AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಒಂದು ರನ್​ನಿಂದ ಸಾರ್ವಕಾಲಿಕ ದಾಖಲೆ ತಪ್ಪಿಸಿಕೊಂಡ ಬಾಬರ್ ಆಝಂ

Babar Azam Record: ಪಾಕಿಸ್ತಾನ್ ಸೂಪರ್ ಲೀಗ್ 2026ರ ಫೈನಲ್ ಪಂದ್ಯವು ಒಂದು ಅಪರೂಪದ ಮತ್ತು ನಾಟಕೀಯ ಕ್ಷಣಕ್ಕೆ ಸಾಕ್ಷಿಯಾಯಿತು. ಪೆಶಾವರ್ ಝಲ್ಮಿ ತಂಡದ ನಾಯಕ ಬಾಬರ್ ಆಝಂ, ಪಿಎಸ್‌ಎಲ್ ಇತಿಹಾಸದ ಸಾರ್ವಕಾಲಿಕ ದಾಖಲೆ ಬರೆಯುವ ಅವಕಾಶವನ್ನು ಕೇವಲ ಒಂದು ರನ್​​ನಿಂದ ಕೈಚೆಲ್ಲಿಕೊಂಡಿದ್ದಾರೆ.

ಝಾಹಿರ್ ಯೂಸುಫ್
|

Updated on: May 04, 2026 | 9:56 AM

Share
PSL 2026: ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಹೊಸ ಇತಿಹಾಸ ಬರೆಯುವ ಸುವರ್ಣ ಅವಕಾಶವನ್ನು ಬಾಬರ್ ಆಝಂ (Babar Azam) ಕೂದಲೆಳೆ ಅಂತರದಲ್ಲಿ ಮಿಸ್ ಮಾಡಿಕೊಂಡಿದ್ದಾರೆ. ಅದು ಸಹ ಅತಿ ಹೆಚ್ಚು ರನ್ ಗಳಿಸಿದರೂ ಕೂಡ ಎಂಬುದು ವಿಶೇಷ. 

1 / 5
ಈ ಬಾರಿಯ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ 11 ಇನಿಂಗ್ಸ್ ಆಡಿದ್ದ ಬಾಬರ್ ಆಝಂ 2 ಭರ್ಜರಿ ಶತಕ ಹಾಗೂ 3 ಅರ್ಧಶತಕಗಳನ್ನು ಬಾರಿಸಿದ್ದರು. ಈ ಮೂಲಕ ಒಟ್ಟು 588 ರನ್​ ಕಲೆಹಾಕಿದ್ದರು. ಇದಕ್ಕೆ ಒಂದು ರನ್ ಸೇರ್ಪಡೆಯಾಗಿದ್ದರೆ ಹೊಸ ಇತಿಹಾಸ ನಿರ್ಮಾಣವಾಗುತ್ತಿತ್ತು.

2 / 5
ಅದರಂತೆ ಫೈನಲ್ ಪಂದ್ಯದಲ್ಲಿ ಬಾಬರ್ ಆಝಂ ಒಂದು ರನ್​ಗಳಿಸಿದ್ದರೆ ಪಾಕಿಸ್ತಾನ್ ಸೂಪರ್ ಲೀಗ್​​ನಲ್ಲಿ ಸೀಸನ್​ವೊಂದರಲ್ಲಿ ಅತೀ ಹೆಚ್ಚು ಪೇರಿಸಿದ ಬ್ಯಾಟರ್ ಎನಿಸಿಕೊಳ್ಳುತ್ತಿತ್ತು. ಆದರೆ ಅಂತಿಮ ಪಂದ್ಯದಲ್ಲಿ ಬಾಬರ್ ಶೂನ್ಯಕ್ಕೆ ಔಟಾಗಿದ್ದಾರೆ. ಈ ಮೂಲಕ ಕೇವಲ 1 ರನ್​ಗಳಿಂದ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಹೊಸ ಇತಿಹಾಸ ಬರೆಯುವ ಅವಕಾಶವನ್ನು ಕೈಚೆಲ್ಲಿಕೊಂಡಿದ್ದಾರೆ.

3 / 5
2022ರ ಪಾಕಿಸ್ತಾನ್ ಸೂಪರ್ ಲೀಗ್​ ಆವೃತ್ತಿಯಲ್ಲಿ ಫಖರ್ ಝಮಾನ್ ಅವರು 13 ಇನ್ನಿಂಗ್ಸ್‌ಗಳಲ್ಲಿ 588 ರನ್ ಗಳಿಸುವ ಮೂಲಕ ಪಿಎಸ್​ಎಲ್​ ಇತಿಹಾಸದಲ್ಲೇ ಸೀಸನ್​ವೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನು ಬಾಬರ್ ಸರಿಗಟ್ಟಿದ್ದರು.

4 / 5
ಇದಾಗ್ಯೂ ಈ ಬಾರಿ ಬಾರಿಸಿದ 588 ರನ್​ಗಳೊಂದಿಗೆ ಬಾಬರ್ ಆಝಂ ಟಿ20 ಕ್ರಿಕೆಟ್​ನಲ್ಲಿ 12 ಸಾವಿರ ರನ್​ಗಳನ್ನು ಪೂರೈಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ಇನಿಂಗ್ಸ್​ಗಳ ಮೂಲಕ 12000 ರನ್​ಗಳಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. ಗೇಲ್ 343 ಇನಿಂಗ್ಸ್​ಗಳ ಮೂಲಕ 12 ಸಾವಿರ ರನ್​ ಪೂರೈಸಿದ್ದರೆ, ಬಾಬರ್ ಆಝಂ 338 ಇನಿಂಗ್ಸ್​ಗಳ ಮೂಲಕ ಈ ಸಾಧನೆ ಮಾಡಿದ್ದಾರೆ.

5 / 5
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
ಕಾಜಿರಂಗದಲ್ಲಿ ಕಂಡಿತು ಹಾಲಿನ ಬಣ್ಣದ ಜಿಂಕೆ; ವಿಡಿಯೋ ವೈರಲ್

ಡಿಕೆಶಿ ಕರೆದೊಯ್ಯಲು ಬಂದ ಹೊಸ ಬೆಂಜ್ ಕಾರು ಹೇಗಿದೆ ನೋಡಿ

ವೈಭವ್ ಸಿಕ್ಸರ್​ಗಳ ಸುನಾಮಿಗೆ ಗೇಲ್ ದಾಖಲೆ ಧ್ವಂಸ

‘ಸಿಟಿ ಲೈಟ್ಸ್’ ಸಿನಿಮಾ: ದುನಿಯಾ ವಿಜಯ್ ನಿರ್ದೇಶನ ಮಾಡುವ ಸ್ಟೈಲ್ ನೋಡಿ..

ಸಿದ್ದರಾಮಯ್ಯ ಮನೆ ಮುಂದೆ ಭುಗಿಲೆದ್ದ ಆಕ್ರೋಶ: ಅಭಿಮಾನಿಗಳು ಪೊಲಿಸ್ ವಶಕ್ಕೆ

ಹಂಪಿಯಿಂದ ಕೋಲಾರಕ್ಕೆ ಶಿಫ್ಟ್: ಸ್ಥಳ ಬದಲಾಗಿದ್ದಕ್ಕೆ ವಿಚಲಿತಗೊಂಡ ಆನೆ

ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ತಲೆ ಬೋಳಿಸಿ, ಅರೆಬೆತ್ತಲೆ ಮೆರವಣಿಗೆ!

ಸಿಎಂ ರಾಜೀನಾಮೆ ಸುದ್ದಿ ನಡುವೆ ಕುತೂಹಲ ಮೂಡಿಸಿದ ಮುಸ್ಲಿಂ ನಾಯಕರ ಸಭೆ

ನಾಳೆ CM ರಾಜೀನಾಮೆ ಕೊಡ್ತೀನಿ ಎಂದಿದ್ದಾರೆ : ಬಹಿರಂಗ ಪಡಿಸಿದ ಕೈ ಶಾಸಕ

ಕೇರಳದಲ್ಲಿ ಪಿಣರಾಯಿ ವಿಜಯನ್ ಬೆಂಬಲಿಗರಿಂದ ಇಡಿ ತಂಡದ ಮೇಲೆ ದಾಳಿ