AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ashes 2023: ಆ್ಯಶಸ್ ಟೆಸ್ಟ್ ಸರಣಿ: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಗೆ ರೋಚಕ ಜಯ

Ashes 2023: ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಜೋ ರೂಟ್ (118) ಅಜೇಯ ಶತಕ ಬಾರಿಸಿ ಮಿಂಚಿದರು.

TV9 Web
| Edited By: |

Updated on:Jun 21, 2023 | 12:20 AM

Share
Ashes 2023: ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಆ್ಯಶಸ್ ಸರಣಿಯ ಮೊದಲ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ರೋಚಕ ಜಯ ಸಾಧಿಸಿದೆ. ಇಂಗ್ಲೆಂಡ್ ತಂಡ ದ್ವಿತೀಯ ಇನಿಂಗ್ಸ್​ನಲ್ಲಿ ನೀಡಿದ 281 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು 8 ವಿಕೆಟ್​ ನಷ್ಟಕ್ಕೆ ಗುರಿ ಮುಟ್ಟಿತು. ಈ ಮೂಲಕ 2 ವಿಕೆಟ್​ಗಳ ರೋಚಕ ಜಯವನ್ನು ತನ್ನದಾಗಿಸಿಕೊಂಡಿದೆ.

1 / 13
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಜೋ ರೂಟ್ (118) ಅಜೇಯ ಶತಕ ಬಾರಿಸಿ ಮಿಂಚಿದರು. ಅಲ್ಲದೆ ಮೊದಲ ದಿನದಾಟದಲ್ಲೇ 8 ವಿಕೆಟ್ 393 ರನ್​ ಪೇರಿಸಿ ಇಂಗ್ಲೆಂಡ್ ಡಿಕ್ಲೇರ್ ಘೋಷಿಸಿ ಅಚ್ಚರಿ ಮೂಡಿಸಿತು.

2 / 13
ಇದರ ಬೆನ್ನಲ್ಲೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಪರ ಮೊದಲ ಇನಿಂಗ್ಸ್​ನಲ್ಲಿ ಮಿಂಚಿದ್ದು ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ. ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ್ದ ಖ್ವಾಜಾ 141 ರನ್ ಬಾರಿಸಿದರು. ಪರಿಣಾಮ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್​ನಲ್ಲಿ 386 ರನ್​ಗಳಿಸಲು ಸಾಧ್ಯವಾಯಿತು.

3 / 13
ಇತ್ತ 7 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು ಪ್ಯಾಟ್​ ಕಮಿನ್ಸ್ ಹಾಗೂ ನಾಥನ್ ಲಿಯಾನ್ ದಾಳಿಗೆ ತತ್ತರಿಸಿತು. ಮೊದಲ ಇನಿಂಗ್ಸ್​​ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 273 ರನ್​ಗಳಿಗೆ ಆಲೌಟ್ ಆಯಿತು. ಆಸೀಸ್ ಪರ ಲಿಯಾನ್ ಹಾಗೂ ಕಮಿನ್ಸ್ ತಲಾ 4 ವಿಕೆಟ್ ಕಬಳಿಸಿ ಮಿಂಚಿದರು.

4 / 13
ಮೊದಲ ಇನಿಂಗ್ಸ್​ನಲ್ಲಿನ 7 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ನಲ್ಲಿ 281 ರನ್​ಗಳ ಗುರಿ ಪಡೆದ ಆಸ್ಟ್ರೇಲಿಯಾ ತಂಡಕ್ಕೆ ಡೇವಿಡ್ ವಾರ್ನರ್ ಹಾಗೂ ಉಸ್ಮಾನ್ ಖ್ವಾಜಾ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 61 ರನ್​ಗಳ ಜೊತೆಯಾಟವಾಡಿ ವಾರ್ನರ್ (36) ಔಟಾದರು. ಇದರ ಬೆನ್ನಲ್ಲೇ ಮಾರ್ನಸ್ ಲಾಬುಶೇನ್ (13) ಹಾಗೂ ಸ್ಟೀವ್ ಸ್ಮಿತ್ (6) ವಿಕೆಟ್ ಉರುಳಿಸಿ ಇಂಗ್ಲೆಂಡ್ ಬೌಲರ್​ಗಳು ಮೇಲುಗೈ ಸಾಧಿಸಿದರು.

5 / 13
ಇದಾಗ್ಯೂ ನಾಲ್ಕನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡವು 3 ವಿಕೆಟ್ ನಷ್ಟಕ್ಕೆ 107 ರನ್​ ಕಲೆಹಾಕಿತು. ಅಲ್ಲದೆ ಕೊನೆಯ ದಿನದಾಟದಲ್ಲಿ ಆಸ್ಟ್ರೇಲಿಯಾಗೆ ಗೆಲ್ಲಲು 174 ರನ್​ಗಳ ಅವಶ್ಯಕತೆಯಿತ್ತು. ಅತ್ತ ಇಂಗ್ಲೆಂಡ್​ಗೆ ಜಯ ಸಾಧಿಸಲು 7 ವಿಕೆಟ್​ಗಳ ಅಗತ್ಯವಿತ್ತು.

6 / 13
ಆದರೆ ಬೆಂಬಿಡದೆ ಸುರಿದ ಮಳೆಯಿಂದಾಗಿ ಕೊನೆಯ ದಿನದಾಟದ ಮೊದಲ ಸೆಷನ್​ನಲ್ಲಿ ಆಟ ನಡೆದಿರಲಿಲ್ಲ. 2ನೇ ಸೆಷನ್​ನೊಂದಿಗೆ ಶುರುವಾದ ಪಂದ್ಯದ ಆರಂಭದಲ್ಲೇ ಇಂಗ್ಲೆಂಡ್ ಬೌಲರ್​ಗಳು ಮೇಲುಗೈ ಸಾಧಿಸಿದರು. ಆರಂಭದಲ್ಲೇ ಸ್ಕಾಟ್ ಬೋಲ್ಯಾಂಡ್ (20) ವಿಕೆಟ್ ಉರುಳಿಸಿ ಸ್ಟುವರ್ಟ್ ಬ್ರಾಡ್ ಯಶಸ್ಸು ತಂದುಕೊಟ್ಟರು.

7 / 13
ಇದರ ಬೆನ್ನಲ್ಲೇ ಮೊಯೀನ್ ಅಲಿ ಹೆಣೆದ ಬಲೆಗೆ ಟ್ರಾವಿಸ್ ಹೆಡ್ (16) ಕೂಡ ಬಿದ್ದರು. ಮತ್ತೊಂದೆಡೆ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ್ದ ಉಸ್ಮಾನ್ ಖ್ವಾಜಾ ಅರ್ಧಶತಕ ಬಾರಿಸಿದರು. ಆದರೆ ಮೂರನೇ ಸೆಷನ್​ ಆರಂಭದಲ್ಲೇ ಕ್ಯಾಮರೋನ್ ಗ್ರೀನ್ (28) ರಾಬಿನ್ಸನ್ ಎಸೆತದಲ್ಲಿ ಬೌಲ್ಡ್ ಆದರು.

8 / 13
ಈ ಹಂತದಲ್ಲಿ ಮತ್ತೆ ದಾಳಿಗಿಳಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ 197 ಎಸೆತಗಳಲ್ಲಿ 65 ರನ್ ಬಾರಿಸಿದ್ದ ಉಸ್ಮಾನ್ ಖ್ವಾಜಾ ಅವರ ಅಮೂಲ್ಯ ವಿಕೆಟ್ ಉರುಳಿಸಿದರು. ಅಂತಿಮ 17 ಓವರ್​ಗಳಲ್ಲಿ ಆಸ್ಟ್ರೇಲಿಯಾಗೆ ಗೆಲ್ಲಲು 54 ರನ್​ಗಳ ಅವಶ್ಯಕತೆಯಿತ್ತು.

9 / 13
ಈ ವೇಳೆ ಸ್ಟೋಕ್ಸ್ ಜೋ ರೂಟ್ ಕೈಗೆ ಚೆಂಡಿತ್ತರು. ಅತ್ಯುತ್ತಮ ಸ್ಪಿನ್ ಮೋಡಿ ಮಾಡಿದ ರೂಟ್ ಅಲೆಕ್ಸ್ ಕ್ಯಾರಿಯ (20) ಅದ್ಭುತ ಕ್ಯಾಚ್ ಹಿಡಿದರು. ಈ ಹಂತದಲ್ಲಿ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಪ್ಯಾಟ್ ಕಮಿನ್ಸ್ ಒಂದೇ ಓವರ್​ನಲ್ಲಿ 14 ರನ್ ಚಚ್ಚಿದರು.

10 / 13
ಕೊನೆಯ 10 ಓವರ್​ಗಳಲ್ಲಿ ಆಸ್ಟ್ರೇಲಿಯಾಗೆ ಗೆಲ್ಲಲು 16 ರನ್​ಗಳ ಅವಶ್ಯಕತೆಯಿತ್ತು. ಇತ್ತ ಇಂಗ್ಲೆಂಡ್​ಗೆ ಗೆಲ್ಲಲು 2 ವಿಕೆಟ್​ಗಳ ಅಗತ್ಯವಿತ್ತು. ಈ ಹಂತದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ್ದ ಪ್ಯಾಟ್ ಕಮಿನ್ಸ್ ಹಾಗೂ ನಾಥನ್ ಲಿಯಾನ್ ಅರ್ಧಶತಕದ ಜೊತೆಯಾಟವಾಡಿದರು.

11 / 13
ಅಂತಿಮವಾಗಿ ಪ್ಯಾಟ್ ಕಮಿನ್ಸ್ (44) ಹಾಗೂ ನಾಥನ್ ಲಿಯಾನ್ (16) ಜೊತೆಗೂಡಿ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಆಸ್ಟ್ರೇಲಿಯಾ ತಂಡವು 2 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

12 / 13
ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 141 ರನ್ ಬಾರಿಸಿದ್ದ ಉಸ್ಮಾನ್ ಖ್ವಾಜಾ 2ನೇ ಇನಿಂಗ್ಸ್​ನಲ್ಲಿ 65 ರನ್​ಗಳಿಸಿದರು. ಈ ಮೂಲಕ ಒಟ್ಟು 206 ರನ್​ ಪೇರಿಸಿದ ಖ್ವಾಜಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು.

13 / 13

Published On - 11:54 pm, Tue, 20 June 23

Web contact
Web contact

TV9 Kannada

Read More
Follow Us
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?

ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು

ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ

ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ

ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!

ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ

ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ

ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ

ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!

ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ