ಭಾರಿ ಮಳೆಯಿಂದ ಚಾರ್ಮಾಡಿ ಘಾಟ್‌ನಲ್ಲಿ ರಸ್ತೆಗೆ ಉರುಳಿದ ಮರಗಳು: ಟ್ರಾಫಿಕ್ ಜಾಮ್
Chikkamagaluru News: ಭಾರಿ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಗ್ರಾಮ ಸಮೀಪ ಚಾರ್ಮಾಡಿ ಘಾಟ್‌ನ 8ನೇ ತಿರುವಿನಲ್ಲಿ 3 ಮರಗಳು ರಸ್ತೆಗುರುಳಿವೆ. ಮೂರು ಯಂತ್ರಗಳಿಂದ ಪೊಲೀಸರ ಜೊತೆ ಸ್ಥಳಿಯರ ನಿರಂತರ ಕಾರ್ಯಾಚರಣೆಯಿಂದ ಮರ ತೆರವು ಮಾಡಿ, ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
Updated on:Sep 30, 2023 | 7:53 PM

ಮಳೆ ಇಲ್ಲದೆ ಕಂಗಾಲಾಗಿದ್ದ ಕಾಫಿನಾಡಿನ ಮಲೆನಾಡಿಗರ ಮೇಲೆ ವರುಣ ಕೃಪೆ ತೋರಿದ್ದಾನೆ. ಹನಿ ಹನಿ ನೀರಿಗೂ ಸಂಕಷ್ಟವಾಗುವ ಆತಂಕದಲ್ಲಿದ್ದ ಮಲೆನಾಡಿಗರಿಗೆ ನಿನ್ನೆಯಿಂದ ಸುರಿಯುತ್ತಿರುವ ವರುಣ ಆತಂಕ ದೂರ ಮಾಡಿದ್ದು, ಇನ್ನೊಂದೆ ಮಳೆಯಿಂದಾಗಿ ಮರಗಳು ಉರುಳಿ ಬಿದ್ದಿವೆ.

ಭಾರಿ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಗ್ರಾಮ ಸಮೀಪ ಚಾರ್ಮಾಡಿ ಘಾಟ್‌ನ 8ನೇ ತಿರುವಿನಲ್ಲಿ 3 ಮರಗಳು ರಸ್ತೆಗುರುಳಿವೆ.

ನಿನ್ನೆಯಿಂದ ಮಳೆ ಸುರಿಯುತ್ತಿದ್ದು, ಪರಿಣಾಮ ಅಪಾಯಗಳು ಸಂಭವಿಸಬಹುದು ಎಂದು ಜನರಲ್ಲಿ ಆತಂಕ ಶುರುವಾಗಿದೆ.

3 ಮರಗಳು ರಸ್ತೆಗುರುಳಿದ ಪರಿಣಾಮ 3 ಗಂಟೆಗಳ ಕಾಲ ಕಿ.ಮೀ.ಗಟ್ಟಲೇ ಟ್ರಾಫಿಕ್‌ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ.

ಚಾರ್ಮಾಡಿ ಘಾಟಿಯಲ್ಲಿ ಮೂರು ಯಂತ್ರಗಳಿಂದ ಪೊಲೀಸರ ಜೊತೆ ಸ್ಥಳಿಯರ ನಿರಂತರ ಕಾರ್ಯಾಚರಣೆಯಿಂದ ಮರ ತೆರವು ಮಾಡಿ, ಟ್ರಾಫಿಕ್ ಕ್ಲಿಯರ್ ಮಾಡಲು ಹರಸಾಹಸ ಪಟ್ಟಿದ್ದಾರೆ.
Published On - 7:52 pm, Sat, 30 September 23

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.
Read More



