AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: 3ನೇ ಪಂದ್ಯದಲ್ಲೂ ಮುಗ್ಗರಿಸಿದ ವೈಭವ್ ಸೂರ್ಯವಂಶಿ

Vaibhav Sooryavanshi's Flop Show Continues: ಭಾರತ-ಇಂಗ್ಲೆಂಡ್ 4ನೇ T20 ಪಂದ್ಯದಲ್ಲಿ ಟೀಂ ಇಂಡಿಯಾಗೆ ಕಳಪೆ ಆರಂಭ ಸಿಕ್ಕಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದರೂ, ಯುವ ಆಟಗಾರ ವೈಭವ್ ಸೂರ್ಯವಂಶಿ ಸತತ ಮೂರನೇ ಪಂದ್ಯದಲ್ಲೂ ನಿರಾಸೆ ಮೂಡಿಸಿದ್ದಾರೆ. ಇಂಗ್ಲೆಂಡ್ ಪಿಚ್​ಗಳನ್ನು ಅರಿಯದೆ ದೊಡ್ಡ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿರುವುದು ಆಯ್ಕೆ ಮಂಡಳಿಗೆ ಅಸಮಾಧಾನ ತಂದಿದೆ. ಸ್ಯಾಮ್ಸನ್ ಬದಲಿಗೆ ಬಂದ ವೈಭವ್ ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಳ್ಳಲು ವಿಫಲರಾಗಿದ್ದಾರೆ.

ಪೃಥ್ವಿಶಂಕರ
|

Updated on: Jul 09, 2026 | 10:42 PM

Share
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯ ಇಂದು ಬ್ರಿಸ್ಟಲ್‌ನ ಕೌಂಟಿ ಮೈದಾನದಲ್ಲಿ ನಡೆಯುತ್ತಿದೆ. ಈ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿದ್ದಾರೆ. ಆದರೆ ಸರಣಿಯ ಕಳೆದೆರಡು ಪಂದ್ಯಗಳಂತೆ ಈ ಪಂದ್ಯದಲ್ಲೂ ಟೀಂ ಇಂಡಿಯಾ ಕಳಪೆ ಆರಂಭವನ್ನು ಪಡೆದುಕೊಂಡಿದೆ (PC-PTI).

1 / 5
ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಯ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಸತತ ಮೂರನೇ ಪಂದ್ಯದಲ್ಲೂ ರನ್ ಗಳಿಸುವಲ್ಲಿ ಎಡವಿದ್ದಾರೆ. ಈ ಮೂಲಕ ವೈಭವ್​ಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದವರಿಗೆ ವೈಭವ್ ನಿರಾಸೆಗೊಳಿಸಿದ್ದಾರೆ (PC-PTI).

2 / 5
ಸಂಜು ಸ್ಯಾಮ್ಸನ್ ವೈಫಲ್ಯದಿಂದಾಗಿ ವೈಭವ್ ಸೂರ್ಯವಂಶಿಗೆ ಭಾರತ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದೆ. ಆದರೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವೈಭವ್ ಎಡವಿದ್ದಾರೆ. ಇಂಗ್ಲೆಂಡ್‌ ಪಿಚ್​ಗಳನ್ನು ಅರಿಯುವ ಕೆಲಸವನ್ನೇ ಮಾಡದ ವೈಭವ್ ಸತತ ಮೂರನೇ ಪಂದ್ಯದಲ್ಲೂ ದೊಡ್ಡ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿರುವುದು ಆಯ್ಕೆ ಮಂಡಳಿಯನ್ನು ಅಸಮಾಧಾನಗೊಳ್ಳುವಂತೆ ಮಾಡಿರುವುದರಲ್ಲಿ ಸುಳ್ಳಿಲ್ಲ (PC-PTI).

3 / 5
ಈ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದ ವೈಭವ್ 10 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್ ಸಹಿತ 14 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಮೂರನೇ ಟಿ20 ಪಂದ್ಯದಲ್ಲಿ 5 ಎಸೆತಗಳನ್ನು ಎದುರಿಸಿದ್ದ ವೈಭವ್ 2 ಸಿಕ್ಸರ್ ಸಹಿತ 13 ರನ್ ಬಾರಿಸಿ ಪೆವಿಲಿಯನ್‌ ಸೇರಿಕೊಂಡಿದ್ದರು (PC-PTI).

4 / 5
ಮೊದಲ ಎರಡು ಪಂದ್ಯಗಳಲ್ಲಿ ವಿಫಲರಾಗಿದ್ದ ವೈಭವ್ ಮೂರನೇ ಟಿ20 ಪಂದ್ಯದಲ್ಲಿ ಅಬ್ಬರಿಸುತ್ತಾರೆ ಎಂದು ಎಲ್ಲರೂ ಕಾದು ಕುಳಿತಿದ್ದರು. ಆದರೆ ಈ ಪಂದ್ಯದಲ್ಲೂ ವೈಭವ್ ನಿರಾಶೆ ಮೂಡಿಸಿದರು. ಈ ಪಂದ್ಯದಲ್ಲಿ 10 ಎಸೆತಗಳನ್ನು ಎದುರಿಸಿದ ವೈಭವ್ 15 ರನ್ ಬಾರಿಸಿ ಔಟಾದರು. ಗಮನಿಸಬೇಕಾದ ಸಂಗತಿಯೆಂದರೆ ಈ ಮೂರು ಪಂದ್ಯಗಳಲ್ಲೂ ವೈಭವ್ ಅವರ ವಿಕೆಟ್ ಪಡೆದಿದ್ದು, ಜೋಪ್ರಾ ಆರ್ಚರ್ (PC-PTI).

5 / 5
Follow Us