AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಐದನೇ ಬಾರಿ ಲೋಗೋ ಬದಲಿಸಿದ RCB

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯು ತನ್ನ ಹೆಸರು ಮತ್ತು ಲೋಗೋವನ್ನು ಬದಲಿಸಿದೆ. ಅದರಂತೆ IPL 2024 ರಲ್ಲಿ ಆರ್​ಸಿಬಿ ಹೊಸ ವಿನ್ಯಾಸದ ಲೋಗೋದೊಂದಿಗೆ ಕಣಕ್ಕಿಳಿಯಲಿದೆ. ಇದಕ್ಕೂ ಮುನ್ನ ಆರ್​ಸಿಬಿ ಐಪಿಎಲ್​ನಲ್ಲಿ 4 ಬಾರಿ ಲೋಗೋವನ್ನು ಬದಲಿಸಿಕೊಂಡಿದೆ.

TV9 Web
| Edited By: |

Updated on: Mar 20, 2024 | 7:23 AM

Share
IPL 2024: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯು ಮುಂಬರುವ ಐಪಿಎಲ್​ಗಾಗಿ ತನ್ನ ಲೋಗೋ ವಿನ್ಯಾಸವನ್ನು ಬದಲಿಸಿದೆ. ಈ ಬದಲಾವಣೆಯೊಂದಿಗೆ ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ ಹೆಸರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಬದಲಿಸಿಕೊಂಡಿದೆ.

1 / 7
ವಿಶೇಷ ಎಂದರೆ ಆರ್​ಸಿಬಿ ಫ್ರಾಂಚೈಸಿಯು ತನ್ನ ಲೋಗೋವನ್ನು ಬದಲಿಸುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ನಾಲ್ಕು ಬಾರಿ ಹೊಸ ಲೋಗೋದೊಂದಿಗೆ ಕಣಕ್ಕಿಳಿದಿದೆ. ಇದೀಗ ಐದನೇ ಬಾರಿಗೆ ಲೋಗೋ ಬದಲಿಸಿ ಕಣಕ್ಕಿಳಿಯಲು ಸಜ್ಜಾಗಿ ನಿಂತಿದೆ. ಹಾಗಿದ್ರೆ ಆರ್​ಸಿಬಿ ತಂಡದ ಈ ಹಿಂದಿನ ಲೋಗೋ ವಿನ್ಯಾಸಗಳು ಹೇಗಿದ್ದವು ಎಂದು ನೋಡೋಣ....

2 / 7
IPL 2008: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಬಾರಿ ಈ ಲೋಗೋ ವಿನ್ಯಾಸದೊಂದಿಗೆ ಕಣಕ್ಕಿಳಿದಿತ್ತು. ಅಂದು ಆರ್​ಸಿಬಿ ತನ್ನ ಲೋಗೋ ವಿನ್ಯಾಸದಲ್ಲಿ RC (ರಾಯಲ್ ಚಾಲೆಂಜರ್ಸ್) ಯನ್ನು ಎದ್ದು ಕಾಣುವಂತೆ ಚಿತ್ರಿಸಿದ್ದರು. ಅಂದರೆ ಇಲ್ಲಿ ಸಿಂಹದ ಗುರುತಿಕ್ಕಿಂತ ರಾಯಲ್ ಚಾಲೆಂಜರ್ಸ್ ಬರಹಕ್ಕೆ ಪ್ರಾಶಸ್ತ್ಯ ನೀಡಲಾಗಿತ್ತು.

3 / 7
IPL 2009-2015: ಐಪಿಎಲ್ 2009 ರಲ್ಲಿ ಆರ್​ಸಿಬಿ ತಂಡವು ಲೋಗೋ ವಿನ್ಯಾಸದಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡಿತು. ಮೊದಲ ಸೀಸನ್​ನ ಲೋಗೋವನ್ನು ಇಲ್ಲಿ ಮುಂದುವರೆಸಲಾಗಿದ್ದರೂ ಬಣ್ಣಗಳಲ್ಲಿ ಮಾರ್ಪಾಡು ಮಾಡಲಾಗಿತ್ತು. ಅಲ್ಲದೆ ಈ ಲೋಗೋದೊಂದಿಗೆ ಆರ್​ಸಿಬಿ 7 ಸೀಸನ್​ಗಳಲ್ಲಿ ಕಣಕ್ಕಿಳಿದಿರುವುದು ವಿಶೇಷ.

4 / 7
IPL 2016-2019: ಆರ್​ಸಿಬಿ ತಂಡದ ಲೋಗೋದಲ್ಲಿ ಮಹತ್ವದ ಬದಲಾವಣೆ ಕಂಡು ಬಂದಿದ್ದು 2016 ರಲ್ಲಿ. ಅಂದಿನ ಲೋಗೋದಲ್ಲಿ RC ಬದಲಿಗೆ ಸಿಂಹದ ಚಿತ್ರವನ್ನು ಹೈಲೆಟ್ ಮಾಡಲಾಗಿತ್ತು. ಈ ಲೋಗೋವನ್ನು 2019 ರವರೆಗೆ ಬಳಸಿಕೊಂಡಿತ್ತು.

5 / 7
IPL 2020-2023: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ತನ್ನ ಲೋಗೋವನ್ನು ಸಂಪೂರ್ಣವಾಗಿ ಬದಲಿಸಿದ್ದು 2020 ರಲ್ಲಿ. ಈ ಬಾರಿ ಲೋಗೋದಿಂದ RC ಬರಹವನ್ನು ತೆಗೆದುಹಾಕಿದ್ದಲ್ಲದೆ, ಸಿಂಹದ ಗುರುತನ್ನು ಹೈಲೆಟ್ ಮಾಡಿತು. ಈ ಮೂಲಕ ಈ ಹಿಂದಿನ ಮೂರು ಲೋಗೋಗಿಂತ ವಿಭಿನ್ನ ವಿನ್ಯಾಸವನ್ನು ರೂಪಿಸಿತ್ತು. ಅಲ್ಲದೆ ಕಳೆದ ಸೀಸನ್​ವರೆಗೆ ಆರ್​ಸಿಬಿ ಇದೇ ಲೋಗೋದಲ್ಲೇ ಕಣಕ್ಕಿಳಿದಿದೆ.

6 / 7
IPL 2024: ರಾಯಲ್ ಚಾಲೆಂಜರ್ಸ್ ಬ್ಯಾಂಗ್​ಲೋರ್ ಈ ಬಾರಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಹೆಸರಿನೊಂದಿಗೆ ಕಣಕ್ಕಿಳಿಯಲಿದೆ. ಇಲ್ಲಿ ಹೆಸರಿನೊಂದಿಗೆ ಲೋಗೋ ವಿನ್ಯಾಸದಲ್ಲೂ ಮಹತ್ವದ ಬದಲಾವಣೆಯಾಗಿದೆ. ಅಂದರೆ ಇದೇ ಮೊದಲ ಬಾರಿಗೆ ಆರ್​ಸಿಬಿ ತನ್ನ ಲೋಗೋದಲ್ಲಿ RCB ಎಂದು ಬರೆದುಕೊಂಡಿದೆ. ಹಾಗೆಯೇ ಈ ಹಿಂದಿನ ಟ್ರೇಡ್ ಮಾರ್ಕ್ ವಿನ್ಯಾಸ ಸಿಂಹ ಘರ್ಜನೆಯನ್ನು ಇಲ್ಲೂ ಕೂಡ ಮುಂದುವರೆಸಲಾಗಿದೆ.

7 / 7
Follow Us
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ

ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್

ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ

ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್

ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ

ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್

BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ

ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ

ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ

ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ