ಬಾಬರ್ ಆಝಂ IPLನಲ್ಲಿ 130 ರೂ.ಗೂ ಹರಾಜಾಗಲ್ಲ… ಪಾಕ್ ನಾಯಕ ಫುಲ್ ಟ್ರೋಲ್
Babar Azam: ಪಾಕಿಸ್ತಾನ್ ಆಟಗಾರರಿಗೆ ಐಪಿಎಲ್ನಲ್ಲಿ ಕಾಣಿಸಿಕೊಳ್ಳಲು ಅವಕಾಶವಿಲ್ಲ. ಇದಾಗ್ಯೂ ಪಾಕ್ ತಂಡದ ನಾಯಕ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡರೆ ಎಷ್ಟು ರೂ.ಗೆ ಹರಾಜಾಗಬಹುದು ಎಂದು ಪಾಕಿಸ್ತಾನದ ಕ್ರೀಡಾ ವಿಶ್ಲೇಷಕರೊಬ್ಬರು ವಿಮರ್ಶಿಸಿದ್ದಾರೆ. ಈ ವಿಮರ್ಶೆಯೇ ಇದೀಗ ಭಾರೀ ವೈರಲ್ ಆಗಿದ್ದು, ಪಾಕ್ ನಾಯಕನ ಟ್ರೋಲ್ಗೆ ಕಾರಣವಾಗಿದೆ.
Updated on: Sep 07, 2024 | 12:09 PM

ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಫುಲ್ ಟ್ರೋಲ್ಗೆ ಒಳಗಾಗಿದ್ದಾರೆ. ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ಅವರನ್ನು ಇದೀಗ ಪಾಕ್ ಅಭಿಮಾನಿಗಳೇ ಹೀಯಾಳಿಸುತ್ತಿದ್ದಾರೆ. ಅದರಲ್ಲೂ ಪಾಕಿಸ್ತಾನದ ಕ್ರಿಕೆಟ್ ವಿಶ್ಲೇಷಕರಾದ ವಸೇ ಹಬೀಬ್ ಒಂದು ಹೆಜ್ಜೆ ಮುಂದೆ ಹೋಗಿ ಬಾಬರ್ ಆಝಂ ಅವರ ಐಪಿಎಲ್ ಹರಾಜು ಮೊತ್ತವನ್ನು ಸಹ ಘೋಷಿಸಿದ್ದಾರೆ.

ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬಾಬರ್ 4 ಇನಿಂಗ್ಸ್ಗಳಿಂದ ಕಲೆಹಾಕಿದ್ದು ಕೇವಲ 64 ರನ್ಗಳು ಮಾತ್ರ. ತವರಿನಲ್ಲೇ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿರುವ ಬಾಬರ್ ಆಝಂ ಐಪಿಎಲ್ನಲ್ಲಿ ಕಾಣಿಸಿಕೊಂಡರೆ 130 ರೂ.ಗೂ ಕೂಡ ಹರಾಜಾಗಲ್ಲ ಎಂದು ಕ್ರಿಕೆಟ್ ವಿಶ್ಲೇಷಕರಾದ ವಸೇ ಹಬೀಬ್ ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ.

ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಪಾಕ್ ತಂಡದ ನಾಯಕನ ಬೆಲೆ ಕೇವಲ 130 ರೂ. ಎಂದು ಟ್ರೋಲ್ ಮಾಡಲಾಗುತ್ತಿದೆ. ಅಂದಹಾಗೆ ಪಾಕ್ ಕ್ರಿಕೆಟ್ ಪ್ರೇಮಿಗಳ ಈ ಆಕ್ರೋಶಕ್ಕೆ ಕಾರಣ ಬಾಬರ್ ಆಝಂ ಅವರ ಹೀನಾಯ ಪ್ರದರ್ಶನ.

ಏಕೆಂದರೆ ಬಾಬರ್ ಆಝಂ ಪಾಕಿಸ್ತಾನ್ ಪರ ಟೆಸ್ಟ್ನಲ್ಲಿ ಅರ್ಧಶತಕ ಸಿಡಿಸಿ 2 ವರ್ಷಗಳೇ ಕಳೆದಿವೆ. ಇದಾಗ್ಯೂ ಸತತವಾಗಿ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ಇದೀಗ ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ 4 ಇನಿಂಗ್ಸ್ಗಳಿಂದ ಕೇವಲ 64 ರನ್ ಕಲೆಹಾಕಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಇದೇ ಕಾರಣದಿಂದಾಗಿ ವಸೇ ಹಬೀಬ್ ತಮ್ಮ ಯುಟ್ಯೂಬ್ ಚಾನೆಲ್ನಲ್ಲಿ ಬಾಬರ್ ಆಝಂ ಮೌಲ್ಯರಹಿತ ಆಟಗಾರ ಎಂದು ವಿಮರ್ಶಿಸಿದ್ದಾರೆ.

ಈ ವಿಮರ್ಶೆಯ ನಡುವೆ ಬಾಬರ್ ಆಝಂ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡರೆ 130 ರೂ. ಕೂಡ ಸಿಗಲ್ಲ ಎನ್ನುವ ಮೂಲಕ ಅಪಹಾಸ್ಯ ಮಾಡಿದ್ದಾರೆ. ಪಾಕ್ ಕ್ರಿಕೆಟ್ ವಿಮರ್ಶಕನ ಈ ಹೇಳಿಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಮೂಲಕ ಸಂಚಲನ ಸೃಷ್ಟಿಸಿದೆ.

ಅಂದಹಾಗೆ ಪಾಕಿಸ್ತಾನ್ ಆಟಗಾರರಿಗೆ ಐಪಿಎಲ್ನಲ್ಲಿ ಅವಕಾಶ ನೀಡಲಾಗುತ್ತಿಲ್ಲ. 2008 ರಲ್ಲಿ ನಡೆದ ಮುಂಬೈ ಮೇಲೆ ನಡೆದ ಪಾಕ್ ಪ್ರೇರಿತ ಉಗ್ರರ ದಾಳಿಯ ಬಳಿಕ ಪಾಕಿಸ್ತಾನ್ ಆಟಗಾರರನ್ನು ಐಪಿಎಲ್ನಿಂದ ನಿಷೇಧಿಸಲಾಗಿದೆ. ಪಾಕ್ ಆಟಗಾರರ ಮೇಲಿನ ಈ ಬ್ಯಾನ್ ಈಗಲೂ ಮುಂದುವರೆದಿದ್ದು, ಪಾಕಿಸ್ತಾನ್ ಪ್ಲೇಯರ್ಸ್ ಐಪಿಎಲ್ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
