AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs NZ 2nd ODI: ಮಳೆಯ ಮುಂದೆ ನಡೆಯಲಿಲ್ಲ 29 ಓವರ್​ಗಳ ಪಂದ್ಯ: 2ನೇ ಏಕದಿನ ರದ್ದು: ಇಲ್ಲಿದೆ ನೋಡಿ ಫೋಟೋಗಳು

India vs New Zealand 2nd ODI: ಹ್ಯಾಮಿಲ್ಟನ್​ನ ಸೀಡನ್ ಪಾರ್ಕ್​ನಲ್ಲಿ ನಡೆಯುತ್ತಿದ್ದ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ದ್ವಿತೀಯ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಓವರ್ ಕಡಿತಗೊಳಿಸಿ 29 ಓವರ್​ಗಳ ಪಂದ್ಯವನ್ನು ನಿಗದಿ ಪಡಿಸಿದರೂ ಒಂದು ಇನ್ನಿಂಗ್ಸ್ ಕೂಡ ಪೂರ್ಣಗೊಳ್ಳದೆ ಪಂದ್ಯವನ್ನು ಸ್ಥಗಿತ ಮಾಡಲಾಯಿತು.

TV9 Web
| Edited By: |

Updated on: Nov 27, 2022 | 1:10 PM

Share
ಹ್ಯಾಮಿಲ್ಟನ್​ನ ಸೀಡನ್ ಪಾರ್ಕ್​ನಲ್ಲಿ ನಡೆಯುತ್ತಿದ್ದ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ದ್ವಿತೀಯ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಓವರ್ ಕಡಿತಗೊಳಿಸಿ 29 ಓವರ್​ಗಳ ಪಂದ್ಯವನ್ನು ನಿಗದಿ ಪಡಿಸಿದರೂ ಒಂದು ಇನ್ನಿಂಗ್ಸ್ ಕೂಡ ಪೂರ್ಣಗೊಳ್ಳದೆ ಪಂದ್ಯವನ್ನು ಸ್ಥಗಿತ ಮಾಡಲಾಯಿತು.

1 / 8
ಪಂದ್ಯ ಆರಂಭಕ್ಕೂ ಮುನ್ನ ಟಾಸ್ ಪ್ರಕ್ರಿಯೆಗೇ ವರುಣ ಅಡ್ಡಿ ಪಡಿಸಿದ. ಬಳಿಕ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್​​ಗೆ ಇಳಿದ ಟೀಮ್ ಇಂಡಿಯಾ ಪರ ಓಪನರ್​ಗಳಾದ ನಾಯಕ ಶಿಖರ್ ಧವನ್ ಹಾಗೂ ಶುಭ್​ಮನ್ ಗಿಲ್ ಉತ್ತಮ ಆರಂಭ ಒದಗಿಸಿದರು.

2 / 8
ಆದರೆ, 4.5 ಓವರ್​ಗೆ ಭಾರತ ವಿಕೆಟ್ ನಷ್ಟವಿಲ್ಲದೆ 22 ರನ್ ಗಳಿಸಿದ್ದಾಗ ಮಳೆ ಪುನಃ ಶುರುವಾಯಿತು. ಕೆಲ ಸಮಯ ಕಾದರೂ ಮಳೆ ಕಡಿಮೆ ಆಗಲಿಲ್ಲ. ಬಳಿಕ ಓವರ್ ಕಡಿತದ ಪ್ರಕ್ರಿಯೆ ಶುರುವಾಯಿತು. ಹೀಗಾಗಿ 29 ಓವರ್​ಗಳ ಪಂದ್ಯವನ್ನ ಆಡಿಸಲು ನಿರ್ಧಾರ ಮಾಡಲಾಯಿತು.

3 / 8
ಮಳೆ ನಿತ್ತ ಬಳಿಕ ಬ್ಯಾಟಿಂಗ್ ಮುಂಂದುವರೆಸಲು ಬಂದ ಭಾರತ 6ನೇ ಓವರ್​ನ ಮ್ಯಾಟ್ ಹೆನ್ರಿ ಅವರ ಮೊದಲ ಎಸೆತದಲ್ಲೇ ಶಿಖರ್ ಧವನ್ (3) ವಿಕೆಟ್ ಕಳೆದುಕೊಂಡಿತು. ನಂತರ ಜೊತೆಯಾದ ಸೂರ್ಯಕುಮಾರ್ ಯಾದವ್ ಹಾಗೂ ಶುಭ್​ಮನ್ ಗಿಲ್ ಬಿರುಸಿನ ಆಟ ಆಡಿದರು.

4 / 8
ಆದರೆ, ಮಳೆಯ ಆಟದ ಮುಂದೆ ಸೂರ್ಯನ ಸ್ಫೋಟಕ ಆಟ ನಿಂತು ಹೋಯಿತು. 13ನೇ ಓವರ್ ಆಗುವಾಗ ಮತ್ತೆ ಜೋರಾಗಿ ಮಳೆ ಸುರಿದ ಪರಿಣಾಮ ಆಟಗಾರರೆಲ್ಲ ಪೆವಿಲಿಯನ್​ಗೆ ತೆರಳಿದರು. ಈ ಸಂದರ್ಭ ಭಾರತ 12.5 ಓವರ್​ಗೆ 1 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿತ್ತು. ಸೂರ್ಯ 25 ಎಸೆತಗಳಲ್ಲಿ 3 ಸಿಕ್ಸರ್, 2 ಫೋರ್​​ನೊಂದಿಗೆ ಅಜೇಯ 34 ಮತ್ತು ಗಿಲ್ 42 ಎಸೆತಗಳಲ್ಲಿ ಅಜೇಯ 45 ರನ್ ಸಿಡಿಸಿದ್ದರು.

5 / 8
ನಂತರ ಕೆಲಹೊತ್ತು ಕಾದರೂ ಮಳೆ ಕಡಿಮೆ ಆಗಲಿಲ್ಲ. ಅಂತಿಮವಾಗಿ ಉಭಯ ತಂಡಗಳ ನಾಯಕ ಹಾಗೂ ಕೋಚ್ ಜೊತೆ ಚರ್ಚಿಸಿ ಅಂಪೈರ್​ಗಳು ಪಂದ್ಯವನ್ನು ಸ್ಥಗಿತಗೊಳಿಸುವ ತೀರ್ಮಾನಕ್ಕೆ ಬಂದರು. ಈ ಮೂಲಕ ಭಾರತ ಏಕದಿನ ಸರಣಿ ಗೆಲ್ಲುವ ಕನಸು ನುಚ್ಚುನೂರಾಗಿದೆ.

6 / 8
ಮಳೆಯ ನಡುವೆಯೇ ಪಂದ್ಯದ ಆರಂಭಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳ ಫೊಟೋ.

7 / 8
ಮಳೆ ಬಂದ ಕಾರಣ ಪಿಚ್ ಅನ್ನು ಕವರ್ ಮಾಡುತ್ತಿರುವ ಗ್ರೌಂಡ್ಸ್​ ಮೆನ್​ಗಳು.

8 / 8
Follow Us
ಬಾವಿಗೆ ಬಿದ್ದ ಸಿಂಹವನ್ನು ಮೇಲೆತ್ತಿದ್ದು ಹೇಗೆ ಗೊತ್ತಾ?

ಕಡಿಮೆ ಸಂಭಾವನೆ ಕೊಟ್ಟರೂ ಕನ್ನಡದ ಗೀತೆಗೆ ಧ್ವನಿ ಆಗಿದ್ದ ಆಶಾ ಭೋಸ್ಲೆ

ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!
ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?

ಸಂಪುಟ ಪುನಾರಚನೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಭರವಸೆ: ಶಾಸಕರು ಖುಷ್​

ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್

ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ

ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ

ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ

ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು