IPL 2023: RCB ಪ್ಲೇಆಫ್ ಹಾದಿ ಮತ್ತಷ್ಟು ಕಠಿಣ..!
IPL 2023 Kannada: ಮುಂಬೈ ಇಂಡಿಯನ್ಸ್ ಮುಂದಿನ 3 ಪಂದ್ಯ ಗೆದ್ದರೆ ಒಟ್ಟು 18 ಅಂಕ ಪಡೆಯಲಿದೆ. ಹೀಗಾದರೆ ಆರ್ಸಿಬಿ ತಂಡ ಪ್ಲೇಆಫ್ ರೇಸ್ನಿಂದ ನೇರವಾಗಿ ಹೊರಬೀಳಬಹುದು.
Updated on: May 09, 2023 | 11:19 PM

IPL 2023 MI vs RCB: ಐಪಿಎಲ್ನ 54ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆರ್ಸಿಬಿ ತಂಡ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಆರ್ಸಿಬಿ ತಂಡವು ತನ್ನ ಪ್ಲೇಆಫ್ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದೆ.

ಏಕೆಂದರೆ ಆರ್ಸಿಬಿ ವಿರುದ್ಧದ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡವು ಪಾಯಿಂಟ್ಸ್ ಟೇಬಲ್ನಲ್ಲಿ 3ನೇ ಸ್ಥಾನಕ್ಕೇರಿದೆ. ಇತ್ತ ಸೋಲನುಭವಿಸಿರುವ ಆರ್ಸಿಬಿ 7ನೇ ಸ್ಥಾನಕ್ಕೆ ಕುಸಿದು ಸಂಕಷ್ಟಕ್ಕೆ ಸಿಲುಕಿದೆ.

ಅಂದರೆ ಆರ್ಸಿಬಿಗೆ ಇನ್ನುಳಿದಿರುವುದು ಕೇವಲ 3 ಪಂದ್ಯಗಳು ಮಾತ್ರ. ಈ ಮೂರು ಪಂದ್ಯಗಳಲ್ಲಿ ಗೆದ್ದರೆ ಒಟ್ಟು ಪಾಯಿಂಟ್ಸ್ 16 ಆಗಲಿದೆ. ಈಗಾಗಲೇ 16 ಪಾಯಿಂಟ್ಸ್ ಗಳಿಸಿರುವ ಗುಜರಾತ್ ಟೈಟಾನ್ಸ್ ಮುಂದಿನ ಪಂದ್ಯ ಗೆದ್ದರೆ ಪ್ಲೇಆಫ್ ಖಚಿತಪಡಿಸಿಕೊಳ್ಳಲಿದೆ.

ಹಾಗೆಯೇ ಸಿಎಸ್ಕೆ ತಂಡವು ಮುಂದಿನ 3 ಪಂದ್ಯಗಳಲ್ಲಿ 2 ರಲ್ಲಿ ಜಯ ಸಾಧಿಸಿದರೆ 17 ಅಂಕ ಪಡೆಯಲಿದೆ. ಅದೇ ರೀತಿ ಲಕ್ನೋ ಸೂಪರ್ ಜೈಂಟ್ಸ್ ಮುಂದಿನ 3 ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ 17 ಅಂಕಗಳಿಸಲಿದೆ.

ಇದರ ಜೊತೆಗೆ ಮುಂಬೈ ಇಂಡಿಯನ್ಸ್ ಮುಂದಿನ 3 ಪಂದ್ಯ ಗೆದ್ದರೆ ಒಟ್ಟು 18 ಅಂಕ ಪಡೆಯಲಿದೆ. ಹೀಗಾದರೆ ಆರ್ಸಿಬಿ ತಂಡ ಪ್ಲೇಆಫ್ ರೇಸ್ನಿಂದ ನೇರವಾಗಿ ಹೊರಬೀಳಬಹುದು. ಅಂದರೆ ಆರ್ಸಿಬಿ ಪ್ಲೇಆಫ್ಗೇರಬೇಕಿದ್ದರೆ ಟಾಪ್-4 ನಲ್ಲಿ ಒಂದು ತಂಡ 16 ಅಂಕಗಳನ್ನು ಪಡೆಯಲೇಬೇಕು.

ಉದಾಹರಣೆಗೆ ಅಂಕ ಪಟ್ಟಿಯಲ್ಲಿ 3ನೇ ಹಾಗೂ 4ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಅಥವಾ ಲಕ್ನೋ ಸೂಪರ್ ಜೈಂಟ್ಸ್ 16 ಅಂಕ ಪಡೆದರೆ, ಆರ್ಸಿಬಿ ಮುಂದಿನ 3 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ ನೆಟ್ ರನ್ ರೇಟ್ ಮೂಲಕ ಪ್ಲೇಆಫ್ಗೇರಬಹುದು.

ಆದರೆ ಇತ್ತ 4ನೇ ಸ್ಥಾನಕ್ಕಾಗಿ 10 ಪಾಯಿಂಟ್ಸ್ ಕಲೆಹಾಕಿರುವ ರಾಜಸ್ಥಾನ್ ರಾಯಲ್ಸ್ , ಕೆಕೆಆರ್, ಪಂಜಾಬ್ ಕಿಂಗ್ಸ್ ಭರ್ಜರಿ ಪೈಪೋಟಿ ಇದೆ. ಹೀಗಾಗಿಯೇ ಆರ್ಸಿಬಿ ಪ್ಲೇಆಫ್ ಪ್ರವೇಶಿಸಲು ಮುಂದಿನ 3 ಪಂದ್ಯಗಳನ್ನು ಗೆದ್ದರೆ ಮಾತ್ರ ಸಾಲುವುದಿಲ್ಲ. ಬದಲಾಗಿ ಭರ್ಜರಿ ಜಯ ಸಾಧಿಸಿ ನೆಟ್ ರನ್ ರೇಟ್ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ.

TV9 Kannada
Read More




