AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Meghana Raj: ಚಿರು ಅಗಲಿ ಎರಡು ವರ್ಷ; ಭಾವನಾತ್ಮಕ ಪೋಸ್ಟ್ ಮೂಲಕ ಪತಿಯನ್ನು ಸ್ಮರಿಸಿದ ಮೇಘನಾ​

Meghana Raj Chiranjeevi Sarja Photos: ಚಿರಂಜೀವಿ ಸರ್ಜಾ ನಿಧನರಾಗಿ ಎರಡು ವರ್ಷ ಸಂದಿದೆ. ಪತ್ನಿ ಮೇಘನಾ ರಾಜ್​, ಸಹೋದರ ಧ್ರುವ ಸರ್ಜಾ ಸೇರಿದಂತೆ ಬಂಧುವರ್ಗ, ಅಭಿಮಾನಿಗಳು ನಟನನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಎಲ್ಲರ ನೆಚ್ಚಿನ ತಾರಾ ಜೋಡಿಯಾಗಿದ್ದ ಚಿರು- ಮೇಘನಾರ ಫೋಟೋಗಳು ಇಲ್ಲಿವೆ.

TV9 Web
| Edited By: |

Updated on:Jun 07, 2022 | 12:22 PM

Share
ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಗಲಿ ಎರಡು ವರ್ಷ ಸಂದಿದೆ. ಇಂದು (ಜೂ.7) ಕುಟುಂಬಸ್ಥರು ಎರಡನೇ ವರ್ಷದ ಪುಣ್ಯತಿಥಿಯನ್ನು ಮಾಡಲಿದ್ದಾರೆ. ನೆಲಗುಳಿಯ ಚಿರು ಸಮಾಧಿಗೆ ತೆರಳಿ ಸರ್ಜಾ ಕುಟುಂಬ ಪೂಜೆ ಸಲ್ಲಿಸಲಿದೆ. ಧ್ರುವ ಸರ್ಜಾ ಈ ವಿಶೇಷ ಫೋಟೋದ ಮೂಲಕ ಸಹೋದರನಿಗೆ ನಮನ ಸಲ್ಲಿಸಿದ್ದಾರೆ. (ಕೃಪೆ: ಧೃವ ಸರ್ಜಾ/ ಟ್ವಿಟರ್)

1 / 7
ಮೇಘನಾ ರಾಜ್ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡು ಚಿರುವನ್ನು ಸ್ಮರಿಸಿದ್ದಾರೆ. ‘ನೀವು ಮತ್ತು ನಾನು.. ನಿಮ್ಮಂಥವರು ಯಾರೂ ಇರಲಿಲ್ಲ. ನಿಮ್ಮಂತೆ ಯಾರೂ ಇಲ್ಲ. ನೀವೊಬ್ಬರೇ.. ಒಬ್ಬರು ಮಾತ್ರ.. ಲವ್​ ಯೂ’ ಎಂದು ಮೇಘನಾ ಬರೆದುಕೊಂಡಿದ್ದಾರೆ. (ಚಿತ್ರ ಕೃಪೆ: ಮೇಘನಾ ರಾಜ್)

2 / 7
ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಎಲ್ಲರ ಅಚ್ಚುಮೆಚ್ಚಿನ ತಾರಾ ಜೋಡಿಯಾಗಿದ್ದವರು. ಹಲವು ವರ್ಷಗಳ ಕಾಲ ಪ್ರೇಮಿಗಳಾಗಿ ಸುತ್ತಾಡಿದ ನಂತರ ಈ ಜೋಡಿ 2018ರ ಮೇ 2ರಂದು ವಿವಾಹವಾಗಿದ್ದರು.

3 / 7
ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ನಿಧನರಾಗುವಾಗ ಈ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದರು. 2022ರ ಅಕ್ಟೋಬರ್​ 22ರಂದು ರಾಯನ್​ಗೆ ನಟಿ ಜನ್ಮನೀಡಿದರು.

4 / 7
ನಂತರದಲ್ಲಿ ಮೇಘನಾ ರಾಜ್​ ಪುತ್ರನ ಆರೈಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು.

5 / 7
ಇದೀಗ ರಾಯನ್​ ತನ್ನ ಆಟದಿಂದ ಎಲ್ಲರ ಮನಗೆಲ್ಲುತ್ತಿದ್ದಾನೆ. ಮೇಘನಾ ರಾಜ್​ ಮತ್ತೆ ಚಿತ್ರರಂಗಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ಇತ್ತೀಚೆಗೆ ಅವರು ನಟಿಸಿದ್ದ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ತೆರೆ ಕಂಡು ಮೆಚ್ಚುಗೆ ಗಳಿಸಿತ್ತು.

6 / 7
ಮತ್ತೂ ಕೆಲವು ಚಿತ್ರಗಳನ್ನು ಒಪ್ಪಿಕೊಂಡಿರುವ ಮೇಘನಾ ಅವುಗಳಲ್ಲಿ ಸಕ್ರಿಯರಾಗಿದ್ದಾರೆ. ಹಾಗೆಯೇ ಚಿರಂಜೀವಿ ಸರ್ಜಾ ನಟಿಸಿರುವ ಕೊನೆಯ ಚಿತ್ರ ‘ರಾಜಮಾರ್ತಾಂಡ’ ಶೀಘ್ರದಲ್ಲೇ ರಿಲೀಸ್ ಆಗಲಿದೆ. ಆ ಚಿತ್ರದ ಮೂಲಕ ಮತ್ತೆ ಚಿರುವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ.

7 / 7

Published On - 12:12 pm, Tue, 7 June 22

Follow Us
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್

ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ

ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್

ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್

ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!

ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ

ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು

ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ

ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ