Test Records: ಟೆಸ್ಟ್ ಕ್ರಿಕೆಟ್ನಲ್ಲಿ ತಂದೆ-ಮಗನನ್ನು ಔಟ್ ಮಾಡಿದ 5 ಬೌಲರ್ಗಳು ಯಾರು ಗೊತ್ತೇ?
Test Records: ಟೆಸ್ಟ್ ಕ್ರಿಕೆಟ್ನಲ್ಲಿ ತಂದೆ ಹಾಗೂ ಮಗನನ್ನು ಔಟ್ ಮಾಡಿದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆ ಅಶ್ವಿನ್ ಪಾಲಾಗಿದೆ. ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ 5ನೇ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಇಂತಹದೊಂದು ದಾಖಲೆ ನಿರ್ಮಿಸಿದ ಬೌಲರ್ಗಳ ಪಟ್ಟಿ ಈ ಕೆಳಗಿನಂತಿದೆ...
Updated on: Jul 13, 2023 | 10:09 PM

ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಆತಿಥೇಯರ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ತೇಜ್ನರೈನ್ ವಿಕೆಟ್ ಕಬಳಿಸುವ ಮೂಲಕ ಅಶ್ವಿನ್ ವಿಶೇಷ ಸಾಧನೆ ಮಾಡಿದರು.

ಈ ಪಂದ್ಯದಲ್ಲಿ ಶಿವನರೈನ್ ಚಂದ್ರಪಾಲ್ ಅವರ ಪುತ್ರ ತೇಜ್ನರೈನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ ತಂದೆ ಹಾಗೂ ಮಗನನ್ನು ಔಟ್ ಮಾಡಿದ ಭಾರತದ ಮೊದಲ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ 2011 ರಲ್ಲಿ ಶಿವನರೈನ್ ಚಂದ್ರಪಾಲ್ ಔಟಾಗಿದ್ದರು.

ಇದೀಗ ಟೆಸ್ಟ್ ಕ್ರಿಕೆಟ್ನಲ್ಲಿ ತಂದೆ ಹಾಗೂ ಮಗನನ್ನು ಔಟ್ ಮಾಡಿದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆ ಅಶ್ವಿನ್ ಪಾಲಾಗಿದೆ. ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ 5ನೇ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಇಂತಹದೊಂದು ದಾಖಲೆ ನಿರ್ಮಿಸಿದ ಬೌಲರ್ಗಳ ಪಟ್ಟಿ ಈ ಕೆಳಗಿನಂತಿದೆ...

ಇಯಾನ್ ಬೋಥಮ್ (ಇಂಗ್ಲೆಂಡ್): ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ತಂದೆ ಹಾಗೂ ಮಗನನ್ನು ಔಟ್ ಮಾಡಿದ ದಾಖಲೆ ನಿರ್ಮಿಸಿದ್ದು ಇಂಗ್ಲೆಂಡ್ನ ಇಯಾನ್ ಬೋಥಮ್. ನ್ಯೂಝಿಲೆಂಡ್ನ ಲ್ಯಾನ್ಸ್ ಕೇರ್ನ್ಸ್ (ತಂದೆ) ಹಾಗೂ ಕ್ರಿಸ್ ಕೇರ್ನ್ಸ್ (ಮಗ) ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದರು.

ವಾಸಿಂ ಅಕ್ರಮ್ (ಪಾಕಿಸ್ತಾನ್): ಪಾಕ್ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್ ಕೂಡ ನ್ಯೂಝಿಲೆಂಡ್ ಲ್ಯಾನ್ಸ್ ಕೇರ್ನ್ಸ್ ಹಾಗೂ ಕ್ರಿಸ್ ಕೇರ್ನ್ಸ್ ಅವರ ವಿಕೆಟ್ ಪಡೆದಿದ್ದರು.

ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ): ಆಸೀಸ್ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ವೆಸ್ಟ್ ಇಂಡೀಸ್ನ ಶಿವನರೈನ್ ಚಂದ್ರಪಾಲ್ (ತಂದೆ) ಹಾಗೂ ತೇಜ್ನರೈನ್ ಚಂದ್ರಪಾಲ್ (ಮಗ) ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದ್ದಾರೆ.

ಸೈಮನ್ ಹಾರ್ಮರ್ (ಸೌತ್ ಆಫ್ರಿಕಾ): ಸೌತ್ ಆಫ್ರಿಕಾ ಬೌಲರ್ ಸೈಮನ್ ಹಾರ್ಮರ್ ಕೂಡ ಶಿವನರೈನ್ ಚಂದ್ರಪಾಲ್ ಹಾಗೂ ತೇಜ್ನರೈನ್ ಚಂದ್ರಪಾಲ್ ಅವರ ವಿಕೆಟ್ ಪಡೆದಿದ್ದಾರೆ.

ರವಿಚಂದ್ರನ್ ಅಶ್ವಿನ್ (ಭಾರತ): ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 2011 ರಲ್ಲಿ ಶಿವನರೈನ್ ಚಂದ್ರಪಾಲ್ ವಿಕೆಟ್ ಪಡೆದರೆ, 2023 ರಲ್ಲಿ ತೇಜ್ನರೈನ್ ಚಂದ್ರಪಾಲ್ ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ತಂದೆ-ಮಗನನ್ನು ಔಟ್ ಮಾಡಿದ ವಿಶ್ವದ 5ನೇ ಬೌಲರ್ ಎನಿಸಿಕೊಂಡಿದ್ದಾರೆ.

TV9 Kannada
Read More



