AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆ ಬರೆದ ಇಂಗ್ಲೆಂಡ್

New Zealand vs England: ನ್ಯೂಝಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ತಂಡ ಅಗ್ರ ಕ್ರಮಾಂಕದ ಬ್ಯಾಟರ್​ಗಳು ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಈ ಕಳಪೆ ಪ್ರದರ್ಶನದೊಂದಿಗೆ 27 ವರ್ಷಗಳ ಹಿಂದೆ ಬಾಂಗ್ಲಾದೇಶ್ ತಂಡ ಬರೆದ ಅತ್ಯಂತ ಹೀನಾಯ ದಾಖಲೆಯೊಂದನ್ನು ಇಂಗ್ಲೆಂಡ್ ತಂಡ ಮುರಿದಿದೆ.

ಝಾಹಿರ್ ಯೂಸುಫ್
|

Updated on: Nov 01, 2025 | 1:53 PM

Share
ಏಕದಿನ ಕ್ರಿಕೆಟ್ ಶುರುವಾಗಿ ಬರೋಬ್ಬರಿ 54 ವರ್ಷಗಳಾಗಿವೆ. ಈ ಐವತ್ತ ನಾಲ್ಕು ವರ್ಷಗಳ ಇತಿಹಾಸದಲ್ಲೇ ಇಂಗ್ಲೆಂಡ್ ತಂಡವು ಅತ್ಯಂತ ಕೆಟ್ಟ ಪ್ರದರ್ಶನ ನೀಡಿ ಹೀನಾಯ ದಾಖಲೆಯೊಂದಕ್ಕೆ ಕೊರೊಳೊಡ್ಡಿದೆ. ಇಂತಹದೊಂದು ಕಳಪೆ ದಾಖಲೆ ನಿರ್ಮಾಣಕ್ಕೆ ಕಾರಣವಾಗಿದ್ದು ಇಂಗ್ಲೆಂಡ್ ತಂಡದ​ ಅಗ್ರ ಕ್ರಮಾಂಕದ ನಾಲ್ವರು ದಾಂಡಿಗರು.

1 / 6
ನ್ಯೂಝಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ಪರ ಟಾಪ್-4 ಕ್ರಮಾಂಕಗಳಲ್ಲಿ ಕಣಕ್ಕಿಳಿದ ಬ್ಯಾಟರ್​ಗಳೆಂದರೆ ಜೇಮಿ ಸ್ಮಿತ್, ಬೆನ್ ಡಕೆಟ್, ಜೋ ರೂಟ್, ಜೇಕಬ್ ಬೆಥೆಲ್ ಹಾಗೂ ಹ್ಯಾರಿ. ಮೊದಲೆರಡು ಪಂದ್ಯಗಳಲ್ಲಿ ಸ್ಮಿತ್, ಡಕೆಟ್, ರೂಟ್ ಹಾಗೂ ಬೆಥೆಲ್ ಟಾಪ್-4 ನಲ್ಲಿ ಬ್ಯಾಟ್ ಬೀಸಿದ್ದರು.

2 / 6
ಈ ಎರಡು ಪಂದ್ಯಗಳಲ್ಲಿ ಜೇಮಿ ಸ್ಮಿತ್ (13), ಬೆನ್ ಡಕೆಟ್ (3), ಜೋ ರೂಟ್ (27), ಜೇಕಬ್ ಬೆಥೆಲ್ (20) ಕಲೆಹಾಕಿದ ಒಟ್ಟು ಸ್ಕೋರ್ 63 ರನ್​ಗಳು ಮಾತ್ರ. ಇನ್ನು ಮೂರನೇ ಪಂದ್ಯದಲ್ಲಿ ಹ್ಯಾರಿ ಬ್ರೂಕ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದು 6 ರನ್ ಬಾರಿಸಿ ಔಟಾಗಿದ್ದರು.

3 / 6
ಅಂದರೆ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್​​ನ ಟಾಪ್-4 ಬ್ಯಾಟರ್​ಗಳಾದ ಜೇಮಿ ಸ್ಮಿತ್ (5), ಬೆನ್ ಡಕೆಟ್ (8), ಜೋ ರೂಟ್ (2), ಜೇಕಬ್ ಬೆಥೆಲ್ (6) ಒಟ್ಟು ಸ್ಕೋರ್ 21 ರನ್​ಗಳು ಮಾತ್ರ. ಇದರೊಂದಿಗೆ ಏಕದಿನ ಸರಣಿ ಅಥವಾ ಟೂರ್ನಿಯಲ್ಲಿ ಅತೀ ಕಡಿಮೆ ರನ್ ಕಲೆಹಾಕಿದ ಟಾಪ್-4 ಬ್ಯಾಟರ್​ಗಳ ಹೀನಾಯ ದಾಖಲೆಯೊಂದು ಇಂಗ್ಲೆಂಡ್ ಪಾಲಾಯಿತು.

4 / 6
ಇದಕ್ಕೂ ಮುನ್ನ ಈ ಕೆಟ್ಟ ದಾಖಲೆ ಬಾಂಗ್ಲಾದೇಶ್ ತಂಡದ ಹೆಸರಿನಲ್ಲಿತ್ತು. 1988 ರ ಏಷ್ಯಾ ಕಪ್‌ನಲ್ಲಿ ಬಾಂಗ್ಲಾದೇಶದ ಅಗ್ರ ನಾಲ್ವರು ಬ್ಯಾಟ್ಸ್‌ಮನ್‌ಗಳು ಕೇವಲ 89 ರನ್‌ಗಳನ್ನು ಗಳಿಸಿ ಈ ಹೀನಾಯ ದಾಖಲೆ ಬರೆದಿದ್ದರು. ಇದೀಗ 27 ವರ್ಷಗಳ ಬಳಿಕ ಈ ದಾಖಲೆಯನ್ನು ಇಂಗ್ಲೆಂಡ್ ಬ್ಯಾಟರ್​ಗಳು ಅಳಿಸಿ ಹಾಕಿದ್ದಾರೆ.

5 / 6
ನ್ಯೂಝಿಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ಅಗ್ರ ನಾಲ್ವರು ಬ್ಯಾಟರ್​ಗಳು ಕಲೆಹಾಕಿದ ಒಟ್ಟು ಸ್ಕೋರ್ ಕೇವಲ 84 ರನ್​ಗಳು ಮಾತ್ರ. ಇದರೊಂದಿಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಟೂರ್ನಿ ಅಥವಾ ಏಕದಿನ ಸರಣಿಯೊಂದರಲ್ಲಿ ಅತೀ ಕಡಿಮೆ ಸ್ಕೋರ್​ಗಳಿಸಿದ ಟಾಪ್-4 ಬ್ಯಾಟರ್​ಗಳ ಹೀನಾಯ ದಾಖಲೆ ಇಂಗ್ಲೆಂಡ್ ತಂಡದ ಹೆಸರಿಗೆ ಸೇರ್ಪಡೆಯಾಗಿದೆ.

6 / 6
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ