- Kannada News Photo gallery Comedian Lilly Singh Admitted to hospital After she diagnose with ovarian cysts
ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಖ್ಯಾತ ಕಾಮಿಡಿಯನ್; ವಿಡಿಯೋ ನೋಡಿ ಬೆಚ್ಚಿದ ಫ್ಯಾನ್ಸ್
ಲಿಲ್ಲಿ ಸಿಂಗ್ ಅವರು ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಅವರನ್ನು ತುರ್ತು ನಿಗಾ ಘಟಕದಲ್ಲಿ ಇಡಲಾಗಿದೆ. ಈ ಪೋಸ್ಟ್ಗೆ ಅನೇಕ ಸೆಲೆಬ್ರಿಟಿಗಳು ಉತ್ತರಿಸಿದ್ದಾರೆ. ಬೇಗ ಗುಣಮುಖರಾಗಿ ಎಂದು ಕೋರಿದ್ದಾರೆ.
Updated on: Feb 24, 2022 | 6:19 PM

ಕಾಮಿಡಿಯನ್ ಆಗಿ ಗುರುತಿಸಿಕೊಂಡಿರುವ ಲಿಲ್ಲಿ ಸಿಂಗ್ ಓವರಿಯನ್ ಸಿಸ್ಟ್ (ಅಂಡಾಶಯದಲ್ಲಿನ ಗುಳ್ಳೆ) ತೊಂದರೆಯಿಂದ ಬಳಲುತ್ತಿದ್ದಾರೆ. ಇದರಿಂದ ಅವರ ಆರೋಗ್ಯ ತೀವ್ರ ರೀತಿಯಲ್ಲಿ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಮರ್ಜೆನ್ಸಿ ವಾರ್ಡ್ನಲ್ಲಿ ಇರುವ ವಿಡಿಯೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಶಾಕ್ಗೆ ಒಳಗಾಗಿದ್ದಾರೆ. ಅವರ ಸ್ಥಿತಿ ನೋಡಿ ಅನೇಕ ಸೆಲೆಬ್ರಿಟಿಗಳು ಮರುಗಿದ್ದಾರೆ. ಎಲ್ಲರೂ ಲಿಲ್ಲಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

ಲಿಲ್ಲಿ ಸಿಂಗ್ ಅವರು ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಅವರನ್ನು ತುರ್ತು ನಿಗಾ ಘಟಕದಲ್ಲಿ ಇಡಲಾಗಿದೆ. ಈ ಪೋಸ್ಟ್ಗೆ ಅನೇಕ ಸೆಲೆಬ್ರಿಟಿಗಳು ಉತ್ತರಿಸಿದ್ದಾರೆ. ಬೇಗ ಗುಣಮುಖರಾಗಿ ಎಂದು ಕೋರಿದ್ದಾರೆ. ಈ ವಿಡಿಯೋ ಭಯ ಬೀಳಿಸುವಂತಿದೆ.

ಈ ಸಮಸ್ಯೆಯಿಂದ ತೀವ್ರ ನೊಂದಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ‘ನನಗೆ ಸಾಕಾಗಿದೆ. ಈ ಸಮಸ್ಯೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದೇನೆ’ ಎಂಬರ್ಥ ಬರುವ ರೀತಿಯಲ್ಲಿ ಅವರು ಬರೆದುಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಜಾಕ್ವೆಲಿನ್ ಫರ್ನಾಂಡಿಸ್, ‘ನೀವು ಬೇಗ ಗುಣಮುಖರಾಗಿ’ ಎಂದು ಬರೆದುಕೊಂಡಿದ್ದಾರೆ. ಗಾಯಕಿ ವಿದ್ಯಾ ವೋಕ್ಸ್ ಕೂಡ ಕಮೆಂಟ್ ಮಾಡಿದ್ದು, ‘ನೀವು ಬೇಗ ಗುಣಮುಖರಾಗುತ್ತೀರಿ ಎನ್ನುವ ನಂಬಿಕೆ ಇದೆ’ ಎಂದಿದ್ದಾರೆ.

‘ಸೂಪರ್ ವುಮನ್’ ಯೂಟ್ಯೂಬ್ ಚಾನೆಲ್ ಮೂಲಕ ಹೆಸರು ಮಾಡಿದ್ದಾರೆ ಲಿಲ್ಲಿ. ‘ಡಾಲ್ಫೇಸ್’ ಕಾಮಿಡಿ ಸೀರಿಸ್ನ ಎರಡನೇ ಸೀಸನ್ನಲ್ಲಿ ಲಿಲ್ಲಿ ಕಾಣಿಸಿಕೊಂಡಿದ್ದರು. ಅವರಿಗೆ ಸಾಕಷ್ಟು ಜನಪ್ರಿಯತೆ ಇದೆ.




