Updated on: Oct 11, 2022 | 10:59 PM
7 ಟಿ20 ವಿಶ್ವಕಪ್ ಬಳಿಕ ಇದೀಗ 8ನೇ ಆವೃತ್ತಿಗೆ ಆಸ್ಟ್ರೇಲಿಯಾದಲ್ಲಿ ವೇದಿಕೆ ಸಿದ್ಧವಾಗಿದೆ. ಕಳೆದ ಏಳು ವಿಶ್ವಕಪ್‌ನಲ್ಲಿ ಅನೇಕ ಆಟಗಾರರು ಹಲವು ದಾಖಲೆಗಳನ್ನೂ ಕೂಡ ನಿರ್ಮಿಸಿದ್ದಾರೆ. ಹೀಗೆ ನಿರ್ಮಾಣವಾದ ದಾಖಲೆಗಳಲ್ಲಿ ಎಲ್ಲರ ಗಮನ ಸೆಳೆದಿರುವುದು ಸಿಕ್ಸರ್ಗಳ ದಾಖಲೆಗಳು.
ಹಾಗಿದ್ರೆ 2007 ರಿಂದ 2021 ರವರೆಗೆ ವಿಶ್ವಕಪ್‌ನಲ್ಲಿ ಎಷ್ಟೆಷ್ಟು ಸಿಕ್ಸ್ಗಳು ಮೂಡಿಬಂದಿತ್ತು ಎಂಬುದರ ಅಂಕಿ ಅಂಶಗಳನ್ನು ನೋವುದಾದರೆ...
2007: ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ 26 ಪಂದ್ಯಗಳನ್ನು ಆಡಲಾಗಿತ್ತು. ಈ ವೇಳೆ ಒಟ್ಟು 265 ಸಿಕ್ಸರ್‌ಗಳು ಮೂಡಿಬಂದಿದ್ದವು.
2009: 2ನೇ ಟಿ20 ವಿಶ್ವಕಪ್‌ನಲ್ಲಿ ಒಟ್ಟು 27 ಪಂದ್ಯಗಳನ್ನು ಆಡಲಾಗಿತ್ತು. ಈ ವೇಳೆ ಕೇವಲ 166 ಸಿಕ್ಸರ್‌ಗಳು ಮಾತ್ರ ಬಾರಿಸಲಾಗಿತ್ತು.
2010: ವೆಸ್ಟ್ ಇಂಡೀಸ್ನಲ್ಲಿ ನಡೆದ 3ನೇ ಟಿ20 ವಿಶ್ವಕಪ್‌ನಲ್ಲಿ 278 ಸಿಕ್ಸರ್‌ಗಳು ಮೂಡಿಬಂದಿತ್ತು.
2012: ಶ್ರೀಲಂಕಾದಲ್ಲಿ ನಡೆದ 4ನೇ ಟಿ20 ವಿಶ್ವಕಪ್‌ನಲ್ಲಿ 27 ಪಂದ್ಯಗಳಲ್ಲಿ 223 ಸಿಕ್ಸರ್‌ಗಳನ್ನು ಬಾರಿಸಿತ್ತು.
2014: ಟಿ20 ವಿಶ್ವಕಪ್ನ 5ನೇ ಆವೃತ್ತಿಯು ಬಾಂಗ್ಲಾದೇಶದಲ್ಲಿ ನಡೆದಿತ್ತು, ಈ ವೇಳೆ ಆಡಲಾದ 35 ಪಂದ್ಯಗಳಲ್ಲಿ 300 ಸಿಕ್ಸರ್‌ಗಳು ಮೂಡಿಬಂದಿತ್ತು.
2016: ಭಾರತದಲ್ಲಿ ನಡೆದ 6ನೇ ಟಿ20 ವಿಶ್ವಕಪ್‌ನಲ್ಲಿ ಹೆಚ್ಚು ಸಿಕ್ಸರ್‌ಗಳು ದಾಖಲಾಗಿದ್ದವು. ಈ ಆವೃತ್ತಿಯಲ್ಲಿ 35 ಪಂದ್ಯಗಳಲ್ಲಿ ಒಟ್ಟು 314 ಸಿಕ್ಸರ್‌ಗಳು ದಾಖಲಾಗಿವೆ.
2021: ಕಳೆದ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸ್ಗಳು ಮೂಡಿಬಂದಿತ್ತು. ಈ ವಿಶ್ವಕಪ್‌ನಲ್ಲಿ ಆಡಲಾದ 45 ಪಂದ್ಯಗಳಲ್ಲಿ ಒಟ್ಟು 405 ಸಿಕ್ಸರ್‌ಗಳನ್ನು ಬಾರಿಸಲಾಗಿತ್ತು.
ಅಂದರೆ ಕಳೆದ 7 ಆವೃತ್ತಿಯ ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದುವರೆಗೆ ಒಟ್ಟು 1951 ಸಿಕ್ಸರ್‌ಗಳು ದಾಖಲಾಗಿವೆ. ಈ ಬಾರಿ 49 ಸಿಕ್ಸ್ಗಳೊಂದಿಗೆ 2 ಸಾವಿರ ಸಿಕ್ಸ್ಗಳ ಮೈಲುಗಲ್ಲನ್ನು ದಾಟಲಿದೆ.