- Kannada News Photo gallery Cricket photos IPL 2024: Harshit Rana silent celebration after taking wicket
IPL 2024: ನಿಷೇಧದ ಬಳಿಕ ಹರ್ಷಿತ್ ರಾಣಾ ಫುಲ್ ಸೈಲೆಂಟ್..!
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ರಲ್ಲಿ ಹರ್ಷಿತ್ ರಾಣಾ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. 8 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ರಾಣಾ 14 ವಿಕೆಟ್ ಕಬಳಿಸುವ ಮೂಲಕ ಮಿಂಚಿದ್ದಾರೆ. ಈ ಅದ್ಭುತ ಪ್ರದರ್ಶನದ ನಡುವೆ ಅನುಚಿತ ವರ್ತನೆ ತೋರಿದ್ದ ಯುವ ವೇಗಿಯನ್ನು ಒಂದು ಪಂದ್ಯದಿಂದ ನಿಷೇಧಿಸಲಾಗಿತ್ತು.
Updated on: May 06, 2024 | 10:53 AM

IPL 2024: ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಯುವ ವೇಗಿ ಹರ್ಷಿತ್ ರಾಣಾ (Harshit Rana) ಮತ್ತೆ ಮೈದಾನಕ್ಕಿಳಿದಿದ್ದಾರೆ. ಆದರೆ ಈ ಬಾರಿ ಫುಲ್ ಸೈಲೆಂಟ್ ಆಗಿ ಎಂಬುದಷ್ಟೇ ವ್ಯತ್ಯಾಸ. ಅಂದರೆ ಈ ಬಾರಿಯ ಐಪಿಎಲ್ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ರಾಣಾ ಸುದ್ದಿಯಾಗಿದ್ದು ಮಾತ್ರ ದಂಡದ ಶಿಕ್ಷೆಯಿಂದ.

ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಅರ್ಗರ್ವಾಲ್ ಅವರನ್ನು ಔಟ್ ಮಾಡಿದ ರಾಣಾ, ಫ್ಲೈಯಿಂಗ್ ಕಿಸ್ ನೀಡಿ ಬೀಳ್ಕೊಟ್ಟಿದ್ದರು. ಹಾಗೆಯೇ ಕೊನೆಯ ಓವರ್ನಲ್ಲಿ ಹೆನ್ರಿಕ್ ಕ್ಲಾಸೆನ್ ವಿಕೆಟ್ ಕಬಳಿಸಿದ ಬಳಿಕ ಪೆವಿಲಿಯನ್ಗೆ ತೆರಳುವಂತೆ ಕೈ ಸನ್ನೆ ಮಾಡಿದ್ದರು. ಈ ಅನುಚಿತ ವರ್ತನೆಯ ಪರಿಣಾಮ ಹರ್ಷಿತ್ ರಾಣಾ ಪಂದ್ಯ ಶುಲ್ಕದ ಶೇ. 60 ರಷ್ಟು ದಂಡ ಪಾವತಿಸಿದ್ದರು.

ಈ ದಂಡದ ಶಿಕ್ಷೆಯ ಬಳಿಕವೂ ರಾಣಾ ಬದಲಾಗಿರಲಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ವೇಳೆ ಅಭಿಷೇಕ್ ಪೊರೆಲ್ ವಿಕೆಟ್ ಕಬಳಿಸಿ ಮೈದಾನದಿಂದ ಹೊರ ನಡೆಯುವಂತೆ ಕೈ ಸನ್ನೆ ಮಾಡಿ ಸಂಭ್ರಮಿಸಿದ್ದರು. ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ರಾಣಾಗೆ ಒಂದು ಪಂದ್ಯದ ನಿಷೇಧದ ಜೊತೆಗೆ ಪಂದ್ಯದ ಶುಲ್ಕದ ಶೇ.100 ರಷ್ಟು ದಂಡ ವಿಧಿಸಲಾಗಿತ್ತು.

ಹೀಗಾಗಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಹರ್ಷಿತ್ ರಾಣಾ ಕಣಕ್ಕಿಳಿದಿರಲಿಲ್ಲ. ಇದೀಗ ಒಂದು ಪಂದ್ಯದ ನಿಷೇಧದ ಬಳಿಕ ಯುವ ವೇಗಿ ಮತ್ತೆ ಮೈದಾನಕ್ಕಿಳಿದಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದ ಹರ್ಷಿತ್ 3.1 ಓವರ್ಗಳಲ್ಲಿ 24 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ವಿಶೇಷ ಎಂದರೆ ಈ ಬಾರಿ ವಿಕೆಟ್ ಪಡೆದಾಗ ಹರ್ಷಿತ್ ರಾಣಾ ಬಾಯಿಗೆ ಬೆರಳನ್ನಿಟ್ಟು ಸೈಲೆಂಟ್ ಆಗಿ ಸಂಭ್ರಮಿಸಿದ್ದಾರೆ. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಫುಲ್ ಸೈಲೆಂಟ್ ಮೋಡ್ನಲ್ಲಿ ಕಾಣಿಸಿಕೊಂಡಿದ್ದಾರೆ.
