ಏಷ್ಯನ್ ಗೇಮ್ಸ್​ಗೆ ಟೀಂ ಇಂಡಿಯಾದಲ್ಲಿ 1 ಬದಲಾವಣೆ

Updated on: Sep 17, 2026 | 5:16 PM

2026 ರ ಏಷ್ಯನ್ ಗೇಮ್ಸ್ ಭಾರತ ಕ್ರಿಕೆಟ್ ತಂಡದಲ್ಲಿ ಮಹತ್ವದ ಬದಲಾವಣೆಯಾಗಿದೆ. ಗಾಯದ ಕಾರಣ ಸ್ಪಿನ್ನರ್ ವರುಣ್ ಚಕ್ರವರ್ತಿ ಹೊರಗುಳಿದಿದ್ದು, ಅವರ ಬದಲಿಗೆ ವಿಪ್ರಜ್ ನಿಗಮ್‌ಗೆ ಅವಕಾಶ ನೀಡಲಾಗಿದೆ. ಅಫ್ಘಾನಿಸ್ತಾನ ಸರಣಿಯಲ್ಲಿ ಗಾಯಗೊಂಡ ವರುಣ್, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ರಿಹ್ಯಾಬ್ ನಂತರವೂ ಫಿಟ್ ಆಗಿರಲಿಲ್ಲ. ಉತ್ತಮ ಪ್ರದರ್ಶನ ನೀಡುತ್ತಿರುವ ವಿಪ್ರಜ್‌ಗೆ ಈ ಬಹುದೊಡ್ಡ ಅವಕಾಶ ಲಭಿಸಿದೆ.

1 / 6
2026 ರ ಏಷ್ಯನ್ ಕ್ರೀಡಾಕೂಟಕ್ಕೆ ಭಾರತದ ಪುರುಷರ ಕ್ರಿಕೆಟ್ ತಂಡದಲ್ಲಿ ಪ್ರಮುಖ ಬದಲಾವಣೆಯಾಗಿದೆ. ಸ್ಪಿನ್ನರ್ ವರುಣ್ ಚಕ್ರವರ್ತಿ ಅವರನ್ನು ಏಷ್ಯನ್ ಕ್ರೀಡಾಕೂಟದಿಂದ ಹೊರಗಿಡಲಾಗಿದ್ದು, ಅವರ ಬದಲಿಗೆ ವಿಪ್ರಜ್ ನಿಗಮ್​ಗೆ ಅವಕಾಶ ನೀಡಲಾಗಿದೆ. ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯ ಸಮಯದಲ್ಲಿ ಗಾಯಕ್ಕೆ ತುತ್ತಾಗಿದ್ದ ವರುಣ್ ಇದೀಗ ಏಷ್ಯನ್ ಕ್ರೀಡಾಕೂಟದಿಂದಲೂ ಹೊರಗುಳಿದಿದ್ದಾರೆ(PC-PTI).

2026 ರ ಏಷ್ಯನ್ ಕ್ರೀಡಾಕೂಟಕ್ಕೆ ಭಾರತದ ಪುರುಷರ ಕ್ರಿಕೆಟ್ ತಂಡದಲ್ಲಿ ಪ್ರಮುಖ ಬದಲಾವಣೆಯಾಗಿದೆ. ಸ್ಪಿನ್ನರ್ ವರುಣ್ ಚಕ್ರವರ್ತಿ ಅವರನ್ನು ಏಷ್ಯನ್ ಕ್ರೀಡಾಕೂಟದಿಂದ ಹೊರಗಿಡಲಾಗಿದ್ದು, ಅವರ ಬದಲಿಗೆ ವಿಪ್ರಜ್ ನಿಗಮ್​ಗೆ ಅವಕಾಶ ನೀಡಲಾಗಿದೆ. ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯ ಸಮಯದಲ್ಲಿ ಗಾಯಕ್ಕೆ ತುತ್ತಾಗಿದ್ದ ವರುಣ್ ಇದೀಗ ಏಷ್ಯನ್ ಕ್ರೀಡಾಕೂಟದಿಂದಲೂ ಹೊರಗುಳಿದಿದ್ದಾರೆ(PC-PTI).

2 / 6

ಈ ಮೊದಲು ಇಂಗ್ಲೆಂಡ್ ಪ್ರವಾಸದ ವೇಳೆ ಗಾಯಗೊಂಡಿದ್ದ ವರುಣ್ ಚಕ್ರವರ್ತಿ , ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದರು. ಹೀಗಾಗಿ ವರುಣ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಸುಮಾರು ಎರಡು ತಿಂಗಳುಗಳ ಕಾಲ ರಿಹ್ಯಾಬ್​ಗೆ ಒಳಗಾಗಿದ್ದರು. ಸಂಪೂರ್ಣವಾಗಿ ಚೇತರಿಸಿಕೊಂಡು ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆದ ಬಳಿಕ ವರುಣ್ ಅವರನ್ನು ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿತ್ತು(PC-PTI).

3 / 6

ಆದರೆ ಸರಣಿಯ ಮೊದಲ ಪಂದ್ಯದಲ್ಲಿ ನಾಲ್ಕು ಓವರ್​ಗಳನ್ನು ಬೌಲ್ ಮಾಡಿದ್ದ ವರುಣ್ ಚಕ್ರವರ್ತಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಹೀಗಾಗಿ ಅವರನ್ನು ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯ ಉಳಿದೆರಡು ಪಂದ್ಯಗಳಿಂದ ಕೈಬಿಡಲಾಗಿತ್ತು. ಅದಾದ ಬಳಿಕ ವರುಣ್ ಅವರನ್ನು ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಪರೀಕ್ಷಿಸಲಾಗಿದ್ದು, ಗಾಯ ಗಂಭೀರವಾಗಿರುವ ಕಾರಣ ಅವರನ್ನು ಏಷ್ಯನ್ ಗೇಮ್ಸ್​ನಿಂದ ಹೊರಗಿಡಲಾಗಿದೆ(PC-PTI).

4 / 6

ಇದೀಗ ವರುಣ್ ಬದಲಿಗೆ ತಂಡಕ್ಕೆ ಸೇರಿಕೊಂಡಿರುವ ವಿಪ್ರಜ್ ನಿಗಮ್ ಕೆಲ ಸಮಯದಿಂದ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಇತ್ತೀಚೆಗೆ ಭಾರತ ಎ ತಂಡಕ್ಕೆ ಆಯ್ಕೆಯಾಗಿದ್ದ ವಿಪ್ರಜ್ ಶ್ರೀಲಂಕಾದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಹಾಗೆಯೇ ಇತ್ತೀಚೆಗೆ ನಡೆದ ಯುಪಿ ಟಿ20 ಲೀಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು(PC-PTI).

5 / 6

ಐಪಿಎಲ್‌ನಲ್ಲಿ ತಮ್ಮ ಬೌಲಿಂಗ್ ಮತ್ತು ಬ್ಯಾಟಿಂಗ್‌ ಎರಡಲ್ಲೂ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಪ್ರಜ್ ಯಶಸ್ವಿಯಾಗಿದ್ದರು. ಪರಿಣಾಮವಾಗಿ, ವರುಣ್ ಚಕ್ರವರ್ತಿ ಬದಲಿಗೆ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ತಂಡದಲ್ಲಿ ಸ್ಥಾನ ಪಡೆಯಲು ಕೃನಾಲ್ ಪಾಂಡ್ಯ ಅವರ ಹೆಸರನ್ನು ಸಹ ಪರಿಗಣಿಸಲಾಗಿತ್ತು. ಆದರೆ ಕೃನಾಲ್​​ಗೆ ಮತ್ತೊಮ್ಮೆ ನಿರಾಶೆ ಎದುರಾಗಿದೆ(PC-PTI).

6 / 6

ಏಷ್ಯನ್ ಕ್ರೀಡಾಕೂಟಕ್ಕೆ ಭಾರತ ತಂಡ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವಿಪ್ರಜ್ ನಿಗಮ್, ರವಿ ಬಿಷ್ಣೋಯ್, ಜಸ್ಪ್ರೀತ್ ಬುಮ್ರಾ, ಯಶ್ ಠಾಕೂರ್, ಅರ್ಷದೀಪ್ ಸಿಂಗ್ ಮತ್ತು ವೈಭವ್ ಸೂರ್ಯವಂಶಿ(PC-PTI).

Loading...
Unable to load recommendations.
Follow Us