AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BCCI Men’s Contracts: ಟೀಮ್ ಇಂಡಿಯಾಗೆ 451 ಕೋಟಿ ನೀಡಿದ ಬಿಸಿಸಿಐ: ಅತೀ ಹೆಚ್ಚು ಮೊತ್ತ ಪಡೆದ ಆಟಗಾರ ಯಾರು ಗೊತ್ತಾ?

BCCI Men's Contracts: ಭಾರತೀಯ ಕ್ರಿಕೆಟ್ ಮಂಡಳಿ ಕಳೆದ 5 ವರ್ಷಗಳಿಂದ ಒಪ್ಪಂದ ಪ್ರಕಾರ ಟೀಮ್ ಇಂಡಿಯಾ ಆಟಗಾರರಿಗೆ ಕೋಟಿ ಮೊತ್ತವನ್ನೇ ನೀಡುತ್ತಾ ಬಂದಿದೆ.

TV9 Web
| Edited By: |

Updated on: Mar 27, 2023 | 6:30 PM

Share
ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಆಟಗಾರರ ಹೊಸ ಗುತ್ತಿಗೆ ಒಪ್ಪಂದ ಪಟ್ಟಿಯನ್ನು ಪ್ರಕಟಿಸಿದೆ. 2022-23ರ ಕೇಂದ್ರೀಯ ಗುತ್ತಿಗೆ ಒಪ್ಪಂದ ಪಟ್ಟಿಯಲ್ಲಿ ಒಟ್ಟು 26 ಆಟಗಾರರು ಸ್ಥಾನ ಪಡೆದಿದ್ದಾರೆ. ಇವರಲ್ಲಿ ನಾಲ್ವರು ಆಟಗಾರರು ಉನ್ನತ ದರ್ಜೆಯಲ್ಲಿ ಕಾಣಿಸಿಕೊಂಡಿದ್ದಾರೆ.

1 / 8
ಈ ಒಪ್ಪಂದದಂತೆ A+ ಗ್ರೇಡ್​ನಲ್ಲಿ ಕಾಣಿಸಿಗೊಂಡಿರುವ ಆಟಗಾರರು ವಾರ್ಷಿಕವಾಗಿ ಬರೋಬ್ಬರಿ 7 ಕೋಟಿ ಪಡೆಯಲಿದ್ದಾರೆ. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್​ಪ್ರೀತ್ ಬುಮ್ರಾ ಹಾಗೂ ರವೀಂದ್ರ ಜಡೇಜಾ ಕಾಣಿಸಿಕೊಂಡಿದ್ದಾರೆ. ಇನ್ನು ಕಳೆದ ವರ್ಷ A+ ಗ್ರೇಡ್​ನಲ್ಲಿದ್ದ ಕೆಎಲ್ ರಾಹುಲ್ ಅವರನ್ನು ಈ ಪಟ್ಟಿಯಿಂದ ಕೈ ಬಿಡಲಾಗಿದ್ದು, ಜಡೇಜಾ ಅವರನ್ನು ಆಯ್ಕೆ ಮಾಡಲಾಗಿದೆ.

2 / 8
ಇನ್ನು A ಗ್ರೇಡ್​ನಲ್ಲಿ ಒಟ್ಟು 5 ಆಟಗಾರರು ಸ್ಥಾನ ಪಡೆದಿದ್ದು,  ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ರಿಷಭ್ ಪಂತ್, ಅಕ್ಷರ್ ಪಟೇಲ್ ವಾರ್ಷಿಕವಾಗಿ ತಲಾ 5 ಕೋಟಿ ರೂ. ಪಡೆಯಲಿದ್ದಾರೆ.

3 / 8
ಹಾಗೆಯೇ B ಗ್ರೇಡ್​ನಲ್ಲಿ ಚೇತೇಶ್ವರ್ ಪೂಜಾರ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್, ಸೂರ್ಯಕುಮಾರ್ ಯಾದವ್, ಶುಭ್​ಮನ್ ಗಿಲ್​ಗೆ ವರ್ಷಕ್ಕೆ ತಲಾ 3 ಕೋಟಿ ರೂ. ಸಿಗಲಿದೆ.

4 / 8
ಇನ್ನು C ಗ್ರೇಡ್​ನಲ್ಲಿ ಉಮೇಶ್ ಯಾದವ್, ಶಿಖರ್ ಧವನ್, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್, ದೀಪಕ್ ಹೂಡಾ, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆಎಸ್ ಭರತ್ ಕಾಣಿಸಿಕೊಂಡಿದ್ದು, ಇವರಿಗೆ ವಾರ್ಷಿಕವಾಗಿ ತಲಾ 1 ಕೋಟಿ ರೂ. ನೀಡಲಿದೆ.

5 / 8
ಭಾರತೀಯ ಕ್ರಿಕೆಟ್ ಮಂಡಳಿ ಕಳೆದ 5 ವರ್ಷಗಳಿಂದ ಆಟಗಾರರಿಗೆ ಕೋಟಿ ಮೊತ್ತವನ್ನೇ ನೀಡುತ್ತಾ ಬಂದಿದೆ. ಅದರಂತೆ ಕಳೆದ ಐದು ವರ್ಷಗಳಲ್ಲಿ ಬಿಸಿಸಿಐ ಆಟಗಾರರಿಗೆ ಒಟ್ಟು 451 ಕೋಟಿ ರೂ. ನೀಡಿದೆ.

6 / 8
2022-23ರಲ್ಲಿ 26 ಆಟಗಾರರಿಗೆ ಒಟ್ಟು 82 ಕೋಟಿ ರೂ. ನೀಡಿದ್ದರೆ,  2021-22ರಲ್ಲಿ 27 ಆಟಗಾರರಿಗೆ 79 ಕೋಟಿ ನೀಡಲಾಗಿತ್ತು. ಇನ್ನು 2020-21ರಲ್ಲಿ 28 ಆಟಗಾರರಿಗೆ 96 ಕೋಟಿ ರೂ. ಹಾಗೂ 2019-20ರಲ್ಲಿ 27 ಆಟಗಾರರಿಗೆ 99 ಕೋಟಿ ನೀಡಿತ್ತು. ಹಾಗೆಯೇ 2018-19ರಲ್ಲಿ 25 ಆಟಗಾರರಿಗೆ 95 ಕೋಟಿ ನೀಡಲಾಗಿದೆ. ಅಂದರೆ, 5 ವರ್ಷಗಳಲ್ಲಿ ಬಿಸಿಸಿಐ ಆಟಗಾರರಿಗೆ ಸಂಭಾವನೆಯಾಗಿ ಒಟ್ಟು 451 ಕೋಟಿ ರೂ. ನೀಡಿದೆ.

7 / 8
ಈ ಅವಧಿಯಲ್ಲಿ ಅತೀ ಹೆಚ್ಚು ಮೊತ್ತ ಪಡೆದಿರುವುದು ಮೂವರು ಆಟಗಾರರು. ಅಂದರೆ ಕಳೆದ ಐದು ವರ್ಷಗಳಿಂದ A+ ಗ್ರೇಡ್​ನಲ್ಲಿ ಕಾಣಿಸಿಕೊಂಡಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ತಲಾ 35 ಕೋಟಿ ರೂ. ಪಡೆದಿದ್ದಾರೆ.

8 / 8
Follow Us
ಕಾಂಗ್ರೆಸ್​​ನಲ್ಲಿ ಸ್ಫೋಟಕ ಬೆಳವಣಿಗೆ: 30 ಹಿರಿಯ ಶಾಸಕರು ದಿಢೀರ್ ಸಭೆ

ನಟಿ ಚೈತ್ರಾ ಜೆ. ಆಚಾರ್ ಕಂಠದಲ್ಲಿ ಕೇಳಿ ‘ಕರಿಮಾಯಿ ತಾಯೆ’ ಹಾಡು

ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?

ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ

ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ

ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ

ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?

ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!

ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​

ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ