ಪಾಕ್ ತಂಡದ ಬಂದ ಪುಟ್ಟ ಹೋದ ಪುಟ್ಟ: ಇದುವರೆಗೆ ಕಲೆಹಾಕಿದ್ದು ಕೇವಲ 19 ರನ್..!
Azam Khan: ಇಂಗ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಟಿ20 ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಆಝಂ ಖಾನ್ ಚೊಚ್ಚಲ ಪಂದ್ಯದಲ್ಲಿ ಕೇವಲ 5 ರನ್ಗಳಿಸಿ ಔಟಾಗಿದ್ದರು. ಇನ್ನು 2ನೇ ಪಂದ್ಯದಲ್ಲಿ ಕಲೆಹಾಕಿದ್ದು ಕೇವಲ 1 ರನ್ ಮಾತ್ರ.
Updated on: Jan 16, 2024 | 11:23 AM

ಪಾಕಿಸ್ತಾನ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಆಝಂ ಖಾನ್ (Azam Khan) ಆಯ್ಕೆ ಬಗ್ಗೆ ಇದೀಗ ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಅವರ ಕಳಪೆ ಪ್ರದರ್ಶನ. ಅಂದರೆ ಕಳೆದ 7 ಟಿ20 ಪಂದ್ಯಗಳಿಂದ ಆಝಂ ಖಾನ್ ಕಲೆಹಾಕಿದ್ದು ಕೇವಲ 19 ರನ್ಗಳು ಎಂದರೆ ನಂಬಲೇಬೇಕು.

ಇಂಗ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಟಿ20 ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಆಝಂ ಖಾನ್ ಚೊಚ್ಚಲ ಪಂದ್ಯದಲ್ಲಿ ಕೇವಲ 5 ರನ್ಗಳಿಸಿ ಔಟಾಗಿದ್ದರು. ಇನ್ನು 2ನೇ ಪಂದ್ಯದಲ್ಲಿ ಕಲೆಹಾಕಿದ್ದು ಕೇವಲ 1 ರನ್ ಮಾತ್ರ.

ಇದಾದ ಬಳಿಕ ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಇನ್ನು ಅಫ್ಘಾನ್ ವಿರುದ್ಧದ 2ನೇ ಪಂದ್ಯದಲ್ಲಿ ಗಳಿಸಿದ್ದು ಕೇವಲ 1 ರನ್. ಇದೀಗ ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಝಂ ಖಾನ್ ಕಣಕ್ಕಿಳಿಯುತ್ತಿದ್ದಾರೆ.

ನ್ಯೂಝಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 10 ರನ್ಗಳಿಸಿದ್ದ ಆಝಂ 2ನೇ ಪಂದ್ಯದಲ್ಲಿ 2 ರನ್ ಬಾರಿಸಲಷ್ಟೇ ಶಕ್ತರಾಗಿದ್ದರು. ಅಂದರೆ 7 ಪಂದ್ಯಗಳಿಂದ ಕೇವಲ 3.8 ರ ಸರಾಸರಿಯಲ್ಲಿ ರನ್ಗಳಿಸಿದ್ದಾರೆ. ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಎಂದರೆ ಇದುವರೆಗೆ ಆಝಂ ಬ್ಯಾಟ್ನಿಂದ ಮೂಡಿಬಂದಿರುವುದು ಕೇವಲ 2 ಫೋರ್ಗಳು ಮಾತ್ರ.

ಇದಾಗ್ಯೂ ಆಝಂ ಖಾನ್ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ನೀಡುತ್ತಿರುವ ಬಗ್ಗೆ ಇದೀಗ ಪಾಕ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಂದಹಾಗೆ ಆಝಂ ಖಾನ್ ಪಾಕಿಸ್ತಾನ್ ತಂಡದ ಮಾಜಿ ವಿಕೆಟ್ ಕೀಪರ್ ಮೊಯೀನ್ ಖಾನ್ ಅವರ ಪುತ್ರ. ಹೀಗಾಗಿಯೇ ಪಾಕಿಸ್ತಾನದ ಇತಿಹಾಸದಲ್ಲಿ ಏಳು ಪಂದ್ಯಗಳಿಂದ ಎಷ್ಟು ಆಟಗಾರರು 19 ರನ್ ಗಳಿಸಿದ್ದಾರೆ? ಎಂದು ಮಾಜಿ ಆಟಗಾರ ಸಲ್ಮಾನ್ ಭಟ್ ಆಕ್ರೋಶ ಹೊರಹಾಕಿದ್ದಾರೆ.

TV9 Kannada
Read More
