AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿ ಹಂಡ್ರೆಡ್ ಲೀಗ್​ಗೆ ಕಾಲಿಟ್ಟ IPLನ 4 ಫ್ರಾಂಚೈಸಿಗಳು..!

The Hundred 2025: ದಿ ಹಂಡ್ರೆಡ್ ಲೀಗ್ ಶುರುವಾಗಿದ್ದು 2021 ರಲ್ಲಿ. ಈ ಟೂರ್ನಿಯಲ್ಲಿ 100 ಎಸೆತಗಳ ಪಂದ್ಯ ನಡೆಯಲಿದೆ. ಅಂದರೆ ಟಿ20 ಬದಲಿಗೆ ಇಲ್ಲಿ ಪ್ರತಿ ಇನಿಂಗ್ಸ್​ಗೆ 100 ಎಸೆತಗಳನ್ನು ಎಸೆಯಲಾಗುತ್ತದೆ. ಹಾಗೆಯೇ ಒಂದು ಓವರ್​ನಲ್ಲಿ 5 ಎಸೆತಗಳು ಇರಲಿವೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂದರೆ ಒಬ್ಬ ಬೌಲರ್ ಸತತ 2 ಓವರ್ ಅಥವಾ 10 ಎಸೆತಗಳನ್ನು ಎಸೆಯಬಹುದು. ಹೀಗೆ ಹಲವು ರೀತಿಯಲ್ಲಿ ವಿಭಿನ್ನವಾಗಿ ಟೂರ್ನಿಗೆ ಇದೀಗ ಐಪಿಎಲ್ ಫ್ರಾಂಚೈಸಿಗಳು ಎಂಟ್ರಿ ಕೊಟ್ಟಿದ್ದಾರೆ.

ಝಾಹಿರ್ ಯೂಸುಫ್
|

Updated on:Jul 31, 2025 | 10:54 AM

Share
ಇಂಡಿಯನ್ ಪ್ರೀಮಿಯರ್ ಲೀಗ್​ನ (IPL) ಫ್ರಾಂಚೈಸಿಗಳು ಇದೀಗ ಇಂಗ್ಲೆಂಡ್ ಕ್ರಿಕೆಟ್ ಲೀಗ್​ನತ್ತ ಮುಖ ಮಾಡಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಲೀಗ್​ನಲ್ಲಿ (The Hundred League) ಐಪಿಎಲ್​ನ ನಾಲ್ಕು ಫ್ರಾಂಚೈಸಿಗಳು ತಂಡಗಳನ್ನು ಖರೀದಿಸಿದ್ದಾರೆ. 

1 / 6
ಐಪಿಎಲ್​ನ 4 ಪ್ರಮುಖ ಫ್ರಾಂಚೈಸಿಗಳಾದ ಮುಂಬೈ ಇಂಡಿಯನ್ಸ್, ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ದಿ ಹಂಡ್ರೆಡ್ ಲೀಗ್​ ತಂಡಗಳ ಮಾಲೀಕತ್ವನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಇಂಗ್ಲೆಂಡ್ ಕ್ರಿಕೆಟ್ ಲೀಗ್​ನತ್ತ ಐಪಿಎಲ್​ ಫ್ರಾಂಚೈಸಿಗಳು ಹೊಸ ಹೆಜ್ಜೆಯನ್ನಿಟ್ಟಿದೆ.

2 / 6
ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಓವಲ್ ಇನ್ವಿನ್ಸಿಬಲ್ ತಂಡದ ಶೇ. 49 ರಷ್ಟು ಪಾಲನ್ನು ಖರೀದಿಸಿದೆ. ಈ ಮೂಲಕ ರಿಲಯನ್ಸ್ ಒಡೆತನದ ಇಂಡಿಯಾವಿನ್ ಸ್ಪೋರ್ಟ್ಸ್ ಪ್ರೈ. ಲಿಮಿಟೆಡ್ 100 ಎಸೆತಗಳ ಟೂರ್ನಿಗೆ ಕಾಲಿಟ್ಟಿದೆ. ಅಲ್ಲದೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಎಂಐ ಓವಲ್ ಹೆಸರಿನಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.

3 / 6
ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಕೂಡ ದಿ ಹಂಡ್ರೆಡ್ ಲೀಗ್​ನಲ್ಲಿ ತಂಡವನ್ನು ಖರೀದಿಸಿದ್ದು, ಮ್ಯಾಂಚೆಸ್ಟರ್ ಒರಿಜಿನಲ್ಸ್ ಫ್ರಾಂಚೈಸಿಯ ಶೇ.70 ರಷ್ಟು ಪಾಲನ್ನು ತನ್ನದಾಗಿಸಿಕೊಂಡಿದೆ. ಹೀಗಾಗಿ ದಿ ಹಂಡ್ರೆಡ್ ಲೀಗ್​ನಲ್ಲೂ ಇನ್ಮುಂದೆ ಸೂಪರ್ ಜೈಂಟ್ಸ್ ತಂಡ ಕಾಣಿಸಿಕೊಳ್ಳಲಿದೆ.

4 / 6
 ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಕೂಡ ದಿ ಹಂಡ್ರೆಡ್ ಲೀಗ್​ನಲ್ಲಿ ತಂಡವನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಯಾರ್ಕ್‌ಷೈರ್ ಒಡೆತನದಲ್ಲಿದ್ದ ನಾರ್ದರ್ನ್ ಸೂಪರ್‌ಚಾರ್ಜರ್ಸ್‌ನ ಸಂಪೂರ್ಣ ಪಾಲನ್ನು ಸನ್​ ಗ್ರೂಪ್ ಖರೀದಿಸಿದ್ದು, ಹೀಗಾಗಿ ಮುಂಬರುವ ದಿ ಹಂಡ್ರೆಡ್ ಲೀಗ್​ನಲ್ಲಿ ನಾರ್ದರ್ನ್ ಸೂಪರ್‌ಚಾರ್ಜರ್ಸ್ ತಂಡವು ಸನ್​ರೈಸರ್ಸ್ ಹೆಸರಿನಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.

5 / 6
ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ  ಸಹ-ಮಾಲೀಕರಾದ ಜಿಎಂಆರ್ ಗ್ರೂಪ್ ಕೂಡ ದಿ ಹಂಡ್ರೆಡ್ ಲೀಗ್​ಗೆ ಕಾಲಿಟ್ಟಿದ್ದು, ಸದರ್ನ್ ಬ್ರೇವ್‌ ಫ್ರಾಂಚೈಸಿಯ ಶೇಕಡಾ 49 ರಷ್ಟು ಪಾಲನ್ನು ಖರೀದಿಸಿದೆ. ಹೀಗಾಗಿ ಮುಂಬರುವ ಸೀಸನ್​ನಲ್ಲಿ ಕ್ಯಾಪಿಟಲ್ಸ್ ಪಡೆ ಕೂಡ ದಿ ಹಂಡ್ರೆಡ್ ಲೀಗ್​ನಲ್ಲಿ ಕಾಣಿಸಿಕೊಳ್ಳಲಿದೆ.

6 / 6

Published On - 10:54 am, Thu, 31 July 25

‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ

ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ

ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?

ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!

ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು

ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ

ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ

ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು

ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು

ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು