IPL 2026: ಐಪಿಎಲ್ ಹರಾಜಿಗೆ 1355 ಹೆಸರು ರಿಜಿಸ್ಟರ್: ಎಷ್ಟು ಮಂದಿಗೆ ಸಿಗಲಿದೆ ಚಾನ್ಸ್?
IPL 2026: ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2026) ಸೀಸನ್-19ರ ಮಿನಿ ಆಕ್ಷನ್ ಪ್ರಕ್ರಿಯೆ ಡಿಸೆಂಬರ್ 16 ರಂದು ನಡೆಯಲಿದೆ. ಯುಎಇನ ಅಬುಧಾಬಿಯಲ್ಲಿ ನಡೆಯಲಿರುವ ಈ ಹರಾಜಿಗಾಗಿ ದೇಶ-ವಿದೇಶದ ಬರೋಬ್ಬರಿ 1355 ಆಟಗಾರರು ಹೆಸರು ರಿಜಿಸ್ಟರ್ ಮಾಡಿಕೊಂಡಿದ್ದಾರೆ.
Updated on:Dec 02, 2025 | 7:56 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರ ಮಿನಿ ಹರಾಜಿಗಾಗಿ ಬರೋಬ್ಬರಿ 1355 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಕೆಲವರಿಗೆ ಮಾತ್ರ ಈ ಬಾರಿ ಅವಕಾಶ ದೊರೆಯಲಿದೆ. ಏಕೆಂದರೆ ಈ ಬಾರಿ ನಡೆಯುತ್ತಿರುವುದು ಮಿನಿ ಹರಾಜು.

1355 ಆಟಗಾರರ ಪಟ್ಟಿಯನ್ನು ಶೀಘ್ರದಲ್ಲೇ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಅದರಂತೆ ಈ ಬಾರಿಯ ಹರಾಜಿನಲ್ಲಿ 400 ರಿಂದ 500 ಆಟಗಾರರ ಹೆಸರು ಮಾತ್ರ ಕಾಣಿಸಿಕೊಳ್ಳಲಿದೆ. ಏಕೆಂದರೆ 10 ಫ್ರಾಂಚೈಸಿಗಳು ಈಗಾಗಲೇ 173 ಆಟಗಾರರನ್ನು ರಿಟೈನ್ ಮಾಡಿಕೊಂಡಿದ್ದಾರೆ. ಇನ್ನುಳಿದಿರುವುದು ಕೇವಲ 77 ಸ್ಲಾಟ್ ಗಳು ಮಾತ್ರ. ಅಂದರೆ 77 ಸ್ಥಾನಗಳಿಗೆ ಬರೋಬ್ಬರಿ 1355 ಆಟಗಾರರು ಹೆಸರು ರಿಜಿಸ್ಟರ್ ಮಾಡಿಕೊಂಡಿದ್ದಾರೆ.

ಇನ್ನು ಈ 77 ಸ್ಥಾನಗಳಲ್ಲಿ 31 ವಿದೇಶಿ ಆಟಗಾರರ ಸ್ಲಾಟ್ ಗಳು ಖಾಲಿಯಿವೆ. ಅಂದರೆ ಈ ಬಾರಿಯ ಹರಾಜಿನಲ್ಲಿ ಗರಿಷ್ಠ 31 ಫಾರಿನ್ ಪ್ಲೇಯರ್ಸ್ಗೆ ಮಾತ್ರ ಅವಕಾಶ ದೊರೆಯಲಿದೆ. ಹಾಗೆಯೇ ಗರಿಷ್ಠ 46 ಭಾರತೀಯ ಆಟಗಾರರಿಗೆ ಅವಕಾಶ ಸಿಗಬಹುದು.

ಐಪಿಎಲ್ ನಿಯಮ ಪ್ರಕಾರ, ಒಂದು ತಂಡದಲ್ಲಿ ಕನಿಷ್ಠ 18 ಆಟಗಾರರು ಇರಬೇಕು. ಗರಿಷ್ಠ 25 ಆಟಗಾರರನ್ನು ಹೊಂದಬಹುದು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಎಲ್ಲಾ ಫ್ರಾಂಚೈಸಿಗಳು ಗರಿಷ್ಠ 25 ಆಟಗಾರರ ತಂಡವನ್ನು ರೂಪಿಸಿದರೆ ಮಾತ್ರ 71 ಪ್ಲೇಯರ್ಸ್ ಗಳಿಗೆ ಚಾನ್ಸ್ ಸಿಗಲಿದೆ.

ಹೀಗಾಗಿ ಇಲ್ಲಿ 71 ಸ್ಲಾಟ್ ಗಳಿಗೂ ಆಟಗಾರರು ಆಯ್ಕೆಯಾಗಲಿದ್ದಾರೆ ಎಂದೇಳಲು ಸಾಧ್ಯವಿಲ್ಲ. ಏಕೆಂದರೆ ಕಳೆದ ಸೀಸನ್‌ನಲ್ಲಿ ಆರ್ ಸಿ ಬಿ 22 ಆಟಗಾರರ ತಂಡವನ್ನು ರೂಪಿಸಿತ್ತು. ಹೀಗಾಗಿ ಈ ಬಾರಿ ಕೂಡ ಕೆಲ ಆಟಗಾರರು ಅವಕಾಶ ವಂಚಿತರಾದರೂ ಅಚ್ಚರಿಪಡಬೇಕಿಲ್ಲ.
Published On - 7:55 am, Tue, 2 December 25
