ಬಾಬರ್ ಆಝಂ ​IPLನಲ್ಲಿ 130 ರೂ.ಗೂ ಹರಾಜಾಗಲ್ಲ… ಪಾಕ್​ ನಾಯಕ ಫುಲ್ ಟ್ರೋಲ್

Babar Azam: ಪಾಕಿಸ್ತಾನ್ ಆಟಗಾರರಿಗೆ ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲು ಅವಕಾಶವಿಲ್ಲ. ಇದಾಗ್ಯೂ ಪಾಕ್ ತಂಡದ ನಾಯಕ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡರೆ ಎಷ್ಟು ರೂ.ಗೆ ಹರಾಜಾಗಬಹುದು ಎಂದು ಪಾಕಿಸ್ತಾನದ ಕ್ರೀಡಾ ವಿಶ್ಲೇಷಕರೊಬ್ಬರು ವಿಮರ್ಶಿಸಿದ್ದಾರೆ. ಈ ವಿಮರ್ಶೆಯೇ ಇದೀಗ ಭಾರೀ ವೈರಲ್ ಆಗಿದ್ದು, ಪಾಕ್ ನಾಯಕನ ಟ್ರೋಲ್​ಗೆ ಕಾರಣವಾಗಿದೆ.

|

Updated on: Sep 07, 2024 | 12:09 PM

ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಫುಲ್ ಟ್ರೋಲ್​ಗೆ ಒಳಗಾಗಿದ್ದಾರೆ. ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ಅವರನ್ನು ಇದೀಗ ಪಾಕ್​ ಅಭಿಮಾನಿಗಳೇ ಹೀಯಾಳಿಸುತ್ತಿದ್ದಾರೆ. ಅದರಲ್ಲೂ ಪಾಕಿಸ್ತಾನದ ಕ್ರಿಕೆಟ್​ ವಿಶ್ಲೇಷಕರಾದ ವಸೇ ಹಬೀಬ್ ಒಂದು ಹೆಜ್ಜೆ ಮುಂದೆ ಹೋಗಿ ಬಾಬರ್​ ಆಝಂ ಅವರ ಐಪಿಎಲ್ ಹರಾಜು ಮೊತ್ತವನ್ನು ಸಹ ಘೋಷಿಸಿದ್ದಾರೆ.

1 / 6
ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಬಾಬರ್ 4 ಇನಿಂಗ್ಸ್​ಗಳಿಂದ ಕಲೆಹಾಕಿದ್ದು ಕೇವಲ 64 ರನ್​ಗಳು ಮಾತ್ರ. ತವರಿನಲ್ಲೇ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿರುವ ಬಾಬರ್ ಆಝಂ ಐಪಿಎಲ್​ನಲ್ಲಿ ಕಾಣಿಸಿಕೊಂಡರೆ 130 ರೂ.ಗೂ ಕೂಡ ಹರಾಜಾಗಲ್ಲ ಎಂದು ಕ್ರಿಕೆಟ್ ವಿಶ್ಲೇಷಕರಾದ ವಸೇ ಹಬೀಬ್ ಸೋಷಿಯಲ್ ಮೀಡಿಯಾ​ದಲ್ಲಿ ಹೇಳಿದ್ದಾರೆ.

2 / 6
ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಪಾಕ್ ತಂಡದ ನಾಯಕನ ಬೆಲೆ ಕೇವಲ 130 ರೂ. ಎಂದು ಟ್ರೋಲ್ ಮಾಡಲಾಗುತ್ತಿದೆ. ಅಂದಹಾಗೆ ಪಾಕ್ ಕ್ರಿಕೆಟ್ ಪ್ರೇಮಿಗಳ ಈ ಆಕ್ರೋಶಕ್ಕೆ ಕಾರಣ ಬಾಬರ್ ಆಝಂ ಅವರ ಹೀನಾಯ ಪ್ರದರ್ಶನ.

3 / 6
ಏಕೆಂದರೆ ಬಾಬರ್ ಆಝಂ ಪಾಕಿಸ್ತಾನ್ ಪರ ಟೆಸ್ಟ್​ನಲ್ಲಿ ಅರ್ಧಶತಕ ಸಿಡಿಸಿ 2 ವರ್ಷಗಳೇ ಕಳೆದಿವೆ. ಇದಾಗ್ಯೂ ಸತತವಾಗಿ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ಇದೀಗ ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ 4 ಇನಿಂಗ್ಸ್​ಗಳಿಂದ ಕೇವಲ 64 ರನ್ ಕಲೆಹಾಕಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಇದೇ ಕಾರಣದಿಂದಾಗಿ ವಸೇ ಹಬೀಬ್ ತಮ್ಮ ಯುಟ್ಯೂಬ್ ಚಾನೆಲ್​ನಲ್ಲಿ ಬಾಬರ್ ಆಝಂ ಮೌಲ್ಯರಹಿತ ಆಟಗಾರ ಎಂದು ವಿಮರ್ಶಿಸಿದ್ದಾರೆ.

4 / 6
ಈ ವಿಮರ್ಶೆಯ ನಡುವೆ ಬಾಬರ್ ಆಝಂ ಐಪಿಎಲ್​ ಹರಾಜಿನಲ್ಲಿ ಕಾಣಿಸಿಕೊಂಡರೆ 130 ರೂ. ಕೂಡ ಸಿಗಲ್ಲ ಎನ್ನುವ ಮೂಲಕ ಅಪಹಾಸ್ಯ ಮಾಡಿದ್ದಾರೆ. ಪಾಕ್ ಕ್ರಿಕೆಟ್ ವಿಮರ್ಶಕನ ಈ ಹೇಳಿಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಮೂಲಕ ಸಂಚಲನ ಸೃಷ್ಟಿಸಿದೆ.

5 / 6
ಅಂದಹಾಗೆ ಪಾಕಿಸ್ತಾನ್ ಆಟಗಾರರಿಗೆ ಐಪಿಎಲ್​ನಲ್ಲಿ ಅವಕಾಶ ನೀಡಲಾಗುತ್ತಿಲ್ಲ. 2008 ರಲ್ಲಿ ನಡೆದ ಮುಂಬೈ ಮೇಲೆ ನಡೆದ ಪಾಕ್ ಪ್ರೇರಿತ ಉಗ್ರರ ದಾಳಿಯ ಬಳಿಕ ಪಾಕಿಸ್ತಾನ್ ಆಟಗಾರರನ್ನು ಐಪಿಎಲ್​ನಿಂದ ನಿಷೇಧಿಸಲಾಗಿದೆ. ಪಾಕ್ ಆಟಗಾರರ ಮೇಲಿನ ಈ ಬ್ಯಾನ್ ಈಗಲೂ ಮುಂದುವರೆದಿದ್ದು, ಪಾಕಿಸ್ತಾನ್ ಪ್ಲೇಯರ್ಸ್ ಐಪಿಎಲ್​ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

6 / 6
Follow us