- Kannada News Photo gallery Cricket photos Anderson-Tendulkar Trophy: Who Wins if India-England Series Draws?
IND vs ENG: ಭಾರತ ಓವಲ್ ಟೆಸ್ಟ್ ಗೆದ್ದರೆ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಯಾರ ಕೈ ಸೇರಲಿದೆ?
Anderson-Tendulkar Trophy: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ಫಲಿತಾಂಶವು ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಭವಿಷ್ಯವನ್ನು ನಿರ್ಧರಿಸುತ್ತದೆ. ಸರಣಿ ಡ್ರಾ ಆದರೆ, ಟ್ರೋಫಿ ಯಾರಿಗೂ ಸಲ್ಲದು ಎಂಬುದು ಇತ್ತೀಚಿನ ಅಧಿಕೃತ ಮಾಹಿತಿ. ಇದರರ್ಥ ಟ್ರೋಫಿ ECB ಪ್ರಧಾನ ಕಚೇರಿಯಾದ ಲಾರ್ಡ್ಸ್‌ನಲ್ಲಿ ಇರಿಸಲಾಗುವುದು. ಪೂರ್ವದ ಪಟೌಡಿ ಟ್ರೋಫಿ ಫಲಿತಾಂಶವನ್ನು ಈ ಬಾರಿ ಪರಿಗಣಿಸಲಾಗುವುದಿಲ್ಲ.
Updated on:Aug 04, 2025 | 4:04 PM

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ರೋಚಕ ಘಟ್ಟದತ್ತ ಸಾಗಿದೆ. ಆದಾಗ್ಯೂ ಕೊನೆಯ ಪಂದ್ಯವನ್ನು ಭಾರತ ಗೆದ್ದುಕೊಂಡರೆ, ಆಗ ಸರಣಿ 2-2 ರಿಂದ ಡ್ರಾದಲ್ಲಿ ಕೊನೆಯಾಗಲಿದೆ. ಇಂತಹ ಸಂದರ್ಭದಲ್ಲಿ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಯಾರಿಗೆ ಸಿಗುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ವಾಸ್ತವವಾಗಿ, ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಟೌಡಿ ಟ್ರೋಫಿ ಟೆಸ್ಟ್ ಸರಣಿಯ ಹೆಸರನ್ನು ಈಗ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಎಂದು ಬದಲಾಯಿಸಲಾಗಿದೆ. ಈ ಹಿಂದೆ ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆದಿದ್ದ ಪಟೌಡಿ ಟ್ರೋಫಿ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ ಗೆದ್ದುಕೊಂಡಿತ್ತು. ಹೀಗಾಗಿ ಈ ಸರಣಿ ಡ್ರಾ ಆದರೆ ಟ್ರೋಫಿ ಇಂಗ್ಲೆಂಡ್ ಬಳಿ ಉಳಿಯುತ್ತದೆ ಎನ್ನಲಾಗುತ್ತಿತ್ತು.

ಆದರೆ ಇದೀಗ ಹೊರಬಿದ್ದಿರುವ ಮಾಹಿತಿಯ ಪ್ರಕಾರ ಪಟೌಡಿ ಟ್ರೋಫಿ ಹೆಸರಿನಲ್ಲಿ ನಡೆದಿದ್ದ ಟೆಸ್ಟ್ ಸರಣಿಯನ್ನು ಯಾರು ಗೆದ್ದರು ಎಂಬುದು ಇಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಇದರರ್ಥ ಈ ಸರಣಿ ಡ್ರಾ ಆದರೆ, ಈ ಟ್ರೋಫಿಯನ್ನು ಇಸಿಬಿ ಪ್ರಧಾನ ಕಚೇರಿಯಲ್ಲಿ ಇಡಲಾಗುತ್ತದೆ.

ECB ಯ ಪ್ರಧಾನ ಕಛೇರಿ ಲಾರ್ಡ್ಸ್‌ನಲ್ಲಿ ಇದ್ದು, ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಡ್ರಾ ಆದರೆ, ಈ ಟ್ರೋಫಿಯನ್ನು ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇಡಲಾಗುತ್ತದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಆಶಸ್ ಡ್ರಾ ಆದಾಗಲೂ ಸಹ ಟ್ರೋಫಿಯನ್ನು ಲಾರ್ಡ್ಸ್‌ನಲ್ಲಿ ಇಡಲಾಗುತ್ತದೆ.

ಇನ್ನು ಟೆಸ್ಟ್ ಸರಣಿಯ ಬಗ್ಗೆ ಹೇಳುವುದಾದರೆ.. ಲೀಡ್ಸ್‌ನಲ್ಲಿ ಟೀಂ ಇಂಡಿಯಾವನ್ನು ಸೋಲಿಸಿದ್ದ ಇಂಗ್ಲೆಂಡ್, ಎಡ್ಜ್‌ಬಾಸ್ಟನ್‌ನಲ್ಲಿ ಸೋತಿತ್ತು. ಆ ಬಳಿಕ ಲಾರ್ಡ್ಸ್‌ನಲ್ಲಿ ನಡೆದಿದ್ದ ಪಂದ್ಯವನ್ನು ಇಂಗ್ಲೆಂಡ್ ಗೆದ್ದಿಕೊಂಡರೆ, ಮ್ಯಾಂಚೆಸ್ಟರ್ ಟೆಸ್ಟ್ ಡ್ರಾ ಆಗಿತ್ತು. ಈಗ ಇಂಗ್ಲೆಂಡ್ ಸರಣಿಯನ್ನು ಗೆಲ್ಲುತ್ತದೆಯೇ ಅಥವಾ ಭಾರತ ಡ್ರಾ ಮಾಡಿಕೊಳ್ಳುತ್ತದೆಯೇ ಎಂಬುದು ಓವಲ್‌ನಲ್ಲಿ ನಿರ್ಧರಿಸಲ್ಪಡುತ್ತದೆ.
Published On - 3:44 pm, Mon, 4 August 25
