AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: RCB ತಂಡಕ್ಕೆ ಕೆರಿಬಿಯನ್ ದೈತ್ಯ ಎಂಟ್ರಿ

IPL 2025 RCB: ಈ ಬಾರಿಯ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈವರೆಗೆ 11 ಪಂದ್ಯಗಳನ್ನಾಡಿದೆ. ಈ 11 ಮ್ಯಾಚ್​ಗಳಲ್ಲಿ ಆರ್​ಸಿಬಿ 8 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಈ ಮೂಲಕ ಒಟ್ಟು 16 ಅಂಕಗಳನ್ನು ಹೊಂದಿರುವ ರಾಯಲ್ ಪಡೆಯು ಮುಂದಿನ ಪಂದ್ಯದಲ್ಲಿ ಜಯ ಸಾಧಿಸಿದರೆ ಪ್ಲೇಆಫ್​ಗೆ ಎಂಟ್ರಿ ಕೊಡಲಿದೆ.

ಝಾಹಿರ್ ಯೂಸುಫ್
|

Updated on: May 15, 2025 | 8:32 AM

Share
IPL 2025: ಐಪಿಎಲ್ ಸೀಸನ್​​-18ರ ದ್ವಿತೀಯಾರ್ಧದ ಪಂದ್ಯವು ಮೇ 17 ರಿಂದ ಶುರುವಾಗಲಿದೆ. ಶನಿವಾರ ಆರಂಭವಾಗಲಿರುವ ಪಂದ್ಯಾವಳಿಯ ಮೊದಲ ಮ್ಯಾಚ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕಾಗಿ ಈಗಾಗಲೇ ಆರ್​ಸಿಬಿ ತಂಡದ ಮೂವರು ವಿದೇಶಿ ಆಟಗಾರರು ಆಗಮಿಸಿದ್ದಾರೆ.

1 / 6
ಭಾರತ ಮತ್ತು ಪಾಕ್ ನಡುವಣ ಯುದ್ಧ ಭೀತಿ ಹಿನ್ನಲೆಯಲ್ಲಿ ತವರಿಗೆ ತೆರಳಿದ್ದ ವೆಸ್ಟ್ ಇಂಡೀಸ್​ನ ಸ್ಪೋಟಕ ದಾಂಡಿಗ ರೊಮಾರಿಯೊ ಶೆಫರ್ಡ್​ ಬುಧವಾರ ಭಾರತಕ್ಕೆ ಹಿಂತಿರುಗಿದ್ದಾರೆ. ಹೀಗಾಗಿ ಆರ್​ಸಿಬಿ ತಂಡದ ಮುಂದಿನ ಪಂದ್ಯದಲ್ಲಿ ಕೆರಿಬಿಯನ್ ದೈತ್ಯ ಕಾಣಿಸಿಕೊಳ್ಳುವುದು ಖಚಿತ ಎನ್ನಬಹುದು.

2 / 6
ಇನ್ನು ಇಂಗ್ಲೆಂಡ್​ ಆಟಗಾರರಾದ ಲಿಯಾಮ್ ಲಿವಿಂಗ್​ಸ್ಟೋನ್ ಹಾಗೂ ಜೇಕಬ್ ಬೆಥೆಲ್ ಕೂಡ ಆರ್​ಸಿಬಿ ತಂಡವನ್ನು ಕೂಡಿಕೊಂಡಿದ್ದಾರೆ. ಈ ಇಬ್ಬರು ಆಟಗಾರರು ಕೂಡ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ವೇಳೆ ಲಭ್ಯರಿರಲಿದ್ದಾರೆ. ಹೀಗಾಗಿ ಕೆಕೆಆರ್​ ವಿರುದ್ಧ ಆರ್​ಸಿಬಿ ಪರ ಬೆಥೆಲ್ ಇನಿಂಗ್ಸ್ ಆರಂಭಿಸುವುದನ್ನು ಎದುರು ನೋಡಬಹುದು.

3 / 6
ಇದಾಗ್ಯೂ ಎರಡು ಪಂದ್ಯಗಳ ಬಳಿಕ ಜೇಕಬ್ ಬೆಥೆಲ್ ಹಾಗೂ ರೊಮಾರಿಯೊ ಶೆಫರ್ಡ್ ತವರಿಗೆ ಹಿಂತಿರುವ ಸಾಧ್ಯತೆಯಿದೆ. ಏಕೆಂದರೆ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಣ ಏಕದಿನ ಸರಣಿ ಮೇ 29 ರಿಂದ ಶುರುವಾಗಲಿದೆ. ಈ ಸರಣಿಗಾಗಿ ಬೆಥೆಲ್ ಹಾಗೂ ಶೆಫರ್ಡ್ ಮೇ 25ರ ಬಳಿಕ ಇಂಗ್ಲೆಂಡ್​ಗೆ ತೆರಳುವ ಸಾಧ್ಯತೆಯಿದೆ.

4 / 6
ಇನ್ನು ಲಿಯಾಮ್ ಲಿವಿಂಗ್​​ಸ್ಟೋನ್ ಆರ್​ಸಿಬಿ ತಂಡದಲ್ಲೇ ಉಳಿಯಲಿದ್ದಾರೆ. ಏಕೆಂದರೆ ಈ ಬಾರಿ ಲಿವಿಂಗ್​ಸ್ಟೋನ್​ಗೆ ಇಂಗ್ಲೆಂಡ್ ತಂಡದಲ್ಲಿ  ಸ್ಥಾನ ಲಭಿಸಿಲ್ಲ. ಹೀಗಾಗಿ ಆವರು ಆರ್​ಸಿಬಿ ತಂಡದ ಜೊತೆ ಟೂರ್ನಿ ಮುಕ್ತಾಯದವರೆಗೆ ಕಾಣಿಸಿಕೊಳ್ಳಲಿದ್ದಾರೆ. ಇದಾಗ್ಯೂ ಫಿಲ್ ಸಾಲ್ಟ್ ಅವರ ಲಭ್ಯತೆಯ ಬಗ್ಗೆ ಯಾವುದೇ ಖಚಿತತೆ ಇಲ್ಲ.

5 / 6
ಏಕೆಂದರೆ ಸಾಲ್ಟ್ ಅನಾರೋಗ್ಯದ ಕಾರಣ ಐಪಿಎಲ್​ನ ಕೆಲ ಪಂದ್ಯಗಳಿಂದ ಹೊರಗುಳಿದಿದ್ದರು. ಇದೀಗ ಇಂಗ್ಲೆಂಡ್​ಗೆ ತೆರಳಿರುವ ಅವರು ವಾಪಾಸಾಗಲಿದ್ದಾರಾ ಎಂಬುದೇ ಪ್ರಶ್ನೆ. ಒಂದು ವೇಳೆ ಸಾಲ್ಟ್ ಮರಳಿದರೆ, ಆರ್​ಸಿಬಿ ತಂಡದ ಎಲ್ಲಾ ಪಂದ್ಯಗಳಿಗೂ ಲಭ್ಯರಿರಲಿದ್ದಾರೆ. ಏಕೆಂದರೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಫಿಲ್ ಸಾಲ್ಟ್ ಕೂಡ ಆಯ್ಕೆಯಾಗಿಲ್ಲ. 

6 / 6
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ

2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ

ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ

ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್