AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

೧೪೮ ವರ್ಷಗಳ ಇತಿಹಾಸದಲ್ಲೇ ಟೀಮ್ ಇಂಡಿಯಾಗೆ ಹೀಗೊಂದು ಹೀನಾಯ ಸೋಲು

India vs England 1st Test: ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಸೋಲನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​ನಲ್ಲಿ 471 ರನ್​ ಕಲೆಹಾಕಿದರೆ, ಇಂಗ್ಲೆಂಡ್ 465 ರನ್​ಗಳಿಸಿತು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ 364 ರನ್​ಗಳಿಗೆ ಆಲೌಟ್ ಆದರು. ಅತ್ತ 371 ರನ್​ಗಳ ಗುರಿಯನ್ನು ಇಂಗ್ಲೆಂಡ್ 82 ಓವರ್​ಗಳಲ್ಲಿ ಚೇಸ್ ಮಾಡಿ ಭರ್ಜರಿ ಜಯ ಸಾಧಿಸಿದೆ.

ಝಾಹಿರ್ ಯೂಸುಫ್
|

Updated on: Jun 25, 2025 | 7:24 AM

Share
148 ವರ್ಷಗಳ ಟೆಸ್ಟ್‌ ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದು ಪಂದ್ಯವೊಂದರಲ್ಲಿ 5 ಶತಕ ಸಿಡಿಸಿರುವುದು ಕೇವಲ ಮೂರು ಬಾರಿ. ಹೀಗೆ 5 ಶತಕ ಸಿಡಿಸಿ ಅಬ್ಬರಿಸಿದ ತಂಡಗಳೆಲ್ಲವೂ ಭರ್ಜರಿ ಜಯ ಸಾಧಿಸಿದೆ. ಆದರೆ ಟೀಮ್ ಇಂಡಿಯಾ ಪಾಲಿಗೆ ಆ ಅದೃಷ್ಟವಿಲ್ಲ.

1 / 6
ಲೀಡ್ಸ್​ನ ಹೆಡಿಂಗ್ಲೆ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್​ನಲ್ಲಿ ಯಶಸ್ವಿ ಜೈಸ್ವಾಲ್ (101), ಶುಭ್​ಮನ್ (147) ಹಾಗೂ ರಿಷಭ್ ಪಂತ್ (134) ಶತಕ ಸಿಡಿಸಿದ್ದರು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಕೆಎಲ್ ರಾಹುಲ್ (137) ಹಾಗೂ ರಿಷಭ್ ಪಂತ್ (118) ಶತಕ ಬಾರಿಸಿದ್ದರು.

2 / 6
ಈ ಶತಕಗಳ ಹೊರತಾಗಿಯೂ ಈ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು ಸಾಧ್ಯವಾಗಿಲ್ಲ. ಭಾರತ ತಂಡವು ಕೊನೆಯ ಇನಿಂಗ್ಸ್ ನಲ್ಲಿ ನೀಡಿದ 371 ರನ್ ಗಳ ಗುರಿಯನ್ನು ಇಂಗ್ಲೆಂಡ್ ತಂಡವು 82 ಓವರ್‌ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

3 / 6
ಇದಕ್ಕೂ ಮುನ್ನ ಒಂದೇ ಪಂದ್ಯದಲ್ಲಿ 5 ಶತಕಗಳನ್ನು ಸಿಡಿಸಿದ್ದ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ್ ತಂಡಗಳು ಭರ್ಜರಿ ಗೆಲುವು ದಾಖಲಿಸಿದ್ದವು. 1955 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 5 ಶತಕ ಬಾರಿಸಿದ ಆಸೀಸ್ ಪಡೆ ಇನಿಂಗ್ಸ್ ಹಾಗೂ 82 ರನ್ ಗಳ ಅಮೋಘ ಗೆಲುವು ದಾಖಲಿಸಿತ್ತು.

4 / 6
ಇನ್ನು 2001 ರಲ್ಲಿ ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 5 ಶತಕ ಬಾರಿಸಿದ್ದ ಪಾಕಿಸ್ತಾನ್ ಇನಿಂಗ್ಸ್ ಹಾಗೂ 264 ರನ್​ಗಳ ಅಭೂತಪೂರ್ವ ಗೆಲುವು ದಾಖಲಿಸಿತ್ತು. ಆದರೆ ಟೀಮ್ ಇಂಡಿಯಾ ದಾಂಡಿಗರು ಬಾರಿಸಿದ 5 ಶತಕಗಳು ಸೋಲಿನೊಂದಿಗೆ ವ್ಯರ್ಥವಾಗಿದೆ.

5 / 6
ಈ ಮೂಲಕ 148 ವರ್ಷಗಳ ಟೆಸ್ಟ್‌ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ 5 ಸೆಂಚುರಿ ಸಿಡಿಸಿದರೂ ಸೋತ ತಂಡವೆಂಬ ಹಣೆಪಟ್ಟಿ ಟೀಮ್ ಇಂಡಿಯಾ ಪಾಲಾಗಿದೆ. ಇದಾಗ್ಯೂ ಇಂಗ್ಲೆಂಡ್ ವಿರುದ್ಧ ಇನ್ನೂ ನಾಲ್ಕು ಪಂದ್ಯಗಳು ಉಳಿದಿದ್ದು, ಈ ಮ್ಯಾಚ್​ಗಳಲ್ಲಿ ಗೆಲುವು ದಾಖಲಿಸಿ ಯಂಗ್ ಇಂಡಿಯಾ ಇತಿಹಾಸ ಬರೆಯಲಿದೆಯಾ ಕಾದು ನೋಡಬೇಕಿದೆ.

6 / 6
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ

ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ

ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ

ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!

ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ

ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ

ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್

ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್

ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?

ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ