IPL 2023 Final CSK vs GT: ಐಪಿಎಲ್ ಸೀಸನ್ 16ರ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಭಾನುವಾರ ನಡೆಯಬೇಕಿದ್ದ ಪಂದ್ಯವು ಮಳೆಯ ಕಾರಣ ಸೋಮವಾರಕ್ಕೆ ಮುಂದೂಡಲಾಗಿತ್ತು. ಅದರಂತೆ ಇಂದು ಆರಂಭವಾಗಿದ್ದ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್ಕೆ ಮೊದಲ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
ಇತ್ತ ಮೊದಲ ಇನಿಂಗ್ಸ್ನಲ್ಲಿ ಬ್ಯಾಟ್ ಬೀಸಿದ ಗುಜರಾತ್ ಟೈಟಾನ್ಸ್ ತಂಡದ ಪರ ಸಾಯಿ ಸುದರ್ಶನ್ ಅಬ್ಬರಿಸಿದರು. ಕೇವಲ 47 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್ನೊಂದಿಗೆ 96 ರನ್ ಬಾರಿಸಿ ಸಾಯಿ ಸುದರ್ಶನ್ ಮಿಂಚಿದರು. ಈ ಭರ್ಜರಿ ಬ್ಯಾಟಿಂಗ್ ನೆರವನಿಂದ ಗುಜರಾತ್ ಟೈಟಾನ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿತು.
215 ರನ್ಗಳ ಗುರಿ ಬೆನ್ನತ್ತಲು ಆಗಮಿಸಿದ ಸಿಎಸ್ಕೆ ತಂಡದ ಇನಿಂಗ್ಸ್ ವೇಳೆ ಮಳೆ ಬರಲಾರಂಭಿಸಿದೆ. ಹೀಗಾಗಿ ಕೆಲ ಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಇದೀಗ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಓವರ್ಗಳ ಕಡಿತದೊಂದಿಗೆ 12.10 ಕ್ಕೆ ಪಂದ್ಯ ಮುಂದುವರೆಸಲು ನಿರ್ಧರಿಸಲಾಗಿದೆ.
ಅದರಂತೆ ಸಿಎಸ್ಕೆ ತಂಡವು ಗೆಲ್ಲಲು 15 ಓವರ್ಗಳಲ್ಲಿ 171 ರನ್ ಕಲೆಹಾಕಬೇಕು. ಇನ್ನು ಆ ಬಳಿಕ ಮಳೆ ಬಂದರೆ ಮತ್ತೆ ಓವರ್ ಕಡಿತ ಮಾಡಲಾಗುತ್ತದೆ. ಹೀಗಾದರೆ 12 ಓವರ್ಗಳಲ್ಲಿ 143 ರನ್ಗಳ ಗುರಿ ಹೊಂದಿರಲಿದೆ. ಹಾಗೆಯೇ 10 ಓವರ್ಗಳಲ್ಲಿ ಸಿಎಸ್ಕೆ ತಂಡದ ಗುರಿ 123 ಆಗಿರಲಿದೆ.
ಸದ್ಯ 90 ಎಸೆತಗಳಲ್ಲಿ 171 ರನ್ಗಳ ಗುರಿ ಪಡೆದಿರುವ ಸಿಎಸ್ಕೆ ತಂಡವು ಪ್ರತಿ ಓವರ್ಗೆ 11.4 ರನ್ಗಳಿಸಬೇಕು. ಇನ್ನು ಓವರ್ ಕಡಿತದೊಂದಿಗೆ ಪವರ್ಪ್ಲೇ ಓವರ್ ಸಂಖ್ಯೆ 4 ಕ್ಕೆ ಇಳಿಕೆ ಮಾಡಲಾಗಿದೆ. ಹೀಗಾಗಿ ಸಿಎಸ್ಕೆ ತಂಡದ ಮುಂದಿರುವುದು ಕಠಿಣ ಸವಾಲು ಎನ್ನಬಹುದು.
Published On - 11:57 pm, Mon, 29 May 23