Priyanka Chopra: 16ನೇ ವಯಸ್ಸಲ್ಲಿ ಪ್ರಿಯಾಂಕಾ ಚೋಪ್ರಾಗೆ ಹುಡುಗರ ಕಾಟ; ಮನೆಯ ಕಿಟಕಿ ಭದ್ರಪಡಿಸಿದ್ದ ತಂದೆ
ಭಾರತೀಯ ಹುಡುಗಿ ರೀತಿ ಡ್ರೆಸ್ ಮಾಡಿಕೊಳ್ಳಬೇಕು ಎಂದು ಪ್ರಿಯಾಂಕಾ ಚೋಪ್ರಾಗೆ ಅವರ ತಂದೆ ತಾಕೀತು ಮಾಡಿದ್ದರು. ಆ ಘಟನೆಗಳನ್ನು ಈಗ ಪ್ರಿಯಾಂಕಾ ನೆನಪಿಸಿಕೊಂಡಿದ್ದಾರೆ.
Updated on: May 03, 2023 | 1:31 PM

ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಜೀವನದ ಒಂದಷ್ಟು ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಹದಿಹರೆಯದಲ್ಲಿ ಹುಡುಗರಿಂದ ತಾವು ಅನುಭವಿಸಿದ ಕಾಟದ ಬಗ್ಗೆ ಈಗ ಬಾಯಿ ಬಿಟ್ಟಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅವರು ನೆನಪಿನ ಪುಟ ತೆರೆದಿದ್ದಾರೆ.

ಎರಡು ವರ್ಷ ಅಮೆರಿಕದಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿದ ಬಳಿಕ 16ನೇ ವಯಸ್ಸಿನಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಭಾರತಕ್ಕೆ ವಾಪಸ್ಸು ಬಂದಿದ್ದರು. ಆಗ ಅವರನ್ನು ಹುಡುಗರು ಹಿಂಬಾಲಿಸುತ್ತಿದ್ದರು. ಅದರಿಂದ ಅವರ ತಂದೆ ಅಶೋಕ್ ಚೋಪ್ರಾಗೆ ಕಿರಿಕಿರಿ ಆಗಿತ್ತು.

ಒಂದು ದಿನ ಹಿಂಬಾಲಿಸಿಕೊಂಡು ಬಂದ ಹುಡುಗರ ಪೈಕಿ ಓರ್ವನಂತೂ ಪ್ರಿಯಾಂಕಾ ಚೋಪ್ರಾ ಮನೆಯ ಬಾಲ್ಕನಿವರೆಗೂ ಕಾಲಿಟ್ಟಿದ್ದ. ಆತನನ್ನು ನೋಡಿ ಪ್ರಿಯಾಂಕಾ ಕಿರುಚಿಕೊಂಡಿದ್ದರು. ಬಳಿಕ ಅಶೋಕ್ ಚೋಪ್ರಾ ಅವರು ಮನೆಯ ಕಿಟಕಿಗೆ ಸರಳು ಹಾಕಿಸಿದ್ದರು.

ಅಶೋಕ್ ಚೋಪ್ರಾ ಅವರು ಮನೆಯ ಕಿಟಕಿಗಳನ್ನು ಭದ್ರಪಡಿಸಿದ್ದು ಮಾತ್ರವಲ್ಲದೇ ಪ್ರಿಯಾಂಕಾಗೆ ಕೆಲವು ನಿಯಮಗಳನ್ನೂ ಹೇರಿದರು. ಭಾರತೀಯ ಹುಡುಗಿ ರೀತಿ ಡ್ರೆಸ್ ಮಾಡಿಕೊಳ್ಳಬೇಕು ಎಂದು ಕೂಡ ತಾಕೀತು ಮಾಡಿದ್ದರು. ಆ ಘಟನೆಗಳನ್ನು ಪ್ರಿಯಾಂಕಾ ಈಗ ನೆನಪಿಸಿಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಅವರು ಈಗ ಅಮೆರಿಕದಲ್ಲಿ ನೆಲೆಸಿದ್ದಾರೆ. ಬಾಲಿವುಡ್ನ ಯಾವುದೇ ಸಿನಿಮಾವನ್ನೂ ಅವರು ಒಪ್ಪಿಕೊಳ್ಳುತ್ತಿಲ್ಲ. ಹಾಲಿವುಡ್ ಪ್ರಾಜೆಕ್ಟ್ಗಳ ಕಡೆಗೆ ಅವರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ನಟಿಸಿದ ‘ಸಿಟಾಡೆಲ್’ ವೆಬ್ ಸಿರೀಸ್ ಏಪ್ರಿಲ್ 28ರಂದು ಬಿಡುಗಡೆ ಆಯಿತು.

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್ ಇಂಟರ್ನೆಟ್) ಸಂಸ್ಥೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿ.
Read More




