ಕೊರೊನಾ ಬಳಿಕ ನಿಂತು ಹೋಗಿದ್ದ ಈ ನಾಟಕ ಕಲೆಗೆ ಮರು ಜೀವ ನೀಡಿದ ಇಲ್ಲಿನ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ಮತ್ತು ತಂಡ ಪೊಲೀಸರು ಕೂಡ ಮನಸ್ಸು ಮಾಡಿದರೆ ಜನರನ್ನ ರಂಜಿಸಬಲ್ಲರು ಎಂದು ಸಾಬೀತು ಮಾಡಿದ್ದಾರೆ. ಸ್ವತಃ ಇನ್ಸ್ಪೆಕ್ಟರ್ ಪ್ರದೀಪ್ ಕೃಷ್ಣನ ಪಾತ್ರದಲ್ಲಿ ಮಿಂಚಿದ್ದು, ಪಿಎಸ್ಐ ರಂಗಸ್ವಾಮಿ ದುರ್ಯೋದನ, ಪೊಲೀಸ್ ಸಿಬ್ಬಂದಿ ದೇವಯ್ಯ ಅರ್ಜುನನಾಗಿ ಕಾಣಿಸಿಕೊಂಡಿದ್ದರೆ. ಭೀಮ, ಅರ್ಜುನ, ನಕುಲ ಸಹದೇವರು, ಧರ್ಮರಾಯ, ಕರ್ಣ ಪಾತ್ರದಲ್ಲಿ ಒಬ್ಬೊಬ್ಬ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಮನೋಜ್ಞ ಅಭಿನಯಕ್ಕೆ ಕಲಾಸಕ್ತರು ಬೆರಗಾಗಿದ್ದಾರೆ.