AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಕೆಎಲ್ ರಾಹುಲ್​ಗೆ 7 ಕೋಟಿ, ಜಿತೇಶ್ ಶರ್ಮಾಗೆ 11 ಕೋಟಿ: RCB ಅಚ್ಚರಿಯ ನಿರ್ಧಾರ

IPL 2025 Auction: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಮೆಗಾ ಹರಾಜಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಜಿತೇಶ್ ಶರ್ಮಾ ಅವರನ್ನು ಖರೀದಿಸಿದೆ. ಅದು ಕೂಡ 11 ಕೋಟಿ ರೂ. ನೀಡುವ ಮೂಲಕ ಎಂಬುದೇ ಅಚ್ಚರಿ. ಅತ್ತ ಕೆಎಲ್ ರಾಹುಲ್ ಖರೀದಿಗೆ ಆರ್​ಸಿಬಿ ನಿರಾಸಕ್ತಿ ತೋರಿರುವುದು ಇದೀಗ ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ.

ಝಾಹಿರ್ ಯೂಸುಫ್
|

Updated on:Nov 25, 2024 | 8:30 AM

Share
ಐಪಿಎಲ್ ಮೆಗಾ ಹರಾಜಿನ ಮೊದಲ ದಿನದ ಬಿಡ್ಡಿಂಗ್​ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಒಟ್ಟು 6 ಆಟಗಾರರನ್ನು ಖರೀದಿಸಿದೆ. ಈ ಆರು ಆಟಗಾರರಲ್ಲಿ ಮೂವರು ಭಾರತೀಯರು, ಮೂವರು ವಿದೇಶಿ ಆಟಗಾರರಿದ್ದಾರೆ.

1 / 6
ಇವರಲ್ಲಿ ಅತ್ಯಧಿಕ ಮೊತ್ತ ಪಡೆದ ಭಾರತೀಯ ಆಟಗಾರನೆಂದರೆ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ. ಕಳೆದ ಸೀಸನ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಜಿತೇಶ್ ಶರ್ಮಾ ಅವರನ್ನು ಈ ಬಾರಿ ಆರ್​ಸಿಬಿ ಬರೋಬ್ಬರಿ 11 ಕೋಟಿ ರೂ. ನೀಡಿ ಖರೀದಿಸಿದೆ.

2 / 6
ಇಲ್ಲಿ ಇಂಟ್ರೆಸ್ಟಿಂಗ್ ವಿಷಯ ಎಂದರೆ, ಕೆಎಲ್ ರಾಹುಲ್ ಅವರ ಖರೀದಿಗೆ ಆರ್​ಸಿಬಿ ಹೆಚ್ಚಿನ ಆಸಕ್ತಿವಹಿಸದಿರುವುದು. ಅಂದರೆ ಮೊದಲ ಸುತ್ತಿನಲ್ಲಿ ಒಂದಷ್ಟು ಬಿಡ್ಡಿಂಗ್ ನಡೆಸಿದ ಆರ್​ಸಿಬಿ ಕೆಎಲ್ ರಾಹುಲ್ ಅವರ ಮೌಲ್ಯ 7 ಕೋಟಿ ರೂ. ದಾಟುತ್ತಿದ್ದಂತೆ ಬಿಡ್ಡಿಂಗ್ ನಿಲ್ಲಿಸಿದ್ದರು.

3 / 6
ಅಂದರೆ ಕೆಎಲ್ ರಾಹುಲ್​ಗಾಗಿ 7 ಕೋಟಿ ರೂ.ಗಿಂತ ಅಧಿಕ ಮೊತ್ತ ವ್ಯಯಿಸಲು ಆರ್​ಸಿಬಿ ಮುಂದಾಗಲಿಲ್ಲ. ಆದರೆ ಅಚ್ಚರಿ ಎಂದರೆ, ಇದೇ ಆರ್​ಸಿಬಿ ಜಿತೇಶ್ ಶರ್ಮಾ ಅವರನ್ನು ಬರೋಬ್ಬರಿ 11 ಕೋಟಿ ರೂ. ನೀಡಿ ಖರೀದಿಸಿದರು. ಇಲ್ಲಿ ಎಲ್ಲಾ ರೀತಿಯಲ್ಲೂ ಜಿತೇಶ್ ಶರ್ಮಾಗಿಂತ ಕೆಎಲ್ ರಾಹುಲ್ ಉತ್ತಮ ಆಯ್ಕೆಯಾಗಿತ್ತು.

4 / 6
ಇದಾಗ್ಯೂ ಆರ್​ಸಿಬಿ ಆಕ್ಷನ್ ಬಳಗವು ರಾಹುಲ್​ ಖರೀದಿಗಾಗಿ ಹೆಚ್ಚಿನ ಆಸಕ್ತಿವಹಿಸದಿರುವುದು ಅಚ್ಚರಿಕೆಗೆ ಕಾರಣವಾಗಿತ್ತು. ಒಂದು ವೇಳೆ ಆರ್​ಸಿಬಿ ಜಿತೇಶ್ ಶರ್ಮಾಗೆ ವ್ಯಯಿಸಿದ 11 ಕೋಟಿ ರೂ.ಗಿಂತ ಒಂದೆರಡು ಕೋಟಿ ರೂ. ಹೆಚ್ಚು ನೀಡಿದ್ದರೂ ರಾಹುಲ್ ಆರ್​ಸಿಬಿ ಪಾಲಾಗುತ್ತಿತ್ತು.

5 / 6
ಏಕೆಂದರೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಕೆಎಲ್ ರಾಹುಲ್ ಅವರನ್ನು ಖರೀದಿಸಿದ್ದು 14 ಕೋಟಿ ರೂ.ಗೆ. ಆರ್​ಸಿಬಿ ಫ್ರಾಂಚೈಸಿಯು ನಿರಾಸಕ್ತಿ ತೋರಿದ್ದರಿಂದ ಇದೀಗ ತವರಿನ ತಂಡದ ಪರ ಮತ್ತೆ ಕಣಕ್ಕಿಳಿಯಬೇಕೆಂಬ ಕೆಎಲ್ ರಾಹುಲ್ ಅವರ ಕನಸು ಕಮರಿದೆ. ಇತ್ತ ಕನ್ನಡಿಗನನ್ನು ಮತ್ತೆ ಆರ್​ಸಿಬಿ ತಂಡದಲ್ಲಿ ನೋಡಬೇಕೆಂಬ ಕನ್ನಡಿಗರ ಆಸೆಗೂ ತೆರೆಬಿದ್ದಂತಾಗಿದೆ.

6 / 6

Published On - 8:29 am, Mon, 25 November 24

ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್

ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್

ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!

ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ

ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ

ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ

ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್

ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?

ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?