AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2028: ಮುಂದಿನ ಟಿ20 ವಿಶ್ವಕಪ್​ಗೆ 12 ತಂಡಗಳು ಆಯ್ಕೆ

T20 World Cup 2028: ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ಜಂಟಿಯಾಗಿ ಆಯೋಜಿಸಲಿರುವ 2028ರ ಟಿ20 ವಿಶ್ವಕಪ್​ನಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ. ಈ ಇಪ್ಪತ್ತು ತಂಡಗಳಲ್ಲಿ 12 ಟೀಮ್​ಗಳು ಫೈನಲ್ ಆಗಿವೆ. ಇನ್ನುಳಿದ 8 ತಂಡಗಳು ಅರ್ಹತಾ ಸುತ್ತಿನ ಮೂಲಕ ಆಯ್ಕೆಯಾಗಲಿದೆ.

ಝಾಹಿರ್ ಯೂಸುಫ್
|

Updated on: Feb 19, 2026 | 11:27 AM

Share
2026ರ ಟಿ20 ವಿಶ್ವಕಪ್​ ಟೂರ್ನಿಗೆ ತೆರೆಬಿದ್ದಿದೆ. 20 ತಂಡಗಳೊಂದಿಗೆ ಶುರುವಾದ ಈ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ಟೀಮ್ ಇಂಡಿಯಾ. ಇನ್ನು ರನ್ನರ್ ಅಪ್ ಸ್ಥಾನಕ್ಕೆ ನ್ಯೂಝಿಲೆಂಡ್ ತೃಪ್ತಿಪಟ್ಟುಕೊಂಡಿದೆ. ಇನ್ನು ಈ 20 ತಂಡಗಳಲ್ಲಿ 12 ಟೀಮ್​ಗಳು ನೇರವಾಗಿ ಮುಂದಿನ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆದುಕೊಂಡಿದೆ. ಅಂದರೆ 2028 ರಲ್ಲಿ ಕಣಕ್ಕಿಳಿಯಲಿರುವ 12 ತಂಡಗಳು ಖಚಿತವಾಗಿದೆ. ಆ ತಂಡಗಳ ಪಟ್ಟಿ ತಂಡಗಳ ಪಟ್ಟಿ ಈ ಕೆಳಗಿನಂತಿದೆ...

1 / 13
ಆಸ್ಟ್ರೇಲಿಯಾ: ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನ ನೀಡಿ ಮೊದಲ ಸುತ್ತಿನಲ್ಲೇ ಹೊರಬಿದ್ದಿರುವ ಆಸ್ಟ್ರೇಲಿಯಾ 2028ರ ಟಿ20 ವಿಶ್ವಕಪ್​ಗೆ ಆತಿಥೇಯ ರಾಷ್ಟ್ರವಾಗಿ ನೇರವಾಗಿ ಆಯ್ಕೆಯಾಗಿದೆ. ಅದರಂತೆ ಮುಂಬರುವ ಟಿ20 ವಿಶ್ವಕಪ್​ನಲ್ಲಿ ಆಸೀಸ್ ಪಡೆ ಕಾಣಿಸಿಕೊಳ್ಳುವುದು ಖಚಿತ.

2 / 13
ನ್ಯೂಝಿಲೆಂಡ್: ಆಸ್ಟ್ರೇಲಿಯಾ ಜೊತೆ ನ್ಯೂಝಿಲೆಂಡ್ ಕೂಡ ಮುಂಬರುವ ಟಿ20 ವಿಶ್ವಕಪ್​ನ ಆತಿಥ್ಯವಹಿಸಲಿದೆ. ಅದರಂತೆ ಕಿವೀಸ್ ಪಡೆ ಕೂಡ 2028ರ ಟಿ20 ವಿಶ್ವಕಪ್​ಗೆ ಆತಿಥೇಯ ರಾಷ್ಟ್ರವಾಗಿ ಡೈರೆಕ್ಟ್ ಆಯ್ಕೆಯಾಗಿದೆ.

3 / 13
ವೆಸ್ಟ್ ಇಂಡೀಸ್: ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಸೂಪರ್-8 ಹಂತಕ್ಕೇರಿದ್ದ ವೆಸ್ಟ್ ಇಂಡೀಸ್ ತಂಡ ಕೂಡ ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ಆಯೋಜಿಸಲಿರುವ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆದುಕೊಂಡಿದೆ.

4 / 13
ಝಿಂಬಾಬ್ವೆ: ಆಸ್ಟ್ರೇಲಿಯಾ ಮತ್ತು ಐರ್ಲೆಂಡ್ ವಿರುದ್ಧ ಗೆದ್ದು ಟಿ20 ವಿಶ್ವಕಪ್​ನ ಸೂಪರ್-8 ಸುತ್ತಿಗೆ ಪ್ರವೇಶಿಸಿದ್ದ ಝಿಂಬಾಬ್ವೆ ತಂಡ ಕೂಡ ಮುಂದಿನ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆದುಕೊಂಡಿದೆ. ಅದರಂತೆ ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್​​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಝಿಂಬಾಬ್ವೆ ಕೂಡ ಕಾಣಿಸಿಕೊಳ್ಳಲಿದೆ.

5 / 13
ಸೌತ್ ಆಫ್ರಿಕಾ; ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಸೂಪರ್-8 ಹಂತಕ್ಕೇರಿರುವ ಸೌತ್ ಆಫ್ರಿಕಾ ತಂಡವು ಕೂಡ 2028 ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೆ ನೇರವಾಗಿ ಎಂಟ್ರಿ ಕೊಟ್ಟಿದೆ.

6 / 13
ಇಂಗ್ಲೆಂಡ್: ಈ ಬಾರಿಯ ವಿಶ್ವಕಪ್​ನಲ್ಲಿ ಸೆಮಿಫೈನಲ್ ಆಡಿದ್ದ ಇಂಗ್ಲೆಂಡ್ ತಂಡ ಕೂಡ 2028 ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೆ ನೇರ ಅರ್ಹತೆ ಪಡೆದುಕೊಂಡಿದೆ.

7 / 13
ಶ್ರೀಲಂಕಾ: 10ನೇ ಟಿ20 ವಿಶ್ವಕಪ್​ಗೆ ಜಂಟಿ ಆತಿಥ್ಯವಹಿಸಿದ್ದ ಶ್ರೀಲಂಕಾ ತಂಡ ಸೂಪರ್-8 ಸುತ್ತಿಗೆ ಪ್ರವೇಶಿಸಿರುವ ಆಧಾರದ ಮೇಲೆ 2028ರ ಟಿ20 ವಿಶ್ವಕಪ್​ಗೆ ಆಯ್ಕೆಯಾಗಿದೆ. 

8 / 13
ಭಾರತ: ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿರುವ ಟೀಮ್ ಇಂಡಿಯಾ ಕೂಡ ಆಸ್ಟ್ರೇಲಿಯಾ-ನ್ಯೂಝಿಲೆಂಡ್ ಆಯೋಜಿಸಲಿರುವ ಮುಂಬರುವ ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಲಿದೆ.

9 / 13
ಪಾಕಿಸ್ತಾನ್: ಟಿ20 ವಿಶ್ವಕಪ್ 2026 ರಲ್ಲಿ ಸೋಲು-ಗೆಲುವುಗಳೊಂದಿಗೆ ಕೊನೆಗೂ ಸೂಪರ್-8 ಹಂತಕ್ಕೇರಿದ್ದ ಪಾಕಿಸ್ತಾನ್ ತಂಡವು 2028ರ ಟಿ20 ವಿಶ್ವಕಪ್​ ಎಂಟ್ರಿಯನ್ನು ಖಚಿತಪಡಿಸಿಕೊಂಡಿದೆ. ಅದರಂತೆ ಪಾಕ್ ಪಡೆ ಕೂಡ ಆಸ್ಟ್ರೇಲಿಯಾ-ನ್ಯೂಝಿಲೆಂಡ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಲಿದೆ.

10 / 13
ಅಫ್ಘಾನಿಸ್ತಾನ್: 2026 ಟಿ20 ವಿಶ್ವಕಪ್​ನ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದ ಅಫ್ಘಾನಿಸ್ತಾನ್ ತಂಡವು ಐಸಿಸಿ ಶ್ರೇಯಾಂಕದ ಆಧಾರದ ಮೇಲೆ 2028ರ ಟಿ20 ವಿಶ್ವಕಪ್​ಗೆ ಆಯ್ಕೆಯಾಗಿದೆ. ಹೀಗಾಗಿ 2028ರ ಟಿ20 ವಿಶ್ವಕಪ್​ನಲ್ಲಿ ಅಫ್ಘಾನಿಸ್ತಾನ್ ತಂಡ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

11 / 13
ಬಾಂಗ್ಲಾದೇಶ್: ಈ ಬಾರಿಯ ಟಿ20 ವಿಶ್ವಕಪ್​ನಿಂದ ಹೊರಗುಳಿದಿರುವ ಬಾಂಗ್ಲಾದೇಶ್ ತಂಡ ಕೂಡ ಮುಂದಿನ ಟಿ20 ವಿಶ್ವಕಪ್​ಗೆ ಆಯ್ಕೆಯಾಗಿದೆ. ಐಸಿಸಿ ಶ್ರೇಯಾಂಕದ ಆಧಾರದ ಮೇಲೆ ಬಾಂಗ್ಲಾ ಪಡೆದ 2028ರ ಟಿ20 ವಿಶ್ವಕಪ್​ಗೆ ಅರ್ಹತೆಗಿಟ್ಟಿಸಿಕೊಂಡಿದೆ.

12 / 13
ಐರ್ಲೆಂಡ್: ಐಸಿಸಿ ಶ್ರೇಯಾಂಕದ ಆಧಾರದ ಮೇಲೆ ಐರ್ಲೆಂಡ್ ತಂಡ ಕೂಡ ಮುಂದಿನ ಟಿ20 ವಿಶ್ವಕಪ್​ಗೆ ಆಯ್ಕೆಯಾಗಿದೆ.  ಇದರೊಂದಿಗೆ ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್​ನಲ್ಲಿ ಐರ್ಲೆಂಡ್ ಕೂಡ ಕಣಕ್ಕಿಳಿಯುವುದು ಖಚಿತವಾಗಿದೆ.

13 / 13
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್

ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​

ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ

ಅಹಮದಾಬಾದ್‌ನಲ್ಲೂ ಆರ್‌ಸಿಬಿ ಅಲೆ!
ಅಹಮದಾಬಾದ್‌ನಲ್ಲೂ ಆರ್‌ಸಿಬಿ ಅಲೆ!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!

ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ

ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್

ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ

ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ

ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​