AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023 Auction: ಐಪಿಎಲ್​ ಮಿನಿ ಹರಾಜಿನಲ್ಲಿ ಈ ಆಟಗಾರರು​ ಹರಾಜಾಗುವುದು ಡೌಟ್

IPL 2023 Auction: ಕೆಲ ಸ್ಟಾರ್ ಆಟಗಾರರು ಕಳಪೆ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ ಅವರ ಖರೀದಿಗೆ ಫ್ರಾಂಚೈಸಿಗಳು ಮುಂದಾಗುವುದಿಲ್ಲ ಎಂದೇ ಹೇಳಬಹುದು. ಅಂತಹ ಐವರು ಆಟಗಾರರ ಪಟ್ಟಿ ಹೀಗಿದೆ....

TV9 Web
| Edited By: |

Updated on:Dec 08, 2022 | 10:13 PM

Share
ಐಪಿಎಲ್ ಸೀಸನ್​ 16 ಮಿನಿ ಹರಾಜಿಗಾಗಿ ಒಟ್ಟು 991 ಆಟಗಾರರು ಹೆಸರು ನೊಂದಾಯಿಸಿಕೊಂಡಿದ್ದಾರೆ. ಇವರಲ್ಲಿ 714 ಭಾರತೀಯ ಹಾಗೂ 277 ವಿದೇಶಿ ಆಟಗಾರರಿದ್ದಾರೆ. ಆದರೆ ಇವರಲ್ಲಿ ಕೆಲವೇ ಕೆಲವು ಆಟಗಾರರಿಗೆ ಮಾತ್ರ ಅವಕಾಶ ಸಿಗಲಿದೆ.

1 / 7
ಅದರಲ್ಲೂ ಕೆಲ ಸ್ಟಾರ್ ಆಟಗಾರರು ಕಳಪೆ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ ಅವರ ಖರೀದಿಗೆ ಫ್ರಾಂಚೈಸಿಗಳು ಮುಂದಾಗುವುದಿಲ್ಲ ಎಂದೇ ಹೇಳಬಹುದು. ಅಂತಹ ಐವರು ಆಟಗಾರರ ಪಟ್ಟಿ ಹೀಗಿದೆ....

2 / 7
ಜೇಸನ್ ರಾಯ್: ಇಂಗ್ಲೆಂಡ್​ನ ಸ್ಟಾರ್ ಆರಂಭಿಕ ಆಟಗಾರ ಜೇಸನ್ ರಾಯ್ ಈ ಬಾರಿಯ ಐಪಿಎಲ್​ನಲ್ಲಿ 1.5 ಕೋಟಿ ಮೂಲ ಬೆಲೆ ಘೋಷಿಸಿದ್ದಾರೆ. ಆದರೆ ಇತ್ತೀಚೆಗೆ ಮುಕ್ತಾಯಗೊಂಡ ಟಿ10 ಲೀಗ್​ನಲ್ಲಿ ಅವರ ಪ್ರದರ್ಶನ ಅತ್ಯಂತ ಕಳಪೆ ಮಟ್ಟದಲ್ಲಿತ್ತು. ಟಿ10 ಲೀಗ್​ನಲ್ಲಿ ನಾಲ್ಕು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಜೇಸನ್ ರಾಯ್ ಕಲೆಹಾಕಿದ್ದು ಕೇವಲ 84 ರನ್​ಗಳು ಮಾತ್ರ. ಅತ್ತ ಕಳಪೆ ಫಾರ್ಮ್​ ಕಾರಣ ಇಂಗ್ಲೆಂಡ್ ತಂಡದಿಂದ ಕೂಡ ಹೊರಬಿದ್ದಿದ್ದಾರೆ. ಹೀಗಾಗಿ ಜೇಸನ್ ರಾಯ್ ಅವರನ್ನು ಐಪಿಎಲ್ ಫ್ರಾಂಚೈಸಿಗಳು ನಿರ್ಲಕ್ಷಿಸುವ ಸಾಧ್ಯತೆ ಹೆಚ್ಚಿದೆ.

3 / 7
ಚಮಿಕಾ ಕರುಣರತ್ನೆ: ಶ್ರೀಲಂಕಾ ಆಟಗಾರ ಚಮಿಕಾ ಕರುಣರತ್ನೆ ಈ ಬಾರಿಯ ಐಪಿಎಲ್ ಹರಾಜಿಗಾಗಿ 50 ಲಕ್ಷ ರೂ. ಮೂಲಬೆಲೆ ಘೋಷಿಸಿದ್ದಾರೆ. ಆದರೆ ಅಬುಧಾಬಿ ಟಿ10 ಲೀಗ್​ನಲ್ಲಿ ಅತ್ಯಂತ ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ್ದ ಕರುಣರತ್ನೆ 7 ಪಂದ್ಯಗಳಲ್ಲಿ 8.1 ಓವರ್​ ಬೌಲಿಂಗ್ ಮಾಡಿ 11.75 ರ ಸರಾಸರಿಯಲ್ಲಿ ರನ್​ ನೀಡಿದ್ದರು. ಅಲ್ಲದೆ ಪಡೆದಿದ್ದು ಕೇವಲ 3 ವಿಕೆಟ್ ಮಾತ್ರ. ಹೀಗಾಗಿ ಚಮಿಕಾ ಅವರ ಖರೀದಿಗೂ ಫ್ರಾಂಚೈಸಿಗಳು ಆಸಕ್ತಿ ತೋರುವುದು ಅನುಮಾನ.

4 / 7
ಕೆನ್ನರ್ ಲೂಯಿಸ್: ವೆಸ್ಟ್ ಇಂಡೀಸ್ ದಾಂಡಿಗ ಕೆನ್ನರ್ ಲೂಯಿಸ್ ಈ ಬಾರಿಯ ಟಿ10 ಲೀಗ್​ನಲ್ಲಿ 6 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಆದರೆ ಕಲೆಹಾಕಿದ್ದು ಕೇವಲ 41 ರನ್​ಗಳು ಮಾತ್ರ. ಹೀಗಾಗಿ ಕೆನ್ನರ್ ಲೂಯಿಸ್ ಕೂಡ ಈ ಬಾರಿಯ ಹರಾಜಾಗುವುದು ಡೌಟ್.

5 / 7
ಕಾಲಿನ್ ಮನ್ರೋ: ನ್ಯೂಜಿಲೆಂಡ್ ತಂಡದ ಎಡಗೈ ದಾಂಡಿಗ ಕಾಲಿನ್ ಮನ್ರೋ ಕೂಡ ಈ ಬಾರಿಯ ಐಪಿಎಲ್​ನಲ್ಲಿ ಹರಾಜಾಗುವುದು ಅನುಮಾನ. ಏಕೆಂದರೆ ಅಬುಧಾಬಿ ಟಿ10 ಲೀಗ್​ನಲ್ಲಿ 7 ಪಂದ್ಯವಾಡಿದ್ದ ಮನ್ರೊ ಕಲೆಹಾಕಿದ್ದು ಕೇವಲ 78 ರನ್​ ಮಾತ್ರ.

6 / 7
ಡೇವಿಡ್ ಮಲಾನ್: ಈ ಬಾರಿಯ ಐಪಿಎಲ್​ ಹರಾಜಿಗಾಗಿ ಇಂಗ್ಲೆಂಡ್ ಆಟಗಾರ ಡೇವಿಡ್ ಮಲಾನ್ 1.5 ಕೋಟಿ ಮೂಲ ಬೆಲೆ ಘೋಷಿಸಿದ್ದಾರೆ. ಆದರೆ ಅತ್ತ ಟಿ10 ಲೀಗ್​ನಲ್ಲಿ ಮಲಾನ್ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದ್ದರು. 6 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಮಲಾನ್ ಕಲೆಹಾಕಿದ್ದು ಕೇವಲ 84 ರನ್​ಗಳು ಮಾತ್ರ. ಹೀಗಾಗಿ ಇಂಗ್ಲೆಂಡ್ ಆಟಗಾರ ಖರೀದಿಗೂ ಐಪಿಎಲ್ ಫ್ರಾಂಚೈಸಿಗಳು ಆಸಕ್ತಿ ತೋರುವುದಿಲ್ಲ ಎಂದೇ ಹೇಳಬಹುದು.

7 / 7

Published On - 10:10 pm, Thu, 8 December 22

Web contact
Web contact

TV9 Kannada

Read More
Follow Us
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ

ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ

ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ

ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ

ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ

ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ

ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ

ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ

Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ

ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​