾವುಗಳು: ಚಿಕ್ಕಬಳ್ಳಾಪುರದಲ್ಲಿ 2 ತಿಂಗಳಲ್ಲಿ 85 ಜನಕ್ಕೆ ಕಚ್ಚಿರುವುದು ನಾಗರಹಾವುಗಳೇ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೇಸಿಗೆಯ ಉಷ್ಣತೆಯಿಂದಾಗಿ ಹಾವುಗಳ ಕಾಟ ಹೆಚ್ಚಾಗಿದೆ. ಕಳೆದ ಎರಡು ತಿಂಗಳಲ್ಲಿ 85 ಜನರಿಗೆ ಹಾವು ಕಚ್ಚಿದ್ದು, ಕಳೆದ ಒಂದು ವರ್ಷದಲ್ಲಿ 4 ಜನರು ಸಾವನ್ನಪ್ಪಿದ್ದಾರೆ. ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದ್ದು, ಹಾವು ಕಚ್ಚುವಿಕೆಯಿಂದ ತಕ್ಷಣ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದೆ.
Updated on: Mar 06, 2025 | 7:18 PM

ಈಗ ಎಲ್ಲಡೆ ಬಿರುಬಿಸಿಲು, ಮನುಷ್ಯರು ಒಂದು ಕಡೆಯಿಂದ ಇನ್ನೊಂದು ಕಡೆ ಹೋಗಿಯಾದರೂ, ದೇಹ ಹಾಗೂ ಮನಸ್ಸನ್ನು ತಂಪಾಗಿಸಿಕೊಳ್ಳುತ್ತಾರೆ. ಆದರೆ ಹುತ್ತದ ಒಳಗೆ ಇರುವ ಹಾವುಗಳು ಹುತ್ತದಿಂದ ಆಚೆ ಬಂದು ಮನಸ್ಸೊ ಇಚ್ಚೆ ಸಿಕ್ಕ ಸಿಕ್ಕವರನ್ನು ಕಚ್ಚುತ್ತಿವೆ. ಜಿಲ್ಲೆಯಲ್ಲಿ ಹಾವುಗಳ ಹಾವಳಿ ಹೆಚ್ಚಾಗಿದ್ದು ಅಲ್ಲಿಯ ಜನ ಹಾವುಗಳ ಹೆಸರು ಕೇಳಿದರೆ ಬೆಚ್ಚಿ ಬಿಳುವಂತಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಾಯಿಗಿಂತ ಹಾವುಗಳ ಕಾಟ ಹೆಚ್ಚಾಗಿದೆ. ಹೌದು! ಈಗ ಬಿರು ಬಿಸಿಲು ಹಿನ್ನಲೆ ಹುತ್ತದ ಒಳಗೆ ಸೇಪಾಗಿ ಇರ್ತಿದ್ದ ಹಾವುಗಳು, ಈಗ ಬಿಸಿಲ ಬೇಗೆ ತಾಳಲಾರದೆ, ರಸ್ತೆ, ಮನೆ ಶೌಚಾಲಯಗಳು, ಪಾರ್ಕ್ಗಳು ನೀರಿನ ಸಂಪಿನಲ್ಲಿ ಕಾಣಿಸ್ತಿವೆ.

ಸ್ವಲ್ಪ ಯಾಮಾರಿ ತುಳಿದರೆ, ಸಿಕ್ಕಸಿಕ್ಕವರೆಗೆ ಹಾವು ಕಚ್ಚುತ್ತಿವೆ. ಹೀಗೆ, ಒಂದೇರಡು ತಿಂಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿ 85 ಜನರಿಗೆ ಹಾವು ಕಚ್ಚಿದ್ದು ಒಬ್ಬರು ಐಸಿಯೂನಿಂದ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ.

ಇನ್ನೂ ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿ ಕಳೆದ ಒಂದು ವರ್ಷದಲ್ಲಿ 813 ಜನರಿಗೆ ಹಾವು ಕಚ್ಚಿದ್ದು, ನಾಲ್ಕು ಜನ ಮೃತಪಟ್ಟಿದ್ದಾರೆ. ಈಗ ಬೇಸಿಗೆ ಹಿನ್ನಲೆ ಹಾವು ಕಡಿತಗಳು ಹೆಚ್ಚಾಗುವ ಸಂಭವ ಇರುವ ಕಾರಣ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಜಿಲ್ಲೆಯ ಪ್ರತಿಯೊಂದು ಪ್ರಾಥಮಿಕ ಆಸ್ಪತ್ರೆಗಳಲ್ಲಿ ತಲಾ 10 anti snake venom ಚುಚ್ಚು ಮದ್ದುಗಳನ್ನು ಸಂಗ್ರಹಿಸಿದೆ.

ನಾಗರ ಹಾವುಗಳಿಗೂ ಚಿಕ್ಕಬಳ್ಳಾಪುರ ಜಿಲ್ಲೆಗೂ ಅದೇನು ನಂಟೊ ಗೊತ್ತಿಲ್ಲ. ಕಣ್ಣಿಗೆ ಬಿದ್ದ ಬಹುತೇಕ ಹಾವುಗಳು ನಾಗರ ಹಾವುಗಳಾಗಿದ್ದು, ಜಿಲ್ಲೆಯಲ್ಲಿ ಹೊಸ ಸಮಸ್ಯೆ ಉದ್ಭವವಾಗಿದೆ. ಯಾವುದಕ್ಕೂ ಬೇಸಿಗೆ ಕಳೆಯುವ ತನಕ ಹಾವುಗಳಿಂದ ಹುಷಾರಾಗಿರಬೇಕಾಗಿದೆ.



















