IPL 2024: ಸಿಕ್ಸ್ಗಳ ಸುರಿಮಳೆ: ಕ್ರಿಸ್ ಗೇಲ್ ಸಾರ್ವಕಾಲಿಕ ದಾಖಲೆ ಶೇಕಿಂಗ್
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2024) 17ನೇ ಆವೃತ್ತಿಯಲ್ಲಿ ಹೆನ್ರಿಕ್ ಕ್ಲಾಸೆನ್ 24 ಸಿಕ್ಸ್ಗಳನ್ನು ಬಾರಿಸಿದ್ದಾರೆ. ಇನ್ನು ದ್ವಿತೀಯ ಸ್ಥಾನದಲ್ಲಿ 20 ಸಿಕ್ಸ್ಗಳನ್ನು ಸಿಡಿಸಿರುವ ಸುನಿಲ್ ನರೈನ್ ಹಾಗೂ ರಿಯಾನ್ ಪರಾಗ್ ಇದ್ದಾರೆ. ಹಾಗೆಯೇ ನಿಕೋಲಸ್ ಪೂರನ್ 19 ಸಿಕ್ಸ್ಗಳನ್ನು ಸಿಡಿಸಿದರೆ, ದಿನೇಶ್ ಕಾರ್ತಿಕ್ 18 ಸಿಕ್ಸ್ಗಳನ್ನು ಬಾರಿಸಿದ್ದಾರೆ.
Updated on: Apr 18, 2024 | 2:27 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್-17 ರಲ್ಲಿ ಸಿಕ್ಸರ್ಗಳ ಸುರಿಮಳೆಯಾಗುತ್ತಿದೆ. ಮೊದಲಾರ್ಧದ ಪಂದ್ಯಗಳ ಮುಕ್ತಾಯಕ್ಕೂ ಮುನ್ನ 500 ಕ್ಕೂ ಹೆಚ್ಚು ಸಿಕ್ಸ್ಗಳು ಮೂಡಿಬಂದಿವೆ. ಹೀಗಾಗಿ ಈ ಬಾರಿ ಕೂಡ 1000 ಕ್ಕಿಂತಲೂ ಹೆಚ್ಚಿನ ಸಿಕ್ಸ್ಗಳನ್ನು ನಿರೀಕ್ಷಿಸಬಹುದು.

ಹೀಗೆ ಸಿಕ್ಸ್ಗಳ ಸುರಿಮಳೆಗೈಯ್ಯುತ್ತಿರುವ ಬ್ಯಾಟರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಸನ್ರೈಸರ್ಸ್ ಹೈದರಾಬಾದ್ ತಂಡದ ಸ್ಪೋಟಕ ದಾಂಡಿಗ ಹೆನ್ರಿಕ್ ಕ್ಲಾಸೆನ್. ಕೇವಲ 6 ಇನಿಂಗ್ಸ್ಗಳಲ್ಲೇ ಕ್ಲಾಸೆನ್ ಒಟ್ಟು 24 ಸಿಕ್ಸ್ಗಳನ್ನು ಬಾರಿಸಿ ಅಬ್ಬರಿಸಿದ್ದಾರೆ. ಇದರ ಬೆನ್ನಲ್ಲೇ ಕ್ರಿಸ್ ಗೇಲ್ ಹೆಸರಿನಲ್ಲಿರುವ ಸಿಕ್ಸರ್ ಕಿಂಗ್ ದಾಖಲೆಯನ್ನು ಕ್ಲಾಸೆನ್ ಅಳಿಸಿ ಹಾಕುತ್ತಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಅಂದರೆ ಐಪಿಎಲ್ ಸೀಸನ್ವೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. 2012 ರ ಐಪಿಎಲ್ ಸೀಸನ್ನಲ್ಲಿ ಯೂನಿವರ್ಸ್ ಬಾಸ್ ಗೇಲ್ ಬರೋಬ್ಬರಿ 59 ಸಿಕ್ಸ್ಗಳನ್ನು ಬಾರಿಸಿದ್ದರು. ಈ ಮೂಲಕ ಸೀಸನ್ವೊಂದರಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ.

ಇದೀಗ ಕೇವಲ 6 ಪಂದ್ಯಗಳ ಮೂಲಕ ಹೆನ್ರಿಕ್ ಕ್ಲಾಸೆನ್ 24 ಸಿಕ್ಸ್ಗಳನ್ನು ಸಿಡಿಸಿದ್ದಾರೆ. ಇನ್ನು ಲೀಗ್ ಹಂತದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ 8 ಪಂದ್ಯಗಳಿವೆ. ಈ ಪಂದ್ಯಗಳಲ್ಲೂ ಕ್ಲಾಸೆನ್ ಕಡೆಯಿಂದ ಸಿಕ್ಸರ್ಗಳ ಸುರಿಮಳೆಯನ್ನು ನಿರೀಕ್ಷಿಸಬಹುದು.

ಒಂದು ವೇಳೆ ಸನ್ರೈಸರ್ಸ್ ಹೈದರಾಬಾದ್ ತಂಡವು ಪ್ಲೇಆಫ್ ಹಂತಕ್ಕೇರಿದರೆ ಕ್ಲಾಸೆನ್ ಮತ್ತಷ್ಟು ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಬಹುದು. ಹೀಗಾಗಿಯೇ ಈ ಬಾರಿಯ ಐಪಿಎಲ್ ಮೂಲಕ ಹೆನ್ರಿಕ್ ಕ್ಲಾಸೆನ್ 2012 ರಲ್ಲಿ ಕ್ರಿಸ್ ಗೇಲ್ ಬರೆದ ಸಿಕ್ಸರ್ಗಳ ದಾಖಲೆಯನ್ನು ಮುರಿದರೂ ಅಚ್ಚರಿಪಡಬೇಕಿಲ್ಲ.

TV9 Kannada
Read More



