AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವ ದಾಖಲೆ… ಮುಂಬೈ ಇಂಡಿಯನ್ಸ್​ ಮುಡಿಗೆ 12ನೇ ಟ್ರೋಫಿ

MUMBAI INDIANS: ಮುಂಬೈ ಇಂಡಿಯನ್ಸ್​ ಫ್ರಾಂಚೈಸಿಯು ಐಪಿಎಲ್​, ಡಬ್ಲ್ಯೂಪಿಎಲ್, ಎಸ್​ಎ20, ಐಎಲ್​ಟಿ20, ಎಂಎಲ್​ಸಿ ಹಾಗೂ ಸಿಎಲ್​ಟಿ20 ಲೀಗ್​ಗಳಲ್ಲಿ ತಂಡಗಳನ್ನು ಕಣಕ್ಕಿಳಿಸಿದೆ. ಈ ಆರು ಲೀಗ್​​ಗಳ ಮೂಲಕ ಮುಂಬೈ ಇಂಡಿಯನ್ಸ್ ಮುಡಿಗೇರಿಸಿಕೊಂಡಿರುವುದು ಬರೋಬ್ಬರಿ 11 ಟ್ರೋಫಿಗಳನ್ನು. ಈ ಮೂಲಕ ಟಿ20 ಇತಿಹಾಸದ ಅತ್ಯಂತ ಯಶಸ್ವಿ ಫ್ರಾಂಚೈಸಿ ಎನಿಸಿಕೊಂಡಿದೆ.

ಝಾಹಿರ್ ಯೂಸುಫ್
|

Updated on: Mar 16, 2025 | 7:23 AM

Share
ಟಿ20 ಕ್ರಿಕೆಟ್ ಲೀಗ್​ ಇತಿಹಾಸದ ಅತ್ಯಂತ ಯಶಸ್ವಿ ಫ್ರಾಂಚೈಸಿ ಎಂದರೆ ಅದು ಮುಂಬೈ ಇಂಡಿಯನ್ಸ್ (MI). ಏಕೆಂದರೆ ಈ ಫ್ರಾಂಚೈಸಿ ಕಣಕ್ಕಿಳಿದ ಪ್ರತಿಯೊಂದು ಲೀಗ್​ನಲ್ಲೂ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ವಿಶ್ವದ ಪ್ರಮುಖ ಲೀಗ್​ಗಳಲ್ಲಿ ಟ್ರೋಫಿ ಗೆದ್ದ ವಿಶ್ವದ ಏಕೈಕ ಫ್ರಾಂಚೈಸಿ ಎಂಬ ಹೆಗ್ಗಳಿಕೆಯನ್ನು ಸಹ ಮುಂಬೈ ಇಂಡಿಯನ್ಸ್ ತನ್ನದಾಗಿಸಿಕೊಂಡಿದೆ.

1 / 8
2008 ರಿಂದ ಐಪಿಎಲ್​ನಲ್ಲಿ ಕಣಕ್ಕಿಳಿಯುತ್ತಿರುವ ಮುಂಬೈ ಇಂಡಿಯನ್ಸ್ ಚೊಚ್ಚಲ ಟ್ರೋಫಿ ಗೆದ್ದಿರುವುದು ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯಲ್ಲಿ. 2011 ರಲ್ಲಿ ನಡೆದ ಈ ಟೂರ್ನಿಯಲ್ಲಿ ಮುಂಬೈ ಪಡೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದಾದ ಬಳಿಕ 2013 ರಲ್ಲೂ ಚಾಂಪಿಯನ್ಸ್ ಲೀಗ್​ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಯಿತು.

2 / 8
ಇನ್ನು ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಮೊದಲ ಟ್ರೋಫಿ ಗೆದ್ದಿದ್ದು 2013 ರಲ್ಲಿ. ಆ ಬಳಿಕ 2015, 2017, 2019 ಮತ್ತು 2020 ರಲ್ಲಿ ಟ್ರೋಫಿ ಎತ್ತಿ ಹಿಡಿಯುವಲ್ಲಿ ಮುಂಬೈ ಇಂಡಿಯನ್ಸ್ ಯಶಸ್ವಿಯಾಗಿದೆ. ಈ ಮೂಲಕ ಐಪಿಎಲ್​ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದೆನಿಸಿಕೊಂಡಿದೆ.

3 / 8
ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲೂ ಮುಂಬೈ ಇಂಡಿಯನ್ಸ್ ತಂಡ ಟ್ರೋಫಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. 2023 ರಲ್ಲಿ ನಡೆದ ಈ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡವನ್ನು ಸೋಲಿಸಿ ಮುಂಬೈ ಇಂಡಿಯನ್ಸ್ ವನಿತಾ ಪಡೆ ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡಿದೆ.

4 / 8
ಇನ್ನು ಅಮೆರಿಕದಲ್ಲಿ ನಡೆಯುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲೂ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಒಡೆತನದ ಎಂಐ ನ್ಯೂಯಾರ್ಕ್ ತಂಡ ಕಣಕ್ಕಿಳಿಯುತ್ತಿದೆ. ಈ ತಂಡವು 2023 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಟ್ರೋಫಿ ಸಂಖ್ಯೆಯನ್ನು ಒಂಬತ್ತೇಕೆರಿಸಿತು.

5 / 8
ಯುಎಇನಲ್ಲಿ ನಡೆಯುವ ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಎಂಐ ಎಮಿರೇಟ್ಸ್ ಹೆಸರಿನ ತಂಡವನ್ನು ಕಣಕ್ಕಿಳಿಸುತ್ತಿದೆ. ಈ ತಂಡವು 2024 ರಲ್ಲಿ ಟ್ರೋಫಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

6 / 8
ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲೂ ಮುಂಬೈ ಇಂಡಿಯನ್ಸ್ ಟ್ರೋಫಿ ಖಾತೆಯನ್ನು ತೆರೆದಿದೆ. ಕಳೆದ ಬಾರಿಯ ಎಸ್​ಎ20 ಲೀಗ್​ನ​ ಫೈನಲ್​ ಪಂದ್ಯದಲ್ಲಿ ಸನ್​ರೈಸರ್ಸ್ ಈಸ್ಟರ್ನ್ ಕೇಪ್ ತಂಡವನ್ನು ಮಣಿಸಿ ಎಂಐ ಕೇಪ್​ಟೌನ್ ತಂಡವು ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

7 / 8
ಇನ್ನು ವುಮೆನ್ಸ್ ಪ್ರೀಮಿಯರ್ ಲೀಗ್​ನ (WPL 2025) ಮೂರನೇ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ WPL ನಲ್ಲಿ ಎರಡು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡ ಏಕೈಕ ತಂಡವಾಗಿ ಮುಂಬೈ ಇಂಡಿಯನ್ಸ್ ಹೊರಹೊಮ್ಮಿದೆ.

8 / 8
Follow Us
ಮೋದಿ ಭೇಟಿ ಹಿನ್ನೆಲೆ ಮೈಸೂರಿನಲ್ಲಿ ಬಿಗಿ ಬಂದೋಬಸ್ತ್: ಭದ್ರತೆ ಹೇಗಿದೆ ನೋಡಿ

ಎಲ್ಲರೂ ಸೇರಿದ್ರೆ ಸಿನಿಮಾ, ನಿರ್ದೇಶಕರಿಗೆ ಹಲವು ಆಯ್ಕೆ ಇರುತ್ತೆ; ಗುರುದತ್

ರವಿ ಕರ್ಕಾಟಕ, ಚಂದ್ರ ಕುಂಭರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ

ಪರಪ್ಪನ ಅಗ್ರಹಾರ ಜೈಲಿನಿಂದ ನಗುನಗುತ್ತಲೇ ಹೊರ ಬಂದ ವಿನಯ್ ಕುಲಕರ್ಣಿ

ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು

ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ

ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ

ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ

ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ

ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ