AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL ‘ತಿಂಗಳ’ ಬದಲಾವಣೆಗೆ ಭರ್ಜರಿ ಪ್ಲ್ಯಾನ್

Indian Premier League: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-21 ರಲ್ಲಿ ಮಹತ್ವದ ಬದಲಾವಣೆ ಮಾಡಲು ಬಿಸಿಸಿಐ ಪ್ಲ್ಯಾನ್ ರೂಪಿಸುತ್ತಿದೆ. ಈ ಪ್ಲ್ಯಾನಿಂಗ್​​ನೊಂದಿಗೆ ಐಪಿಎಲ್​​ನಲ್ಲಿ ಕೆಲ ಬದಲಾವಣೆಯಾಗಲಿದೆ. ಅದರಲ್ಲಿ ಮುಖ್ಯ ಬದಲಾವಣೆ ಎಂದರೆ ಟೂರ್ನಿಯ ವಿಂಡೋ. ಅಂದರೆ ಐಪಿಎಲ್ ನಡೆಸುವ ತಿಂಗಳು ಬದಲಾಗಲಿದೆ.

ಝಾಹಿರ್ ಯೂಸುಫ್
|

Updated on:Jun 11, 2026 | 7:24 AM

Share
ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮಹತ್ವದ ಬದಲಾವಣೆ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಗಂಭೀರ ಚಿಂತನೆ ನಡೆಸುತ್ತಿದೆ. ಈ ಬದಲಾವಣೆಯೊಂದಿಗೆ ಐಪಿಎಲ್ ಆರಂಭದ ತಿಂಗಳು ಕೂಡ ಬದಲಾಗಲಿದೆ. (PC: IPL)

1 / 6
ಸಾಮಾನ್ಯವಾಗಿ ಐಪಿಎಲ್​​ ಅನ್ನು ಮಾರ್ಚ್ ತಿಂಗಳಿಂದ ಆರಂಭಿಸಿ ಮೇ ತಿಂಗಳಲ್ಲಿ ಕೊನೆಗೊಳಿಸಲಾಗುತ್ತದೆ. ಆದರೆ ಮುಂಬರುವ ಟೂರ್ನಿಯನ್ನು ಸೆಪ್ಟೆಂಬರ್-ಅಕ್ಟೋಬರ್ ತಿಂಗಳ ಅವಧಿಗೆ ಸ್ಥಳಾಂತರಿಸಲು ಬಿಸಿಸಿಐ ಯೋಜನೆ ರೂಪಿಸುತ್ತಿದೆ. (PC: IPL)

2 / 6
ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್ ಅವರ ಪ್ರಕಾರ, ಈ ಮಹತ್ವದ ಬದಲಾವಣೆಗೆ ಪ್ರಮುಖ ಕಾರಣ, ಬೇಸಿಗೆಯ ಅತಿಯಾದ ಶಾಖ ಮತ್ತು ಆಟಗಾರರ ಆಯಾಸ. ಅಂದರೆ ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೇಸಿಗೆಯ ತಾಪಮಾನ ವಿಪರೀತವಾಗಿ ಹೆಚ್ಚಾಗುತ್ತಿದೆ. (PC: TIE)

3 / 6
ಬೇಸಿಗೆಯಲ್ಲಿ ಟೂರ್ನಿ ಆಡುವುದರಿಂದ ಆಟಗಾರರಲ್ಲಿ ತೀವ್ರ ಆಯಾಸ, ನಿರ್ಜಲೀಕರಣ ಮತ್ತು ಗಾಯದ ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಸ್ಟೇಡಿಯಂಗೆ ಬರುವ ಪ್ರೇಕ್ಷಕರಿಗೂ ಈ ಬಿಸಿಲು ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. (PC: IPL)

4 / 6
ಅತ್ತ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳು ಭಾರತದಲ್ಲಿ ದಸರಾ ಮತ್ತು ದೀಪಾವಳಿ ಹಬ್ಬಗಳ ಕಾಲ. ಈ ಸಮಯದಲ್ಲಿ ಮಾರುಕಟ್ಟೆಯಲ್ಲಿ ವ್ಯಾಪಾರ ಮತ್ತು ಜಾಹೀರಾತುಗಳ ಹರಿವು ಹೆಚ್ಚಿರುತ್ತದೆ. ಈ ಅವಧಿಯಲ್ಲಿ ಐಪಿಎಲ್ ನಡೆಸುವುದರಿಂದ ಬ್ರಾಂಡ್‌ಗಳು ಮತ್ತು ಬ್ರಾಡ್‌ಕಾಸ್ಟರ್‌ಗಳಿಗೆ (ಪ್ರಸಾರಕರು) ಭಾರಿ ಆರ್ಥಿಕ ಲಾಭ ಸಿಗಲಿದೆ. (PC: IPL)

5 / 6
ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್​ನ ವಿಂಡೋ ಬದಲಿಸಲು ಚಿಂತಿಸಲಾಗಿದೆ. ಇದಾಗ್ಯೂ ಐಪಿಎಲ್ 2027 ಮಾರ್ಚ್-ಮೇ ತಿಂಗಳಲ್ಲೇ ನಡೆಯಲಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಆದರೆ 2028ರ ಐಪಿಎಲ್ ಸೀಸನ್​ ಅನ್ನು ಸೆಪ್ಟೆಂಬರ್-ಅಕ್ಟೋಬರ್ ತಿಂಗಳ ಅವಧಿಗೆ ಸ್ಥಳಾಂತರಿಸುವುದು ಬಹುತೇಕ ಖಚಿತ ಎಂದೇ ಹೇಳಬಹುದು. (PC: IPL)

6 / 6

Published On - 7:22 am, Thu, 11 June 26

ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us